ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯ ಸ್ಥಾನ ಸಿಗಬೇಕು ಎಂಬುದು ಹಳೆಯ ಬೇಡಿಕೆ. ಹಲವು ದೇಶಗಳು ಭಾರತದ ಪರ ಈ ವಿಷಯದಲ್ಲಿ ಬೆಂಬಲಿಸಿವೆ. ಈಗ ಫ್ರಾನ್ಸ್ ಸಹ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದೆ.

ಭದ್ರತಾ ಮಂಡಳಿಯ ಶಾಶ್ವತ ಸದಸ್ಯರಾಗಿ ಭಾರತ ಸೇರಿದಂತೆ ಜರ್ಮನಿ, ಬ್ರೆಜಿಲ್ ಮತ್ತು ಜಪಾನ್ ಇರಬೇಕು ಎಂದು ಫ್ರಾನ್ಸ್ ಹೇಳಿದೆ.

ವಿಶ್ವದ ಬಿಕ್ಕಟ್ಟುಗಳ ಪರಿಹಾರಕ್ಕೆ ವಿಶ್ವಸಂಸ್ಥೆಯ ಅಗತ್ಯ ಇಂದು ಹೆಚ್ಚಾಗಿದೆ. ಈ ಬಿಕ್ಕಟ್ಟುಗಳು ಹೆಚ್ಚು ದೇಶಗಳ ಪ್ರಾತಿನಿಧ್ಯದ ಅಗತ್ಯವನ್ನೂ ಹೇಳುತ್ತದೆ. ಆದ್ದರಿಂದ ಫ್ರಾನ್ಸ್ ಶಾಶ್ವತ ಸದಸ್ಯತ್ವದ ಕುರಿತು ಪ್ರಸ್ತಾಪಿಸಿದೆ ಎಂದು ಫ್ರಾನ್ಸ್ ರಾಯಭಾರಿ ಹ್ಯುಸೆನ್ ಹೇಳಿದ್ದಾರೆ.

ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ಸಯ್ಯದ್ ಅಕ್ಬರ್ರುದ್ದೀನ್, ‘122 ಸದಸ್ಯ ದೇಶಗಳ ಪೈಕಿ, 113 ದೇಶಗಳು ಭದ್ರತಾ ಮಂಡಳಿಯ ವಿಸ್ತರಣೆಯ ಕುರಿತು ಒಲವು ತೋರಿಸಿವೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.