ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೊನಾಲ್ಡ್‌ ಟ್ರಂಪ್‌ ಕೇಸ್: ಮಾರ್ಕ್ ಮೆಡೋಸ್ ಕೋರ್ಟ್‌ಗೆ ಶರಣು

Published 24 ಆಗಸ್ಟ್ 2023, 20:54 IST
Last Updated 24 ಆಗಸ್ಟ್ 2023, 20:54 IST
ಅಕ್ಷರ ಗಾತ್ರ

ಅಟ್ಲಾಂಟಾ (ಎಪಿ/ಪಿಟಿಐ): 2020ರ ಅಧ್ಯಕ್ಷೀಯ ಚುನಾವಣಾ ಫಲಿತಾಂಶವನ್ನು ಬುಡಮೇಲು ಮಾಡಲು ಯತ್ನಿಸಿದ್ದರು ಎಂಬ ಆರೋಪ ಪ್ರಕರಣದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವಧಿಯಲ್ಲಿ ಶ್ವೇತಭವನದ ಮುಖ್ಯ ಆಡಳಿತಾಧಿಕಾರಿಯಾಗಿದ್ದ ಮಾರ್ಕ್ ಮೆಡೋಸ್ ಅಟ್ಲಾಂಟಾದಲ್ಲಿ ಕೋರ್ಟ್‌ಗೆ ಗುರುವಾರ ಶರಣಾದರು ಎಂದು ವರದಿಗಳು ಹೇಳಿವೆ.

ಇದೇ ಪ್ರಕರಣದಲ್ಲಿ ಡೊನಾಲ್ಡ್ ಟ್ರಂಪ್ ಕೂಡ ಜಾರ್ಜಿಯಾದ ಕಾರಾಗೃಹ ಅಧಿಕಾರಿಗಳ ಮುಂದೆ ಶರಣಾಗುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ. 

ಕಾನೂನು ತೊಡಕುಗಳ ನಡುವೆಯೂ 2024ರ ಅಧ್ಯಕ್ಷೀಯ ಚುನಾವಣೆಗಾಗಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಟ್ರಂಪ್‌ ಶರಣಾದರೆ, ಅಮೆರಿಕ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಾಜಿ ಅಧ್ಯಕ್ಷರೊಬ್ಬರ ಬಂಧನವಾದಂತಾಗಲಿದೆ. 

ಟ್ರಂಪ್‌ ಮಾಜಿ ಅಧ್ಯಕ್ಷರಾದ ಬಳಿಕ ಕಳೆದ ಮಾರ್ಚ್‌ ತಿಂಗಳಿನಿಂದ ಅವರ ವಿರುದ್ದ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣಗಳಲ್ಲಿ ಇದು ನಾಲ್ಕನೆಯದಾಗಿದೆ. ಫ್ಲಾರಿಡಾ, ವಾಷಿಂಗ್ಟನ್‌ನಲ್ಲಿಯೂ ಟ್ರಂಪ್‌ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT