ಅಂತಾಲ್ಯ (ಟರ್ಕಿ): ‘ತನ್ನ ದೇಶದ ಭದ್ರತೆಗೆ ತೊಂದರೆ ಇದೆ ಎಂದು ಇಸ್ರೇಲ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಭ್ರಮೆ ಸೃಷ್ಟಿಸುತ್ತಿದೆ. ತನ್ನ ಭೂ ಪ್ರದೇಶವನ್ನು ವಿಸ್ತರಿಸಿಕೊಳ್ಳುವುದಕ್ಕಾಗಿ ಇಂಥ ಭ್ರಮೆ ಬಿತ್ತುತ್ತಿದೆ’ ಎಂದು ಟರ್ಕಿ ಶನಿವಾರ ದೂರಿದೆ.

‘ಇಸ್ರೇಲ್ ತನ್ನ ಭದ್ರತೆ ಕುರಿತು ಯೋಚಿಸುತ್ತಿಲ್ಲ. ಅದಕ್ಕೆ ಭೂ ಪ್ರದೇಶವನ್ನು ವಿಸ್ತಾರ ಮಾಡಿಕೊಳ್ಳಬೇಕು. ಇದಕ್ಕೆ ಭದ್ರತೆ ಹೆಸರು ಹೇಳಿಕೊಂಡು ತನ್ನ ಸುತ್ತಮುತ್ತಲ ದೇಶಗಳೊಂದಿಗೆ ಯುದ್ಧ ಸಾರುತ್ತಿದೆ’ ಎಂದು ಟರ್ಕಿಯ ವಿದೇಶಾಂಗ ಸಚಿವ ಅಕನ್ ಫಿದಾನ್ ಅವರು ‘ಅಂತಾಲ್ಯ ರಾಜತಾಂತ್ರಿಕ ಫೋರಂ’ ಕಾರ್ಯಕ್ರಮದಲ್ಲಿ ಹೇಳಿದರು.

‘ಗಾಜಾ ಸೇರಿ ಪ್ಯಾಲೆಸ್ಟೀನಿಯನ್ನರ ಭೂ ಪ್ರದೇಶ, ವೆಸ್ಟ್ ಬ್ಯಾಂಕ್ ಮತ್ತು ಪೂರ್ವ ಜೆರುಸಲೇಂ ಬಳಿಕ ಇದೀಗ ಲೆಬನಾನ್ ಮತ್ತು ಸಿರಿಯಾವನ್ನು ಕಬಳಿಸಿ ತನ್ನ ದೇಶದ ಗಡಿಯನ್ನು ವಿಸ್ತರಿಸಿಕೊಳ್ಳುವುದು ಇಸ್ರೇಲ್ ಹುನ್ನಾರ. ಸ್ವಯಂ ರಕ್ಷಣೆ ಹೆಸರಿನಲ್ಲಿ ಇಸ್ರೇಲ್ ನಡೆಸುತ್ತಿರುವ ಈ ಯುದ್ಧವನ್ನು ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.