ಬೈರೂತ್: ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಸಂಘರ್ಷದ ನಡುವೆ ಲೆಬನಾನ್ ಮತ್ತು ಇಸ್ರೇಲ್ ಮಾತುಕತೆಗೆ ಮುಂದಾಗುವಂತೆ ಲೆಬನಾನ್ನ ವಿಶ್ವಸಂಸ್ಥೆಯ ವಿಶೇಷ ಸಮನ್ವಯಕಾರರು ಒತ್ತಾಯಿಸಿದ್ದಾರೆ.

'ಈಗಾಗಲೇ ಹದಗೆಟ್ಟಿರುವ ಪರಿಸ್ಥಿತಿ ಮತ್ತಷ್ಟು ಹದಗೆಡುವ ಲಕ್ಷಣ ಕಂಡುಬರುತ್ತಿದೆ’ ಎಂದು ಜೀನೈನ್ ಹೆನ್ನಿಸ್ ಪ್ಲಾಸ್ಚಾರ್ಟ್ ಹೇಳಿದ್ದಾರೆ.

‘ಲೆಬನಾನ್ ಮತ್ತು ಇಸ್ರೇಲ್ ನಡುವಿನ ಮಾತುಕತೆಯು ಗೇಮ್ ಚೇಂಜರ್ ಆಗಬಹುದು. ಈ ಯುದ್ಧದ ಆಪತ್ತಿನಿಂದ ಭವಿಷ್ಯದ ಪೀಳಿಗೆಯನ್ನು ರಕ್ಷಿಸಬೇಕಿದೆ’ಎಂದಿದ್ದಾರೆ.

ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ 2024ರ ನವೆಂಬರ್ ತಿಂಗಳ ಕದನ ವಿರಾಮವನ್ನು ಮೇಲ್ವಿಚಾರಣೆ ಮಾಡುವ ಸಮಿತಿ ಸಭೆಯ ಭಾಗವಾಗಿ ಲೆಬನಾನ್ ಮತ್ತು ಇಸ್ರೇಲಿ ನಾಗರಿಕ ಪ್ರತಿನಿಧಿಗಳು ಕಳೆದ ಡಿಸೆಂಬರ್ನಲ್ಲಿ ನೇರ ಮಾತುಕತೆ ನಡೆಸಿದ್ದರು.

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಇರಾನಿನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಸಾವಿಗೆ ಪ್ರತೀಕಾರವಾಗಿ ಹಿಜ್ಬುಲ್ಲಾ, ಇಸ್ರೇಲ್ ಮೇಲೆ ಕ್ಷಿಪಣಿಗಳನ್ನು ಹಾರಿಸುತ್ತಿದೆ. ಇತ್ತ, ಲೆಬನಾನ್ ಮೇಲೆ ಇಸ್ರೇಲ್ ದಾಳಿ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.