ವಾಷಿಂಗ್ಟನ್ / ಟೆಹರಾನ್: ಹೊರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಾಟಕ್ಕೆ ಯಾವುದೇ ರೀತಿಯ ತೊಂದರೆಯಾದರೂ, ಇರಾನ್ ಇದುವರೆಗೂ ಕಂಡಿರದ ದಾಳಿ ಎದುರಿಸಬೇಕಾಗುತ್ತದೆ ಎನ್ನುವ ಟ್ರಂಪ್ ಹೇಳಿಕೆಗೆ ತಿರುಗೇಟು ನೀಡಿರುವ ಇರಾನ್ನ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಅಲಿ ಲಾರಿಜಾನಿ, ನಾವು ಯಾರ ಬೆದರಿಕೆಗೂ ಬಗ್ಗುವುದಿಲ್ಲ ಎಂದು ಹೇಳಿದ್ದಾರೆ.

ಇರಾನ್ ಮೇಲಿನ ಅಮೆರಿಕ ಹಾಗೂ ಇಸ್ರೇಲ್ ದಾಳಿಯು 10ನೇ ದಿನಕ್ಕೆ ಕಾಲಿಟ್ಟಿದೆ.

ಹೊರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಾಟಕ್ಕೆ ಇರಾನ್ ಅಡ್ಡಿಪಡಿಸಿದರೆ, ಅವರ ಮೇಲೆ ನಾವು ಇದುವರೆಗೂ ಮಾಡಿದ ದಾಳಿಗಿಂತ 20 ಪಟ್ಟು ಅಧಿಕ ಪ್ರಮಾಣದ ದಾಳಿ ಮಾಡುತ್ತೇವೆ. ಅದರ ಜತೆಗೆ ಇರಾನ್ ಮತ್ತೆ ಎದ್ದು ನಿಲ್ಲದಂತೆ ಅವರ ಮೇಲೆ ಆಕ್ರಮಣ ಮಾಡುತ್ತೇವೆ. ಆದರೆ, ಅದು ಆಗದಿರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಇದು ಚೀನಾ ಸೇರಿದಂತೆ ಹೊರ್ಮುಜ್ ಜಲಸಂಧಿ ಬಳಸುವ ದೇಶಗಳಿಗೆ, ಅಮೆರಿಕದ ಕಡೆಯಿಂದ ಕೊಡುಗೆಯಾಗಿದೆ ಎಂದು ಟ್ರಂಪ್, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಅಲಿ ಲಾರಿಜಾನಿ, ಇರಾನ್ನ ನಾಗರಿಕರು ನಿಮ್ಮ ಬೆದರಿಕೆಗಳಿಗೆ ಬಗ್ಗುವುದಿಲ್ಲ. ನಮ್ಮ ನೆಲವನ್ನು ನಾಶಪಡಿಸಲು ನಿಮಗಿಂತ ಶಕ್ತಿಶಾಲಿಗಳು ಕೂಡ ಪ್ರಯತ್ನಿಸಿ ಸೋತಿದ್ದಾರೆ. ನೀವು ಕೂಡ ನಿರ್ನಾಮವಾಗದಂತೆ ನೋಡಿಕೊಳ್ಳಿ ಎಂದು ಪ್ರತ್ಯುತ್ತರ ನೀಡಿದ್ದಾರೆ.

ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆ ನಂತರ ಇರಾನ್ ತನ್ನ ದಾಳಿಯನ್ನು ತೀವ್ರಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.