ಮಾಸ್ಕೊ: ರಷ್ಯಾದ ಅತಿದೊಡ್ಡ ತೈಲ ಮತ್ತು ಅನಿಲ ರಫ್ತು ಬಂದರು ಉಸ್ಟ್-ಲುಗಾ ಮೇಲೆ ಉಕ್ರೇನ್ ಡ್ರೋನ್ ಮೂಲಕ ಸರಣಿ ದಾಳಿ ನಡೆಸಿದೆ. ಇಲ್ಲಿನ ತೈಲ ಸಂಸ್ಕರಣ ಘಟಕಕ್ಕೆ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ 10 ದಿನಗಳಲ್ಲಿ ಉಸ್ಟ್-ಲುಗಾ ಬಂದರಿನ ಮೇಲೆ ಉಕ್ರೇನ್ ನಡೆಸುತ್ತಿರುವ ಐದನೆಯ ಡ್ರೋನ್ ದಾಳಿ ಇದಾಗಿದೆ.

ಉಕ್ರೇನ್ನ ಸತತ ದಾಳಿಯಿಂದ ಬಂದರಿನ ಮೂಲಸೌಕರ್ಯಕ್ಕೆ ವ್ಯಾಪಕ ಪ್ರಮಾಣದಲ್ಲಿ ಹಾನಿಯಾಗಿದ್ದು, ರಷ್ಯಾದಿಂದ ವಿವಿಧ ದೇಶಗಳಿಗೆ ಕಚ್ಚಾ ತೈಲ ರಫ್ತಿಗೆ ದೊಡ್ಡ ಮಟ್ಟದ ಹಿನ್ನಡೆಯಾಗಿದೆ. ಉಸ್ಟ್-ಲುಗಾ ಬಂದರಿನಿಂದ ದಿನಕ್ಕೆ ಅಂದಾಜು 7 ಲಕ್ಷ ಬ್ಯಾರಲ್ನಷ್ಟು ಕಚ್ಚಾ ತೈಲ ರಫ್ತಾಗುತ್ತದೆ.

‘ಸದ್ಯ ಶೇ 40ರಷ್ಟು ಕಚ್ಚಾತೈಲ ರಫ್ತು ಕಡಿಮೆಯಾಗಿದೆ. ತೈಲ ಟ್ಯಾಂಕ್ಗಳಿಗೆ, ಪೈಪ್ಲೈನ್ಗಳಿಗೆ ಹಾನಿಯಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಪಶ್ಚಿಮ ಏಷ್ಯಾ ಸಂಘರ್ಷದಿಂದ ಈಗಾಗಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬಿಕ್ಕಟ್ಟು ಉಲ್ಬಣಿಸಿದೆ, ಹಾಗಾಗಿ ರಷ್ಯಾದ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸುವುದನ್ನು ಕಡಿಮೆ ಮಾಡುವುದರ ಕುರಿತು ಉಕ್ರೇನ್ನ ಮಿತ್ರ ರಾಷ್ಟ್ರಗಳು ಸೂಚನೆ ನೀಡಿವೆ’ ಎಂದು ಉಕ್ರೇನ್ ಅಧ್ಯಕ್ಷ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

‘ಉಸ್ಟ್-ಲುಗಾ ಬಂದರಿನ ಮೇಲಿನ ದಾಳಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ’ ಎಂದು ಪ್ರಾದೇಶಿಕ ಗವರ್ನರ್ ಅಲೆಕ್ಸಾಂಡರ್ ಡ್ರೊಜೆಂಕೊ ಹೇಳಿದ್ದಾರೆ.

ಉಕ್ರೇನ್ ನಡೆಸಿದ ದಾಳಿಯನ್ನು ಭಯೋತ್ಪಾದಕ ಕೃತ್ಯ ಎಂದು ಕರೆದಿರುವ ಕ್ರೆಮ್ಲಿನ್ ವಕ್ತಾರ ದಿಮಿಟ್ರಿ ಪೆಸ್ಕೋವ್, ‘ರಷ್ಯಾ ತನ್ನ ಮಹತ್ವದ ಮೂಲಸೌಕರ್ಯಗಳ ರಕ್ಷಣೆಗೆ ಶ್ರಮಿಸುತ್ತಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.