ಮೊದಲಿನಿಂದಲೂ ಚೀನಾ ಮತ್ತು ಅಮೆರಿಕ ಬದ್ಧವೈರಿಗಳಂತೆ ಇದ್ದ ದೇಶಗಳು. ಸೇನಾ ಸಾಮರ್ಥ್ಯ, ವ್ಯಾಪಾರ, ಸಂಪನ್ಮೂಲ ಇತ್ಯಾದಿಗಳ ವಿಚಾರದಲ್ಲಿ ದಶಕಗಳಿಂದಲೂ ಪೈಪೋಟಿ ನಡೆಸುತ್ತಲೇ ಇರುವಂಥವು. ಕಳೆದ ವರ್ಷ ಎರಡೂ ದೇಶಗಳ ನಡುವೆ ಸುಂಕ–ಪ್ರತಿಸುಂಕದ ಸಮರವೇ ನಡೆದಿತ್ತು. ಇಂಥ ಹಿನ್ನೆಲೆಯ ನಡುವೆಯೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾ ದೇಶಕ್ಕೆ ಭೇಟಿ ನೀಡಿರುವುದು ಜಾಗತಿಕ ಮಟ್ಟದಲ್ಲಿ ಕುತೂಹಲ ಕೆರಳಿಸಿದೆ. ಇರಾನ್ ಯುದ್ಧ, ಆರ್ಥಿಕ ಸಂಕಷ್ಟ, ತೈಲ ಬಿಕ್ಕಟ್ಟು, ತೈವಾನ್ ಮೇಲಿನ ಹಕ್ಕು ಸೇರಿದಂತೆ ಹಲವು ವಿಚಾರಗಳು ಮಾತುಕತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ