ವಾಷಿಂಗ್ಟನ್/ಇಸ್ಲಾಮಾಬಾದ್: ಇರಾನ್ ನಮಗೆ ಯಾವಾಗ ಬೇಕಾದರೂ ಕರೆ ಮಾಡಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇರಾನ್ ಜೊತೆಗಿನ ಯುದ್ಧವನ್ನು ಅಂತ್ಯಗೊಳಿಸುವ ಕುರಿತು ಚರ್ಚಿಸಲು ಪಾಕಿಸ್ತಾನಕ್ಕೆ ತೆರಳಬೇಕಿದ್ದ ತನ್ನ ಹಿರಿಯ ಅಧಿಕಾರಿಗಳ ಭೇಟಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಠಾತ್ ರದ್ದುಗೊಳಿಸಿದ್ದಾರೆ.

ಈ ನಿರ್ಧಾರದ ಬೆನ್ನಲ್ಲೇ ಇರಾನ್ ವಿರುದ್ಧ ವಾಗ್ದಾಳಿ ನಡೆಸಿರುವ ಟ್ರಂಪ್, ನಮ್ಮ ಬಳಿ ಎಲ್ಲಾ ಅಧಿಕಾರವಿದೆ ಎಂದು ಗುಡುಗಿದ್ದು ಇರಾನ್ ನಮಗೆ ಯಾವಾಗ ಬೇಕಾದರೂ ಕರೆ ಮಾಡಬಹುದು ಎಂದು ಹೇಳಿದ್ದಾರೆ.

ಅಮೆರಿಕದ ಪ್ರತಿನಿಧಿಗಳು ವಿಮಾನ ಏರಲು ಸಿದ್ಧವಾಗಿದ್ದಾಗಲೇ ಟ್ರಂಪ್ ಈ ಸೂಚನೆ ನೀಡಿದ್ದಾರೆ. ಪ್ರಯೋಜನವಿಲ್ಲದ ಮಾತುಕತೆಗಾಗಿ 18 ಗಂಟೆಗಳ ಕಾಲ ವಿಮಾನದಲ್ಲಿ ಪ್ರಯಾಣಿಸುವ ಅಗತ್ಯವಿಲ್ಲ, ನಾವು ಇನ್ನು ಮಾಡಬೇಕಾದ ಕೆಲಸಗಳು ಸಾಕಷ್ಟಿವೆ. ಇರಾನ್ ನಾಯಕತ್ವದಲ್ಲಿ ಭಾರಿ ಗೊಂದಲ ಮತ್ತು ಒಳಜಗಳ ನಡೆಯುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.

ಮಾತುಕತೆ ರದ್ದಾದ ಮಾತ್ರಕ್ಕೆ ಯುದ್ಧ ಮತ್ತೆ ಆರಂಭವಾಗುತ್ತದೆ ಎಂದರ್ಥವಲ್ಲ, ಈ ಬಗ್ಗೆ ನಾವಿನ್ನೂ ಯೋಚಿಸಿಲ್ಲ. ಇರಾನ್ಗೆ ಮಾತುಕತೆ ನಡೆಸಬೇಕಿದ್ದರೆ ಅವರೇ ನಮಗೆ ಯಾವಾಗ ಬೇಕಾದರೂ ಕರೆ ಮಾಡಬಹುದು ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಮತ್ತೊಂದೆಡೆ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಸ್ವದೇಶಕ್ಕೆ ವಾಪಾಸಾಗಿದ್ದಾರೆ.

ಯುದ್ಧವನ್ನು ಶಾಶ್ವತವಾಗಿ ಕೊನೆಗೊಳಿಸುವ ಕುರಿತು ನಾವು ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ಆದರೆ ಅಮೆರಿಕ ರಾಜತಾಂತ್ರಿಕತೆಯು ಈ ವಿಷಯದಲ್ಲಿ ಎಷ್ಟು ಗಂಭೀರವಾಗಿದೆ ಎಂಬುದು ಸಾಬೀತಾಗಬೇಕಿದೆ ಎಂದು ಅವರು ಹೇಳಿದ್ದಾರೆ.

ಇರಾನ್ ಮತ್ತು ಅಮೆರಿಕ ನಡುವಿನ ಸಂಧಾನಕ್ಕೆ ವೇದಿಕೆಯಾಗಿದ್ದ ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ಕಳೆದ ಒಂದು ವಾರದಿಂದ ಲಾಕ್ಡೌನ್ ವಾತಾವರಣವಿತ್ತು. ಅಮೆರಿಕ ನಿಯೋಗದ ಭೇಟಿ ರದ್ದಾದ ಕಾರಣ ಮತ್ತು ಇರಾನ್ ಪ್ರತಿನಿಧಿಗಳು ನಿರ್ಗಮಿಸಿದ ಹಿನ್ನೆಲೆಯಲ್ಲಿ, ಅಲ್ಲಿನ ಅಧಿಕಾರಿಗಳು ಲಾಕ್ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಿದ್ದಾರೆ. ಇದರಿಂದಾಗಿ ಇಸ್ಲಾಮಾಬಾದ್ನ ಜನತೆ ಸದ್ಯಕ್ಕೆ ನಿಟ್ಟುಸಿರು ಬಿಡುವಂತಾಗಿದೆ.
.ಯುದ್ಧಕ್ಕೆ ಲಕ್ಷಾಂತರ ಕೋಟಿ ವೆಚ್ಚ: ಇರಾನ್ ಕೆಣಕಿ ಕಷ್ಟಕ್ಕೆ ಸಿಲುಕಿದ ಅಮೆರಿಕ.ಹೊರ್ಮುಜ್ನಲ್ಲಿ ಬಾಂಬ್ ಇಡುವ ಇರಾನ್ ಹಡಗುಗಳ ಮೇಲೆ ಗುಂಡು ಹಾರಿಸಿ ಕೊಲ್ಲಿ:ಟ್ರಂಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.