ಇಸ್ಲಾಮಾಬಾದ್: ಹೊರ್ಮುಜ್ ಜಲಸಂಧಿಯಲ್ಲಿ ಅಮೆರಿಕ ಆರಂಭಿಸಿದ್ದ ‘ಪ್ರಾಜೆಕ್ಟ್ ಫ್ರೀಡಂ’ ಅನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಿದ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವನ್ನು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಸ್ವಾಗತಿಸಿದ್ದು, ಟ್ರಂಪ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಪಾಕಿಸ್ತಾನ ಮತ್ತು ಇತರ ದೇಶಗಳ ವಿನಂತಿಯ ಮೇರೆಗೆ ‘ಪ್ರಾಜೆಕ್ಟ್ ಫ್ರೀಡಂ’ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಿದ್ದೇವೆ ಎಂದು ಟ್ರಂಪ್ ಹೇಳಿದ್ದರು.

ಡೊನಾಲ್ಡ್ ಟ್ರಂಪ್ ಅವರ ಧೈರ್ಯಶಾಲಿ ನಾಯಕತ್ವ ಮತ್ತು ಸರಿಯಾದ ಸಮಯಕ್ಕೆ ಹೊರ್ಮುಜ್ ಜಲಸಂಧಿಯಲ್ಲಿ ‘ಪ್ರಾಜೆಕ್ಟ್ ಫ್ರೀಡಂ’ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಕ್ಕೆ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಶೆಹಬಾಜ್ ಷರೀಫ್, ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪಾಕಿಸ್ತಾನ, ಸೌದಿ ಅರೇಬಿಯಾ ಸೇರಿದಂತೆ ಶಾಂತಿ ಬಯಸುವ ದೇಶಗಳು ಮಾಡಿದ ಮನವಿಗೆ ಟ್ರಂಪ್ ಅವರು ಸ್ಪಂದಿಸಿದ್ದಾರೆ. ಇದು ಸಂಘರ್ಷದ ಸಂದರ್ಭದಲ್ಲಿ, ಪ್ರಾದೇಶಿಕ ಶಾಂತಿಗೆ ಸಹಾಯವಾಗಲಿದೆ ಎಂದು ಹೇಳಿದ್ದಾರೆ.

ಪಶ್ಚಿಮ ಏಷ್ಯಾ ಸಂಘರ್ಷವನ್ನು ಅಂತ್ಯಗೊಳಿಸುವ ಮತ್ತು ಮಾತುಕತೆಯ ಮೂಲಕ ಶಾಂತಿ ಸ್ಥಾಪಿಸುವ ಎಲ್ಲಾ ಕೆಲಸಗಳನ್ನು ಪಾಕಿಸ್ತಾನ ಮಾಡುತ್ತಿದೆ. ನಮ್ಮ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಮಾತುಕತೆಯು ಯಶಸ್ವಿಯಾಗುವ ಸಾಧ್ಯತೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೋಮವಾರ ಅಮೆರಿಕವು, ಇರಾನ್ನ ಹಿಡಿತದಲ್ಲಿರುವ ಹೊರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಹಡಗುಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ‘ಪ್ರಾಜೆಕ್ಟ್ ಫ್ರೀಡಂ’ಕಾರ್ಯಾಚರಣೆ ಆರಂಭಿಸಿತ್ತು. ಇದರಲ್ಲಿ ಕ್ಷಿಪಣಿ ವಿಧ್ವಂಸಕ ನೌಕೆಗಳು, 100ಕ್ಕೂ ಹೆಚ್ಚು ವಿಮಾನಗಳು, ಮಾನವರಹಿತ ಡ್ರೋನ್ ಪ್ಲಾಟ್ಫಾರ್ಮ್ಗಳು ಮತ್ತು 15,000 ಸೈನಿಕರನ್ನು ನಿಯೋಜಿಸಲಿದೆ. ಕಾರ್ಯಾಚರಣೆಯ ವೇಳೆ ಇರಾನ್ನ 6 ಹಡಗು, ಡ್ರೋನ್ಗಳು ಧ್ವಂಸವಾಗಿವೆ ಎಂದು ಅದು ಹೇಳಿಕೊಂಡಿತ್ತು.
.‘ಪ್ರಾಜೆಕ್ಟ್ ಫ್ರೀಡಂ’ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ: ಟ್ರಂಪ್ ಘೋಷಣೆ.ಹೊರ್ಮುಜ್ನಲ್ಲಿ ಸಿಲುಕಿರುವ ಹಡಗುಗಳ ಹೊರತರಲು ‘ಪ್ರಾಜೆಕ್ಟ್ ಫ್ರೀಡಂ’: ಟ್ರಂಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.