ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧ ನಡೆಸುತ್ತಿರುವ ಯುದ್ಧಕ್ಕೆ ತಡೆ ಹಾಕುವ ಡೆಮಾಕ್ರಟಿಕ್ ಪಕ್ಷದ ಪ್ರಯತ್ನವನ್ನು ರಿಪಬ್ಲಿಕನ್ ಪಕ್ಷದ ಸಂಸದರು ತಿರಸ್ಕರಿಸಿದ್ದಾರೆ.

‘ಯುದ್ಧ ಅಧಿಕಾರ’ವನ್ನು ಅಮೆರಿಕದ ಅಧ್ಯಕ್ಷರಿಗೆ ಬಿಟ್ಟುಕೊಡುವಂತೆ ರಿಪಬ್ಲಿಕನ್ ಸಂಸದರು ಮತ ಚಲಾಯಿಸಿದ್ದಾರೆ.

ಯುದ್ಧ ಕೊನೆಗೊಳಿಸಿ, ಪಶ್ಚಿಮ ಏಷ್ಯಾದಿಂದ ಅಮೆರಿಕದ ಪಡೆಯನ್ನು ವಾಪಸ್ ಕರೆಯಿಸಿಕೊಳ್ಳುವ ನಿರ್ಣಯಕ್ಕೆ ವಿರುದ್ಧವಾಗಿ ಹೆಚ್ಚಿನ ಮತಗಳು ಚಲಾವಣೆಗೊಂಡಿವೆ.

‘ಅಧ್ಯಕ್ಷರಿಗೆ ಇರುವ ಯುದ್ಧ ಅಧಿಕಾರ’ ವಿಷಯದಲ್ಲಿ ಟ್ರಂಪ್ ವಿರುದ್ಧ ಈ ವರ್ಷ ಮಂಡನೆ ಆಗುತ್ತಿರುವ ನಾಲ್ಕನೆಯ ನಿರ್ಣಯ ಇದಾಗಿದೆ. ಈ ಬಾರಿ ಡೆಮಾಕ್ರಟಿಕ್ ಪಕ್ಷದ ಪರವಾಗಿ 47 ಹಾಗೂ ರಿಪಬ್ಲಿಕನ್ ಪರವಾಗಿ 52 ಮತಗಳು ಚಲಾವಣೆಗೊಂಡಿವೆ.

ಯುದ್ಧ ಅಧಿಕಾರವನ್ನು ಅಧ್ಯಕ್ಷರಿಗೆ ಬಿಟ್ಟುಕೊಡಬೇಕು ಎನ್ನುವುದರ ಪರವಾಗಿ ರಿಪಬ್ಲಿಕನ್ ಸಂಸದರು ಮತ ಚಲಾಯಿಸಿದ್ದರೂ, ಹೆಚ್ಚಿನ ಸಂಸದರು ಯುದ್ಧ ಆದಷ್ಟು ಬೇಗ ಕೊನೆಗೊಳ್ಳಬೇಕು ಎಂಬ ಅಭಿಪ್ರಾಯ ಹೊಂದಿದ್ದಾರೆ.

‘ಯುದ್ಧದ ಅಧಿಕಾರವನ್ನು ಅಮೆರಿಕದ ಅಧ್ಯಕ್ಷರಿಗೆ ನೀಡುವುದು ಕಾನೂನುಬಾಹಿರ ಮತ್ತು ನ್ಯಾಯಸಮ್ಮತ ಅಲ್ಲ’ ಎಂದು ಡೆಮಾಕ್ರಟಿಕ್ ಪಕ್ಷದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ಯುದ್ಧದ ಸಂದರ್ಭದಲ್ಲಿ ಟ್ರಂಪ್ ನಾಯಕತ್ವದಲ್ಲಿ ಹೆಚ್ಚಿನ ವಿಶ್ವಾಸ ಹೊಂದಿರುವುದಾಗಿ ರಿಪಬ್ಲಿಕನ್ ಸಂಸದರು ಹೇಳಿದ್ದಾರೆ.

‘ಪಶ್ಚಿಮ ಏಷ್ಯಾ ಸಂಘರ್ಷದ ವಿಷಯದಲ್ಲಿ ಗಡುವಿನ ನಂತರ ಈಗ ಅಂತಿಮ ನಿರ್ಧಾರ ಕೈಗೊಳ್ಳುವ ಸಮಯ ಹತ್ತಿರ ಬಂದಿದೆ’ ಎಂದು ರಿಪಬ್ಲಿಕನ್ ಸಂಸದ ಥಾಮ್ ಟೆಲ್ಲಿಸ್ ಹೇಳಿದ್ದಾರೆ.

ಲೆಬನಾನ್ ಜತೆಗೆ ನಡೆಯುತ್ತಿರುವ ಮಾತುಕತೆಯು ಹಿಜ್ಬುಲ್ಲಾ ಬಂಡುಕೋರರ ನಿಶಸ್ತ್ರೀಕರಣ ಮತ್ತು ಸುಸ್ಥಿರ ಶಾಂತಿ ಮರುಸ್ಥಾಪನೆ ಎಂಬ ಎರಡು ಗುರಿಗಳನ್ನು ಒಳಗೊಂಡಿದೆ
– ಬೆಂಜಮಿನ್ ನೆತನ್ಯಾಹು ಇಸ್ರೇಲ್ ಪ್ರಧಾನಿ

ಮೂರು ದಶಕಗಳ ಬಳಿಕ ಮಾತುಕತೆ

ಮೂರು ದಶಕಗಳ ಬಳಿಕ ಮೊದಲ ಬಾರಿಗೆ ಇಸ್ರೇಲ್ ಪ್ರಧಾನಿ ಮತ್ತು ಲೆಬನಾನ್ ಅಧ್ಯಕ್ಷರ ನಡುವೆ ಮಾತುಕತೆ ನಡೆದಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಜತೆಗೆ ಮಾತುಕತೆಗೆ ನಡೆಸಿದ್ದಾರೆ ಎಂದು ಇಸ್ರೇಲ್ನ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವೆ ಗಿಲಾ ಗ್ಯಾಮ್ಲಿಯೆಲ್ ಹೇಳಿದ್ದಾರೆ. ಆದರೆ ಲೆಬನಾನ್ ಅಧ್ಯಕ್ಷರ ಕಚೇರಿ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ.

‘ಹೊರ್ಮುಜ್ ಮುಕ್ತಗೊಳಿಸಿ’

ಹೊರ್ಮುಜ್ ಜಲಸಂಧಿ ವಿಷಯದಲ್ಲಿ ಇರಾನ್ ಸಾರ್ವಭೌಮತೆ ಭದ್ರತೆ ಮತ್ತು ಕಾನೂನುಬದ್ಧ ಹಕ್ಕುಗಳನ್ನು ಗೌರವಿಸುವುದರ ಜತೆಯಲ್ಲೇ ಈ ಮಾರ್ಗದಲ್ಲಿ ಎಲ್ಲ ದೇಶಗಳಿಗೆ ಸಂಚಾರ ಸ್ವಾತಂತ್ರ್ಯ ಮತ್ತು ಸುರಕ್ಷತೆಯನ್ನು ಖಾತರಿಪಡಿಸಬೇಕು’ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರಿಗೆ ದೂರವಾಣಿ ಕರೆ ಮೂಲಕ ಮನವಿ ಮಾಡಿದ್ದಾರೆ.

ಲೆಬನಾನ್ ಮೇಲೆ ಇಸ್ರೇಲ್ ದಾಳಿ

ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿ ಗುರುವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಲೆಬನಾನ್ನ ನಾಲ್ವರು ರಕ್ಷಣಾ ಕಾರ್ಯಕರ್ತರು ಮೃತಪಟ್ಟಿದ್ದಾರೆ. ಆರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಉಭಯ ದೇಶಗಳು ವಾಷಿಂಗ್ಟನ್ನಲ್ಲಿ ಐತಿಹಾಸಿಕ ಮಾತುಕತೆ ನಡೆಸಿದ ಬೆನ್ನಲ್ಲೇ ದಾಳಿ ನಡೆದಿದೆ. ದಾಳಿ ಬಗ್ಗೆ ಪರಿಶೀಲಿಸುವುದಾಗಿ ಇಸ್ರೇಲ್ ಹೇಳಿದೆ. ‘ಇದು ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ಹೇಳಿದೆ.

ಇಸ್ರೇಲ್ ಅಮೆರಿಕ ಗುರಿ ಒಂದೇ; ನೆತನ್ಯಾಹು

‘ಇಸ್ರೇಲ್ ಮತ್ತು ಅಮೆರಿಕದ ಗುರಿಗಳು ಒಂದೇ ಯಾವುದೇ ಸನ್ನಿವೇಶಕ್ಕೂ ಸಿದ್ಧ’ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ‘ಇರಾನ್ ಯುರೇನಿಯಂ ಸಮೃದ್ಧೀಕರಣವನ್ನು ತಡೆಯುವುದು ಮತ್ತು ಕಡಲ ಮಾರ್ಗವನ್ನು ಮುಕ್ತಗೊಳಿಸುವುದು ಅಮೆರಿಕ ಮತ್ತು ಇಸ್ರೇಲ್ನ ಪ್ರಮುಖ ಗುರಿಗಳಾಗಿವೆ’ ಎಂದು ನೆತನ್ಯಾಹು ಪುನರುಚ್ಚರಿಸಿದ್ದಾರೆ.

‘ಸಮೃದ್ಧೀಕರಿಸಿದ ಯುರೇನಿಯಂ ಅನ್ನು ಇರಾನ್ನಿಂದ ಪೂರ್ಣವಾಗಿ ತೆಗೆದುಹಾಕುತ್ತೇವೆ ಹಾಗೂ ಆ ದೇಶದ ಯುರೇನಿಯಂ ಸಮೃದ್ಧೀಕರಣ ಸಾಮರ್ಥ್ಯವನ್ನು ನಾಶಪಡಿಸುತ್ತೇವೆ. ಆದರೆ ಇದು ಹೇಗೆ ಎನ್ನುವುದನ್ನು ಇಷ್ಟು ಬೇಗ ಹೇಳಲು ಆಗುವುದಿಲ್ಲ’ ಎಂದು ಅವರು ಹೇಳಿದ್ದಾರೆ. ‘ದಿಗ್ಬಂಧನ ತೆರವುಗೊಳಿಸದಿದ್ದರೆ ಅಡ್ಡಿ’ ದುಬೈ: ಅಮೆರಿಕದ ನೌಕಾ ದಿಗ್ಬಂಧನಕ್ಕೆ ಪ್ರತಿಯಾಗಿ ಪಶ್ಚಿಮ ಏಷ್ಯಾ ವಲಯದ ವ್ಯಾಪಾರಕ್ಕೆ ಅಡ್ಡಿಪಡಿಸುವುದಾಗಿ ಇರಾನ್ ಬೆದರಿಕೆ ಒಡ್ಡಿದೆ.

‘ಇರಾನ್ ಬಂದರುಗಳ ಮೇಲೆ ಅಮೆರಿಕ ಹೇರಿರುವ ದಿಗ್ಬಂಧನ ತೆರವುಗೊಳಿದಿದ್ದರೆ ಕೊಲ್ಲಿ ದೇಶಗಳ ವ್ಯಾಪಾರಕ್ಕೆ ಅಡ್ಡಿಪಡಿಸುವುದಾಗಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್ (ಐಆರ್ಜಿಸಿ) ಹೇಳಿದೆ. ಕೊಲ್ಲಿ ದೇಶಗಳ ವ್ಯಾಪಾರಕ್ಕೆ ಅಡ್ಡಿಪಡಿಸಿದರೆ ‘ಅಮರಿಕವು ಇರಾನ್ನ ಆರ್ಥಿಕ ನೋವನ್ನು ಇನ್ನಷ್ಟು ಹೆಚ್ಚಿಸಲಿದೆ’ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.