ಲಂಡನ್ (ಪಿಟಿಐ): ವಂಚನೆ ಹಾಗೂ ಹಣ ಅಕ್ರಮ ವರ್ಗಾವಣೆ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಅವರು ಮಂಗಳವಾರ ಸಲ್ಲಿಸಿದ್ದ ಹೊಸ ಜಾಮೀನು ಅರ್ಜಿಯನ್ನು ಬ್ರಿಟನ್ ನ್ಯಾಯಾಧೀಶರು ತಿರಸ್ಕರಿಸಿದರು.
ಲಂಡನ್‌ನ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಜಾಮೀನು ವಿಚಾರಣೆ ನಡೆಯಿತು. ಈ ವೇಳೆ ನೀರವ್ ಹಾಜರಿರಲಿಲ್ಲ. ಆದರೆ, ಅವರ ಮಗ ಮತ್ತು ಇಬ್ಬರು ಪುತ್ರಿಯರು ಗ್ಯಾಲರಿಯಲ್ಲಿದ್ದರು.
‘ಅರ್ಜಿದಾರರು (ನೀರವ್ ಮೋದಿ) ನ್ಯಾಯಾಲಯಕ್ಕೆ ಹಾಜರಾಗದೇ ಇರುವ ಅಥವಾ ಸಾಕ್ಷಿಗಳ ಮೇಲೆ ಒತ್ತಡ ಹೇರುವ ಅಪಾಯವಿದೆ’ ಎಂದ ನ್ಯಾಯಾಧೀಶರು ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.