ಕೀವ್: ಉಕ್ರೇನ್ ಮೇಲಿನ ದಾಳಿಗೆ ರಷ್ಯಾ ನಿಯೋಜಿಸಿದ್ದ 33 ಸಾವಿರಕ್ಕೂ ಅಧಿಕ ಡ್ರೋನ್ಗಳನ್ನು ಮಾರ್ಚ್ನಲ್ಲಿ ಹೊಡೆದುರುಳಿಸಿರುವುದಾಗಿ ಉಕ್ರೇನ್ ರಕ್ಷಣಾ ಸಚಿವಾಲಯ ತಿಳಿಸಿದೆ.

ವೈಮಾನಿಕ ದಾಳಿಗಳನ್ನು ತಡೆಗಟ್ಟುವ ವ್ಯವಸ್ಥೆಯನ್ನು ಬಳಸಿಕೊಂಡು, ಈ ಡ್ರೋನ್ಗಳನ್ನು ನಾಶಪಡಿಸಲಾಗಿದೆ ಎಂದೂ ಸಚಿವಾಲಯ ಹೇಳಿದೆ. ಅಲ್ಲದೇ, ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿದಾಗಿನಿಂದ ಒಂದೇ ತಿಂಗಳಲ್ಲಿ ದಾಳಿಗೆ ಅತಿ ಹೆಚ್ಚು ಡ್ರೋನ್ ಬಳಕೆಯಾಗಿರುವುದು ಮಾರ್ಚ್ನಲ್ಲಿಯೇ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ, ಉಕ್ರೇನ್ ನಿರ್ಮಿತ ಡ್ರೋನ್ವೊಂದು ಕಪ್ಪು ಸಮುದ್ರದಲ್ಲಿರುವ ರಷ್ಯಾದ ತೈಲ ಸಂಸ್ಕರಣಾಗಾರ ಮತ್ತು ಟರ್ಮಿನಲ್ ಮೇಲೆ ದಾಳಿ ನಡೆಸಿದೆ. ಕಳೆದ ಎರಡು ವಾರದಲ್ಲಿ ನಡೆದಿರುವ ಮೂರನೇ ದಾಳಿ ಇದಾಗಿದೆ ಎಂದು ರಷ್ಯಾ ಅಧಿಕಾರಿಗಳು ದೂರಿದ್ದಾರೆ.

ಉಕ್ರೇನ್ ನಡೆಸುತ್ತಿರುವ ದಾಳಿಯಿಂದ ಕಪ್ಪುಸಮುದ್ರದ ಬಂದರು ನಗರಗಳಲ್ಲಿರುವ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ರಾತ್ರೋರಾತ್ರಿ ಉಕ್ತೇನ್ನ 186 ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ. ಉಕ್ರೇನ್ ಗಡಿ ಸಮೀಪದ ಪ್ರದೇಶದ ಮೇಲೆ ನಡೆದ ದಾಳಿಯಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದಾರೆ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.