ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ –ರಷ್ಯಾ ಸಂಘರ್ಷ: ಅಂತರರಾಷ್ಟ್ರೀಯ ನೆರವು ಕೇಂದ್ರ ಸ್ಥಾಪನೆ

Published 3 ಜುಲೈ 2023, 23:31 IST
Last Updated 3 ಜುಲೈ 2023, 23:31 IST
ಅಕ್ಷರ ಗಾತ್ರ

ದಿ ಹೇಗ್‌, ನೆದರ್‌ಲೆಂಡ್‌: ಉಕ್ರೇನ್‌ ಆಕ್ರಮಣದಲ್ಲಿನ ಯುದ್ಧ ಅಪರಾಧಗಳಿಗೆ ರಷ್ಯಾದ ನಾಯಕತ್ವ ಮತ್ತು ಆ ದೇಶದ ಹಿರಿಯ ನಾಯಕರನ್ನು ಹೊಣೆಯಾಗಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ತನಿಖೆಗೆ ನೆರವಾಗಲು ಅಂತರ ರಾಷ್ಟ್ರೀಯ ಕೇಂದ್ರವೊಂದನ್ನು ದಿ ಹೇಗ್‌ನಲ್ಲಿ ಸೋಮವಾರ ತೆರೆಯಲಾಗಿದೆ. 

ಈ ಕೇಂದ್ರವು ಐರೋಪ್ಯ ಒಕ್ಕೂಟದ ನ್ಯಾಯಾಂಗ ಸಹಕಾರ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಕಾರ್ಯಾರಂಭ ಮಾಡಿದೆ. ಇದು ಆರೋಪಿಗಳ ವಿರುದ್ಧ ದೋಷಾರೋಪ ಅಥವಾ ಬಂಧನ ವಾರಂಟ್ ಹೊರಡಿಸುವುದಿಲ್ಲ. ಅದರ ಬದಲಿಗೆ, ಈಗಾಗಲೇ ಉಕ್ರೇನ್, ಎಸ್ಟೋನಿಯಾ, ಲ್ಯಾಟ್ವಿಯ, ಲಿಥುವೇನಿಯಾ ಮತ್ತು ಪೋಲೆಂಡ್‌ನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ನ್ಯಾಯಾಲಯದ ತನಿಖೆಗಳಿಗೆ ಬೆಂಬಲ ನೀಡಲಿದೆ.

ರಷ್ಯಾ ಸರ್ಕಾರ ತನ್ನ ಎಲ್ಲ ಅಪರಾಧಗಳಿಗೆ ಹೊಣೆ ಹೊತ್ತುಕೊಳ್ಳುವಂತೆ ಮಾಡುವಲ್ಲಿ ವಿಶ್ವವು ಒಗ್ಗಟ್ಟಾಗಿದೆ ಎನ್ನುವುದರ ಸ್ಪಷ್ಟ ಸಂದೇಶವಿದು ಎಂದು ಉಕ್ರೇನಿನ ಪ್ರಾಸಿಕ್ಯೂಟರ್‌ ಜನರಲ್‌ ಆಂಡ್ರಿ ಕೋಸ್ಟಿನ್‌ ಪ್ರತಿಕ್ರಿಯಿಸಿದ್ದಾರೆ. 

‘ಸೂಕ್ತ ಸಾಕ್ಷ್ಯಗಳನ್ನು ಸಂಗ್ರಹಿಸದೇ, ಅವುಗಳನ್ನು ಸುರಕ್ಷಿತವಾಗಿ ಕಾಪಿಡದೇ, ಅವುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಹೋದರೆ ಅಪರಾಧಗಳಿಗೆ ಕಾರಣರಾದವರನ್ನು ಹೊಣೆಗಾರರನ್ನಾಗಿಸುವ ಭರವಸೆಗಳೇ ಉಳಿಯುವುದಿಲ್ಲ’ ಎಂದಿರುವ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯದ (ಐಸಿಸಿ) ಪ್ರಧಾನ ಪ್ರಾಸಿಕ್ಯೂಟರ್‌ ಕರೀಂ ಖಾನ್, ಈ ನಿಟ್ಟಿನಲ್ಲಿ ತೆರೆದಿರುವ ಅಂತರರಾಷ್ಟ್ರೀಯ ನೆರವು ಕೇಂದ್ರ ಸ್ಥಾಪಿಸಿರುವುದನ್ನು ಸ್ವಾಗತಿಸಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT