ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವರ್ಷ ವಿದೇಶಗಳಿಂದ ₹ 1.37 ಲಕ್ಷ ಕೋಟಿ ನೆರವು ಪಡೆದಿದ್ದೇವೆ: ಉಕ್ರೇನ್

Published 11 ಮೇ 2023, 14:41 IST
Last Updated 11 ಮೇ 2023, 14:41 IST
ಅಕ್ಷರ ಗಾತ್ರ

ಕೀವ್: ಉಕ್ರೇನ್‌ ತನ್ನ ವಿದೇಶಿ ಪಾಲುದಾರ ರಾಷ್ಟ್ರಗಳಿಂದ ಈ ವರ್ಷ ಅಂದಾಜು ₹ 1.37 ಲಕ್ಷ ಕೋಟಿ ಆರ್ಥಿಕ ನೆರವು ಸ್ವೀಕರಿಸಿದೆ ಎಂದು ಅಲ್ಲಿನ ಹಣಕಾಸು ಸಚಿವ ಸೆರ್ಹೀ ಮರ್ಚೆಂಕೊ ಗುರುವಾರ ತಿಳಿಸಿದ್ದಾರೆ.

'2023ರಲ್ಲಿ ಉಕ್ರೇನ್‌ ವಿದೇಶಗಳಿಂದ ಈಗಾಗಲೇ 16.7 ಬಿಲಿಯನ್‌ ಡಾಲರ್‌ (ಅಂದಾಜು ₹ 1.37 ಲಕ್ಷ ಕೋಟಿ) ನೆರವು ಸ್ವೀಕರಿಸಿದೆ. ಈ ವರ್ಷ ದೇಶದ ಬಜೆಟ್‌ ಕೊರತೆ ನೀಗಿಸಲು ವಿದೇಶಿ ಪಾಲುದಾರರು ಇನ್ನಷ್ಟು ನೆರವು ನೀಡುವ ವಿಶ್ವಾಸವಿದೆ' ಎಂದು ಅವರು ಹೇಳಿದ್ದಾರೆ.

2022ರ ಫೆಬ್ರುವರಿಯಿಂದ ರಷ್ಯಾ ಪಡೆಗಳು ಹಾಗೂ ಉಕ್ರೇನ್‌ ಸೇನೆ ಕಾದಾಟ ನಡೆಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT