ವಾಷಿಂಗ್ಟನ್: ಇನ್ನಷ್ಟು ಸಮಯ ತೆಗೆದುಕೊಂಡರೆ ಅಮೆರಿಕವು ಸುಲಭವಾಗಿ ಹೊರ್ಮುಜ್ ಜಲಸಂಧಿಯನ್ನು ತೆರೆಯಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ.

ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರುತ್ನಲ್ಲಿ ಈ ಕುರಿತಂತೆ ಪೋಸ್ಟ್ ಹಂಚಿಕೊಂಡಿರುವ ಅವರು, ‘ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಂಡು ನಾವು ಸುಲಭವಾಗಿ ಹೊರ್ಮುಜ್ ಜಲಸಂಧಿಯನ್ನು ತೆರೆಯಬಹುದು. ತೈಲ ಪಡೆದುಕೊಂಡು ಅದೃಷ್ಟಶಾಲಿಗಳಾಗಬಹುದು’ ಎಂದು ಹೇಳಿದ್ದಾರೆ.

ಗುರುವಾರ ಇರಾನ್ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಪ್ರಮುಖ ಹೆದ್ದಾರಿಯ ಸೇತುವೆ ಧ್ವಂಸವಾಗಿದೆ. ಇರಾನ್ನಲ್ಲಿ ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಹೆಚ್ಚಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ ಬೆನ್ನಲ್ಲೇ ಈ ದಾಳಿ ನಡೆದಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್, ಕುವೈತ್ನ ನೀರಿನ ಸಂಸ್ಕರಣಾ ಘಟಕಗಳ ಮೇಲೆ ದಾಳಿ ನಡೆಸಿದೆ.

ಇರಾನ್ ಮತ್ತು ನೆರೆಯ ಗಲ್ಫ್ ರಾಷ್ಟ್ರಗಳ ಜನಸಂಖ್ಯೆಗೆ ಅತ್ಯಗತ್ಯವಾದ ಸಾರಿಗೆ, ವಿದ್ಯುತ್ ಮತ್ತು ನೀರಿನ ಸೌಲಭ್ಯಗಳ ಮೇಲಿನ ದಾಳಿಗಳು ಯುದ್ಧದ ತೀವ್ರತೆ ಇನ್ನಷ್ಟು ಹೆಚ್ಚಾಗುವ ಅಪಾಯವನ್ನು ತಂದಿಟ್ಟಿವೆ.

ಯುದ್ಧದಲ್ಲಿ ಈಗಾಗಲೇ ಸಾವಿರಾರು ಜನರ ಹತ್ಯೆಯಾಗಿದ್ದು, ವಿಶ್ವ ಆರ್ಥಿಕತೆಗೆ ಶಾಶ್ವತ ಹಾನಿಯ ಸೂಚನೆ ಕೊಟ್ಟಿದೆ.

ಈ ನಡುವೆ ದಾಳಿ ನಡೆಸುತ್ತಿದ್ದ ಅಮೆರಿಕ ಫೈಟರ್ ಜೆಟ್ ಅನ್ನು ಇರಾನ್ನ ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದ್ದು, ಪೈಲಟ್ಗಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.

ಆದರೆ, ಈ ಕುರಿತಂತೆ ಅಮೆರಿಕದಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.
.ಹೊರ್ಮುಜ್ ಜಲಸಂಧಿ ಮೇಲ್ವಿಚಾರಣೆಗೆ ಒಮಾನ್ನೊಂದಿಗೆ ಮಾತುಕತೆ: ಇರಾನ್ ಹೇಳಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.