ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ರಿಟನ್: ಭಾರತದ 9 ಮಂದಿ ವಿರುದ್ಧ ಕಠಿಣ ಕ್ರಮ

Published : 14 ಫೆಬ್ರುವರಿ 2024, 14:24 IST
Last Updated : 14 ಫೆಬ್ರುವರಿ 2024, 14:24 IST
ಫಾಲೋ ಮಾಡಿ
Comments

ಲಂಡನ್ (ಪಿಟಿಐ): ಸರಕುಗಳು ಮತ್ತು ವಲಸಿಗರ ಅಕ್ರಮ ಸಾಗಾಣಿಕೆ ಪ್ರಕರಣದಲ್ಲಿ ದೋಷಿಗಳಾಗಿರುವ, ಭಾರತ ಮೂಲದ 9 ಮಂದಿಯ ತಂಡದ ಮೇಲೆ ಬ್ರಿಟನ್ ಅಧಿಕಾರಿಗಳು ಗಂಭೀರ ಸ್ವರೂಪದ ಅಪರಾಧಗಳ ಕೃತ್ಯ ತಡೆ ಆದೇಶಗಳನ್ನು (ಎಸ್‌ಸಿಪಿಒ) ಹೇರಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಇಂಥ ಕೃತ್ಯಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಭಾರತೀಯ ಮೂಲದ ತಂಡದವರನ್ನು ಸ್ವಂದೇರ್ ಧಲ್, ಜಸ್ಬೀರ್ ಕಪೂರ್, ದಿಲಿಯನ್, ಚರಣ್ ಸಿಂಗ್, ವಲ್ಜೀತ್ ಸಿಂಗ್, ಜಸ್ಬಿರ್ ಧಲ್ ಸಿಂಗ್, ಜಗಿಂದರ್ ಕಪೂರ್, ಜಕ್ದರ್‌ ಕಪೂರ್, ಅಮರ್‌ಜೀತ್‌ ಅಲಬಾದಿಸ್‌ ಎಂದು ಗುರುತಿಸಲಾಗಿದೆ.

ಬ್ರಿಟನ್‌ನಿಂದ ದುಬೈಗೆ ಸುಮಾರು ₹161 ಕೋಟಿ (15.5 ಮಿಲಿಯನ್ ಪೌಂಡ್‌) ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ಹಾಗೂ 17 ವಲಸಿಗರ ಅಕ್ರಮ ಸಾಗಣೆ ಯತ್ನ ಪ್ರಕರಣದಲ್ಲಿ ಈ ಗುಂಪು ಶಾಮೀಲಾಗಿರುವುದು ಸಾಬೀತಾಗಿತ್ತು. ಈ ಎರಡೂ ಪ್ರಕರಣಗಳಲ್ಲಿ ದೋಷಿಯಾಗಿರುವ ಈ ಗುಂಪಿನ ಮೇಲೆ ಎಸ್‌ಸಿಪಿಒಗಳನ್ನು ಹೇರಲಾಗಿದೆ. ಈ ಅಪರಾಧಿಗಳು ಜೈಲು ಶಿಕ್ಷೆ ಅನುಭವಿಸಿದ ಬಳಿಕ ಅವರ ಮೇಲೆ ಎಸ್‌ಸಿಪಿಒ ಹೇರಲಾಗುವುದು. ಆ ಬಳಿಕ ಅವರ ಹಣಕಾಸು, ಆಸ್ತಿ, ಬ್ಯಾಂಕ್ ಖಾತೆಗಳು ಮತ್ತು ಅಂತರರಾಷ್ಟ್ರೀಯ ವಿಮಾನಯಾನ ಟಿಕೆಟ್‌ಗಳ ಖರೀದಿ ಮೇಲೆ ನಿರ್ಬಂಧ ಹೇರಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT