ವಾಷಿಂಗ್ಟನ್: ಇರಾನ್ ಪರಮಾಣು ಮಹತ್ವಾಕಾಂಕ್ಷೆಗಳನ್ನು ಶಾಶ್ವತವಾಗಿ ತ್ಯಜಿಸಿ ಮುನ್ನಡೆಯದಿದ್ದರೆ ನಾವು (ಅಮೆರಿಕ) ದುಃಸ್ವಪ್ನದಂತೆ ಕಾಡುತ್ತೇವೆ. ಅಂತಹ ಕೆಟ್ಟ ಪರಿಸ್ಥಿತಿಯನ್ನು ಇರಾನ್ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಎಚ್ಚರಿಕೆ ನೀಡಿದ್ದಾರೆ.

'ಸಂಘರ್ಷವನ್ನು ಕೊನೆಗೊಳಿಸಲು ಇರಾನ್ ಒಪ್ಪಿಕೊಳ್ಳುತ್ತದೋ ಇಲ್ಲವೋ ತಿಳಿದಿಲ್ಲ. ಒಪ್ಪಂದ ಮಾಡಿಕೊಳ್ಳಲು ನಾವು ಸಿದ್ಧರಿದ್ದೇವೆಯೋ ಇಲ್ಲವೋ.. ಎಂಬುದೂ ಗೊತ್ತಿಲ್ಲ' ಎಂದ ಟ್ರಂಪ್, ಕೆಲ ಹೊತ್ತಿನಲ್ಲೇ, 'ಇರಾನ್ ಒಪ್ಪಂದಕ್ಕೆ ಬರದಿದ್ದರೆ ದಾಳಿಯನ್ನು ಮುಂದುವರಿಸುತ್ತೇವೆ' ಎಂದಿದ್ದಾರೆ. ಆ ಮೂಲಕ, ಗೊಂದಲ ಸೃಷ್ಟಿಸಿದ್ದಾರೆ.
.ಏ.1ರಿಂದ ರಾಜ್ಯದಲ್ಲಿ ಟೋಲ್ ದರ ಏರಿಕೆ: ಕಾರುಗಳಿಗೆ ₹ 5ರಿಂದ ₹10 ಹೆಚ್ಚಳ .ಮುಂಜಾನೆವರೆಗೆ ವಿಧಾನಸಭೆ ಅಧಿವೇಶನ | ಸಂಸದೀಯ ಇತಿಹಾಸದಲ್ಲಿ ಹೊಸ ದಾಖಲೆ: ಖಾದರ್.
ಇರಾನ್ ಮಾತುಕತೆಗಾಗಿ ಹಪಹಪಿಸುತ್ತಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಆದರೆ, ಇರಾನ್ ಸರ್ಕಾರ ಇದನ್ನು ನಿರಾಕರಿಸಿದೆ. ಅಮೆರಿಕದ ಪ್ರಸ್ತಾವನೆಯು ಏಕಪಕ್ಷೀಯ ಮತ್ತು ಅನ್ಯಾಯದಿಂದ ಕೂಡಿದೆ ಎಂದು ಇರಾನ್ ಅಧಿಕಾರಿಗಳು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿರಿಸುವುದು ಮತ್ತು ಇರಾನ್ನ ಮಿಲಿಟರಿ ಶಕ್ತಿಯನ್ನು ಕುಗ್ಗಿಸುವುದು ತಮ್ಮ ಮುಖ್ಯ ಉದ್ದೇಶ. ಇರಾನಿಯನ್ನರು ಅತ್ಯುತ್ತಮ ಸಂಧಾನಕಾರರು ಎಂದು ಟ್ರಂಪ್ ಹೇಳಿದ್ದಾರೆ.
.ಸಂಗತ: ಆಹಾರ ತಾರತಮ್ಯ; ಮೆಚ್ಚನಾ ಪರಮಾತ್ಮನು.ಕೇಂದ್ರದ ಬಾಕಿ: ಸರ್ವ ಪಕ್ಷ ನಿಯೋಗ; ಮುಖ್ಯಮಂತ್ರಿ ಸಿದ್ದರಾಮಯ್ಯ.ಪಶ್ಚಿಮ ಏಷ್ಯಾ ಬಿಕ್ಕಟ್ಟು: ಮುಖ್ಯಮಂತ್ರಿಗಳ ಜತೆ ಪ್ರಧಾನಿ ಮೋದಿ ಸಂವಾದ ಇಂದು.ಇರಾನ್ ಮೇಲಿನ ದಾಳಿಗೆ ಮತ್ತೆ 10 ದಿನ ವಿರಾಮ ಘೋಷಿಸಿದ ಟ್ರಂಪ್!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.