ವಾಷಿಂಗ್ಟನ್: ಇರಾನ್ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಉತ್ತರಾಧಿಕಾರಿಯಾಗಿ ಅವರ ಪುತ್ರ ಮೊಜ್ತಾಬಾ ಖಮೇನಿ (57) ಆಯ್ಕೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಳ್ಳಿಹಾಕಿದ್ದಾರೆ.

‘ಜನರಿಂದ ಚುನಾಯಿತರಾಗದ ಅಥವಾ ಸರ್ಕಾರದ ಯಾವುದೇ ಹುದ್ದೆಯಲ್ಲಿ ಇಲ್ಲದ ಮೊಜ್ತಾಬಾ, ಇರಾನ್ನ ಪರಮೋಚ್ಚ ನಾಯಕ ಆಗಲು ಸೂಕ್ತ ವ್ಯಕ್ತಿ ಅಲ್ಲ’ ಎಂದು ಟ್ರಂಪ್ ಹೇಳಿದ್ದಾರೆ.

‘ಇರಾನ್ನಲ್ಲಿ ಶಾಂತಿ ಮತ್ತು ಸಾಮರಸ್ಯ ತರುವ ವ್ಯಕ್ತಿ ಬೇಕಾಗಿದ್ದಾರೆ. ಅಂತವರನ್ನು ಅಮೆರಿಕ ಆಯ್ಕೆ ಮಾಡಲಿದೆ. ವೆನೆಜುವೆಲಾದ ಅಧ್ಯಕ್ಷ ನಿಕೊಲಸ್ ಮಡೂರೊ ಅವರನ್ನು ವಶಕ್ಕೆ ಪಡೆದ ನಂತರ, ಅಲ್ಲಿನ ಹಂಗಾಮಿ ಅಧ್ಯಕ್ಷರಾಗಿ ಡೆಲ್ಸಿ ರಾಡ್ರಿಗಸ್ ಅವರನ್ನು ನೇಮಿಸಿದಂತೆ, ಇರಾನ್ ನಾಯಕನ ಆಯ್ಕೆಯಲ್ಲೂ ನನ್ನ ಪಾತ್ರ ಇರುತ್ತದೆ’ ಎಂದು ಟ್ರಂಪ್ ಹೇಳಿದ್ದಾರೆ.

ಸದ್ಯ ಇರಾನ್ಗೆ ಅಮೆರಿಕದ ಪಡೆಗಳನ್ನು ಕಳುಹಿಸುವುದು ಸಮಯ ವ್ಯರ್ಥ ಮಾಡಿದಂತೆ. ಆದರೆ, ಇರಾನ್ನ ಹೊಸ ನಾಯಕನ ಆಯ್ಕೆಯಲ್ಲಿ ನನ್ನ ಪಾತ್ರ ಇರುತ್ತದೆ.
– ಡೊನಾಲ್ಡ್ ಟ್ರಂಪ್, ಅಮೆರಿಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.