ಬೆಂಗಳೂರು: ಯುನೈಟೆಡ್ ಕಿಂಗ್ಡಮ್ನಲ್ಲಿ (ಯು.ಕೆ ದೇಶ) ಇನ್ಮುಂದೆ 2008ರ ನಂತರ ಜನಿಸಿದವರಿಗೆ ತಂಬಾಕು ಉತ್ಪನ್ನಗಳನ್ನು ಕೊಳ್ಳಲು ಸಾಧ್ಯವಾಗುವುದಿಲ್ಲ.

ಹೌದು ಯುಕೆ ಪಾರ್ಲಿಮೆಂಟ್ನಲ್ಲಿ ಈ ಬಗ್ಗೆ ಮಸೂದೆಗೆ ಒಪ್ಪಿಗೆ ಪಡೆಯಲಾಗಿದೆ (tobacco and vapes bill).

ಕಳೆದ 2025ರ ನವೆಂಬರ್ 4 ರಂದು ಹೌಸ್ ಆಫ್ ಕಾಮನ್ಸ್ನಲ್ಲಿ ಈ ಮಸೂದೆ ಮಂಡನೆಯಾಗಿ ಒಪ್ಪಿಗೆ ಪಡೆದಿತ್ತು. ಇದೀಗ ಕಳೆದ ಏಪ್ರಿಲ್ 21 ರಂದು ಮೇಲ್ಮನೆ ‘ಹೌಸ್ ಆಫ್ ಲಾರ್ಡ್ಸ್’ನಲ್ಲಿಯೂ ಒಪ್ಪಿಗೆ ಸಿಕ್ಕಿದೆ. ಇನ್ನೇನು ರಾಜರ ಅಂತಿಮ ಸಹಿ ಮಾತ್ರ ಬಾಕಿ.

ಸಹಿ ನಂತರ ಯು.ಕೆ ದೇಶದಲ್ಲಿ 2009 ಜನವರಿ 1ರ ನಂತರ ಜನಿಸಿದವರಿಗೆ ತಂಬಾಕು ಉತ್ಪನ್ನಗಳನ್ನು ಕೊಳ್ಳಲು ಸಾಧ್ಯವಾಗುವುದಿಲ್ಲ.

‘ಸ್ಮೋಕ್ ಫ್ರೀ ಜನರೇಷನ್’ ಬೆಳೆಸುವುದೇ ಈ ಮಸೂದೆಯ ಉದ್ದೇಶ ಎಂದು ಮಸೂದೆ ಮಂಡಿಸಿದ್ದ ಆರೋಗ್ಯ ಸಚಿವರು ತಿಳಿಸಿದ್ದಾರೆ.

ಸದ್ಯ ಯು.ಕೆಯಲ್ಲಿ ವರ್ಷಕ್ಕೆ ಸರಾಸರಿ 4 ಲಕ್ಷ ಜನ ತಂಬಾಕು ಸಂಬಂಧಿ ಕಾಯಿಲೆಗಳಿಗಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ವರ್ಷಕ್ಕೆ 60 ಸಾವಿರ ಜನ ಸಾಯುತ್ತಿದ್ದಾರೆ. ಅಲ್ಲದೇ ಅನೇಕ ದೀರ್ಘಾವಧಿಯ ಹೃದಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.

ತುಂಬಾಕು ಸಂಬಂಧಿ ರೋಗಗಳ ಚಿಕಿತ್ಸೆ ಹಾಗೂ ನಿರ್ಮೂಲನೆಗೆ ಅಲ್ಲಿನ ಸರ್ಕಾರ ವಾರ್ಷಿಕವಾಗಿ ₹300 ಕೋಟಿ ಖರ್ಚು ಮಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.