ಕೀವ್ (ಎಪಿ): ರಷ್ಯಾ ಹಾಗೂ ಉಕ್ರೇನ್ ನಡುವಿನ ಸಮರವು 4ನೇ ವರ್ಷಕ್ಕೆ ಕಾಲಿಟ್ಟಿದೆ. ಇದರ ಬೆನ್ನಲ್ಲೇ, ಕೆಲವು ಪ್ರದೇಶಗಳಿಂದ ರಷ್ಯಾ ಪಡೆಗಳನ್ನು ಹಿಂದಕ್ಕೆ ಕಳುಹಿಸಿರುವುದಾಗಿ ಉಕ್ರೇನ್ ತಿಳಿಸಿದೆ.

ಇದೇ ವೇಳೆ ಉಕ್ರೇನ್ನ ನಾಗರಿಕ ಸ್ಥಳಗಳ ಮೇಲೆ ರಷ್ಯಾವು ಸೋಮವಾರ ರಾತ್ರಿ ಕೂಡ ವಾಯುದಾಳಿ ಮುಂದುವರಿಸಿದೆ. ಉಕ್ರೇನ್ನ ಎರಡು ನಗರಗಳ ಮೇಲೆ ಮಂಗಳವಾರ ನಡೆದ ಡ್ರೋನ್ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, 14 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಇಬ್ಬರು ಮಕ್ಕಳು ಕೂಡ ಸೇರಿದ್ದಾರೆ ಎಂದು ತುರ್ತು ನಿರ್ವಹಣಾ ವಿಭಾಗವು ತಿಳಿಸಿದೆ.

ಸೋಮವಾರ ರಾತ್ರಿ ರಷ್ಯಾ ಹಾರಿಸಿದ 137 ಡ್ರೋನ್ಗಳ ಪೈಕಿ 122 ಅನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ನ ವಾಯುಪಡೆಗಳು ತಿಳಿಸಿವೆ.

ಹೋರಾಟದಲ್ಲಿ ಮುನ್ನಡೆ: ‘ಇರಾನ್ ಯುದ್ಧದಿಂದ ಅಮೆರಿಕ ಮಧ್ಯಸ್ಥಿಕೆಯಲ್ಲಿ ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿದ್ದ ಮಾತುಕತೆಯು ಸ್ಥಗಿತಗೊಂಡಿದೆ. ಸೈನಿಕರ ಕೊರತೆಯ ಹೊರತಾಗಿಯೂ ಆಗ್ನೇಯ ಡಿನಿಪ್ರೊಪೆಟ್ರೊವಿಸ್ಕ್ ಕೈಗಾರಿಕಾ ನಗರವನ್ನು ವಶಕ್ಕೆ ಪಡೆಯುವಲ್ಲಿ ಉಕ್ರೇನ್ನ ಪಡೆಗಳು ಯಶಸ್ವಿಯಾಗಿವೆ. ರಷ್ಯಾ ಸೇನೆಯ ಹಿಡಿತದಲ್ಲಿದ್ದ 400 ಚದರ ಅಡಿ ಪಟ್ಟಣದಲ್ಲಿ ಸೇನೆಯು ಪ್ರಾಬಲ್ಯ ಮೆರೆದಿದೆ ಎಂದು ಉಕ್ರೇನ್ನ ಮೇಜರ್ ಜನರಲ್ ಅಲೆಕ್ಸಾಂಡರ್ ಕೊಮೆರೆಂಕೊ ಹೇಳಿಕೆ ನೀಡಿದ್ದಾರೆ’ ಎಂದು ಸ್ಥಳೀಯ ಮಾಧ್ಯಮ ‘ಆರ್ಬಿಸಿ–ಉಕ್ರೇನ್’ ವರದಿ ಮಾಡಿದೆ.

‘ಉಕ್ರೇನ್ನ ಇತ್ತೀಚೆಗಿನ ಪ್ರತಿದಾಳಿಗಳು ರಷ್ಯಾ ಯುದ್ಧತಂತ್ರದ ಮೇಲೆ ಪರಿಣಾಮಗಳನ್ನು ಬೀರಲಿದೆ’ ಎಂದು ವಾಷಿಂಗ್ಟನ್ ಮೂಲದ ಚಿಂತಕರ ಚಾವಡಿ ‘ಇನ್ಸ್ಟಿಟ್ಯೂಟ್ ಆಫ್ ಸ್ಟಡಿ ವಾರ್’ ತಿಳಿಸಿದೆ.

ಇದರ ಬೆನ್ನಲ್ಲೇ, ‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ಸೋಮವಾರ ರಾತ್ರಿ ದೂರವಾಣಿ ಮಾತುಕತೆ ನಡೆಸಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಉಕ್ರೇನ್ನಲ್ಲಿ ರಷ್ಯಾ ಪಡೆಗಳು ಯಶಸ್ವಿಯಾಗಿ ಮುನ್ನುಗ್ಗುತ್ತಿವೆ ಎಂದು ತಿಳಿಸಿದ್ದಾರೆ’ ಎಂದು ಕ್ರೆಮ್ಲಿನ್ ತಿಳಿಸಿದೆ.

‘ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪದೇ ಪದೇ ಶಾಂತಿ ಮಾತುಕತೆಗೆ ಒತ್ತಾಯಿಸುತ್ತಿದ್ದಾರೆ’ ಎಂದು ರಷ್ಯಾದ ಹಿರಿಯ ರಾಜತಾಂತ್ರಿಕ ಅಧಿಕಾರಿ ಯೂರಿ ಉಸಕೋವ್ ತಿಳಿಸಿದ್ದಾರೆ.

‘ಇರಾನ್ ಯುದ್ಧದಿಂದ ಕಚ್ಚಾತೈಲ ದರ ಏರಿಕೆಯಾಗಲಿದ್ದು, ಉಕ್ರೇನ್ ಯುದ್ಧದಿಂದ ಗಮನ ಬೇರೆಡೆಗೆ ಸೆಳೆಯಲಿದೆ. ಅಲ್ಲದೇ, ಅಮೆರಿಕ, ನ್ಯಾಟೊ ಮಿತ್ರಪಡೆಗಳು ಉಕ್ರೇನ್ಗೆ ನೆರವು ನೀಡುವುದನ್ನು ಕಡಿಮೆ ಮಾಡಲಿವೆ’ ಎಂದು ಅವರು ತಿಳಿಸಿದ್ದಾರೆ.

ಮತ್ತೊಂದೆಡೆ, ‘ಕೊಲ್ಲಿ ರಾಷ್ಟ್ರಗಳು ಹಾಗೂ ಅಮೆರಿಕಕ್ಕೆ ತನ್ನ ದೇಶದ ಅತ್ಯಾಧುನಿಕ ಡ್ರೋನ್ ಹಾಗೂ ಡ್ರೋನ್ ತಂತ್ರಜ್ಞಾನ ಕಳುಹಿಸಿಕೊಡುವ ಮೂಲಕ ಮಾಸ್ಕೊ ವಿರುದ್ಧ ಉಕ್ರೇನ್ ಅಂತರರಾಷ್ಟ್ರೀಯ ಮಟ್ಟದಲ್ಲಿ ರಾಜತಾಂತ್ರಿಕ ಗೆಲುವು ಪಡೆದಿದೆ’ ಎಂದು ಝೆಲೆನ್ಸ್ಕಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.