ವಾಷಿಂಗ್ಟನ್: ಕತಾರ್ ಅನಿಲ ಘಟಕದ ಮೇಲೆ ಮಗದೊಮ್ಮೆ ದಾಳಿ ನಡೆಸಿದರೆ ಇರಾನ್ನ ಪ್ರಮುಖ ಅನಿಲ ಘಟಕವನ್ನು ಸ್ಫೋಟಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಒಡ್ಡಿದ್ದಾರೆ.

ಇರಾನ್ನ ಸೌಥ್ ಪಾರ್ಸ್ ಅನಿಲ ಘಟಕದ ಮೇಲೆ ಇಸ್ರೇಲ್ ದಾಳಿ ನಡೆಸಿತ್ತು. ಆದರೆ ಈ ಕುರಿತು ತಮಗೆ ಮಾಹಿತಿ ಇರಲಿಲ್ಲ ಎಂದು ಟ್ರಂಪ್ ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಟ್ರುಥ್ನಲ್ಲಿ ಈ ಕುರಿತು ಬರೆದುಕೊಂಡಿರುವ ಟ್ರಂಪ್, ಸೌಥ್ ಪಾರ್ಸ್ ಮೇಲೆ ಇಸ್ರೇಲ್ ದಾಳಿಯನ್ನು ದೃಢೀಕರಿಸಿದರು. ಆದರೆ ಅಮೆರಿಕಕ್ಕೆ ದಾಳಿಯ ಬಗ್ಗೆ ಮಾಹಿತಿ ಇರಲಿಲ್ಲ ಎಂದಿದ್ದಾರೆ.

ಇದಕ್ಕೆ ಪ್ರತಿಯಾಗಿ ಕತಾರ್ನ ಪ್ರಮುಖ ರಾಸ್ ಲಫಾನ್ ಅನಿಲ ಘಟಕದ ಮೇಲೆ ಇರಾನ್ ದಾಳಿ ನಡೆಸಿತ್ತು.
.ನಮಗೆ ಯಾರ ಸಹಾಯವೂ ಬೇಕಿಲ್ಲ; ನ್ಯಾಟೊ ಮಿತ್ರಪಡೆಗಳ ವಿರುದ್ಧ ಟ್ರಂಪ್ ಸಿಡಿಮಿಡಿ.ಹೊರ್ಮುಜ್ ಜಲಸಂಧಿ ನಿಯಂತ್ರಣಕ್ಕೆ ಪಡೆಯಲು ಹೆಚ್ಚು ಸಮಯ ಬೇಕಿಲ್ಲ: ಟ್ರಂಪ್.
'ಮಧ್ಯಪ್ರಾಚ್ಯದ ಘಟನೆಗಳಿಂದಾಗಿ ಆಕ್ರೋಶಗೊಂಡ ಇಸ್ರೇಲ್, ಇರಾನ್ನ ಸೌಥ್ ಪಾರ್ಸ್ ಗ್ಯಾಸ್ ಫೀಲ್ಡ್ ಮೇಲೆ ದಾಳಿ ನಡೆಸಿತು. ಇದರಿಂದಾಗಿ ಸಣ್ಣ ಪ್ರಮಾಣದ ಹಾನಿಯಾಗಿದೆ. ಈ ನಿರ್ದಿಷ್ಟ ದಾಳಿ ಬಗ್ಗೆ ಅಮೆರಿಕಕ್ಕೆ ಮಾಹಿತಿ ಇರಲಿಲ್ಲ. ಅಲ್ಲದೆ ಇದರಲ್ಲಿ ಕತಾರ್ ದೇಶವು ಭಾಗಿಯಾಗಿಲ್ಲ' ಎಂದು ಟ್ರಂಪ್ ಹೇಳಿದ್ದಾರೆ.

'ಆದರೆ ದುರದೃಷ್ಟವಶಾತ್ ಕತಾರ್ನ ಅನಿಲ ಘಟಕದ ಮೇಲೆ ಇರಾನ್ ದಾಳಿ ನಡೆಸಿದೆ. ಕತಾರ್ ಅನಿಲ ಸೌಲಭ್ಯದ ಮೇಲೆ ಮತ್ತೊಮ್ಮೆ ನಡೆಸದ ಹೊರತಾಗಿ ಇರಾನ್ನ ಸೌಥ್ ಪಾರ್ತ್ ಅನಿಲ ಘಟಕದ ಮೇಲೆ ಇಸ್ರೇಲ್ ದಾಳಿ ನಡೆಸುವುದಿಲ್ಲ ಎಂದು ನಾನು ಹೇಳಲು ಬಯಸುತ್ತೇನೆ'. ಹಾಗೊಂದು ವೇಳೆ ದಾಳಿಯಾದರೆ ಇರಾನ್ನ ಸೌಥ್ ಪಾರ್ಸ್ ಅನಿಲ ಸೌಲಭ್ಯವನ್ನು ಸ್ಫೋಟಿಸುವುದಾಗಿ ಟ್ರಂಪ್ ಬೆದರಿಕೆ ಒಡ್ಡಿದ್ದಾರೆ.

'ಇರಾನ್ ಅನಿಲ ಸೌಲಭ್ಯದ ಮೇಲೆ ಹಿಂದೆಂದೂ ಕಂಡಿರದ ರೀತಿಯಲ್ಲಿ ದಾಳಿಯಾಗಲಿದೆ. ಇದು ಭವಿಷ್ಯದಲ್ಲೂ ಕೆಟ್ಟ ಪರಿಣಾಮ ಬೀರುವುದರಿಂದ ಈ ವಿನಾಶವನ್ನು ನಾನು ಅಧಿಕೃತಗೊಳಿಸುವುದಿಲ್ಲ. ಆದರೆ ಕತಾರ್ನ ಎಲ್ಎನ್ಜಿ ಮೇಲೆ ಮತ್ತೊಮ್ಮೆ ದಾಳಿಯಾದರೆ ಅದನ್ನು ಮಾಡಲು ನಾನು ಹಿಂಜರಿಯುವುದಿಲ್ಲ' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.