ಟೆಹರಾನ್: ಎರಡು ಸೇತುವೆ ಸಹಿತ ಪ್ರಮುಖ ಮೂಲಭೂತ ಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಹಾಗೂ ಇಸ್ರೇಲ್ ಮಂಗಳವಾರ ದಾಳಿ ನಡೆಸಿದೆ ಎಂದು ಇರಾನ್ ಹೇಳಿದೆ.
.ಕದನ ವಿರಾಮದ ಬಗ್ಗೆ ಪಾಕಿಸ್ತಾನದ ಮಾತುಕತೆ ನಿರ್ಣಾಯಕ ಹಂತದಲ್ಲಿದೆ: ಇರಾನ್.
ಇರಾನ್ನ ಪ್ರಮುಖ ತೈಲ ರಫ್ತು ಕೇಂದ್ರ ಖಾರ್ಗ್ ದ್ವೀಪದ ಮೇಲೂ ದಾಳಿ ನಡೆದಿದೆ ಎಂದು ಸ್ಥಳೀಯ ಮಾಧ್ಯಮ ‘ಮೆಹರ್’ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ ಈ ದಾಳಿ ಮಿಲಿಟರಿ ಗುರಿಗಳ ಮೇಲೆ ನಡೆದಿದೆ ಎಂದು ಅಮೆರಿಕದ ಮಾಧ್ಯಮವೊಂದರ ವರದಿಗಾರ ತಿಳಿಸಿದ್ದಾರೆ.

ಹೊರ್ಮುಜ್ ಜಲಸಂಧಿ ಮುಕ್ತಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಗಡುವು ಸಮೀಪಿಸುತ್ತಿದ್ದಂತೆಯೇ ಈ ದಾಳಿ ನಡೆದಿದೆ.
.ನನ್ನನ್ನು ಸೇರಿದಂತೆ 1.4 ಕೋಟಿ ಜನರು ಪ್ರಾಣತ್ಯಾಗಕ್ಕೆ ಸಿದ್ದ: ಇರಾನ್ ಅಧ್ಯಕ್ಷ.
ದಿನದ ಆರಂಭದಲ್ಲಿ ಟೆಹರಾನ್ನ ವಿವಿಧ ಭಾಗಗಳಲ್ಲಿ ದೊಡ್ಡ ಸ್ಫೋಟ ಸದ್ದು ಕೇಳಿ ಬಂದಿದೆ. ರಾಜಧಾನಿಗೆ ಹೊಂದಿಕೊಂಡಂತಿರುವ ಅಲ್ಬ್ರೋಜ್ ಪ್ರಾಂತ್ಯದಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿ 18 ಮಂದಿ ಸಾವಿಗೀಡಾಗಿದ್ದಾರೆ ಎಂದು ಇರಾನ್ ಮಾಧ್ಯಮಗಳು ತಿಳಿಸಿವೆ. ರಾಜಧಾನಿಯಲ್ಲಿರುವ ರಫಿ–ನಿಯಾ ಸಭಾಂಗಣ ದಾಳಿಯಲ್ಲಿ ಸಂಪೂರ್ಣವಾಗಿ ನಾಶವಾಗಿದೆ.

ಆ ಬಳಿಕ ಇರಾನ್ ಕಡೆಯಿಂದ ಇಸ್ರೇಲ್ ಮೇಲೆ ದಾಳಿ ನಡೆದಿದ್ದು, ಅದನ್ನು ವಾಯುರಕ್ಷಣಾ ವ್ಯವಸ್ಥೆ ಮೂಲಕ ವಿಫಲಗೊಳಿಸಲಾಗಿದೆ ಎಂದು ಇಸ್ರೇಲ್ ತಿಳಿಸಿದೆ.

(ಎಎಫ್ಪಿ ವರದಿ)
.‘ಸುರಕ್ಷಿತ ತಾಣ’ ದುಬೈ ರಿಯಲ್ ಎಸ್ಟೇಟ್ಗೆ ಇರಾನ್ ಪ್ರಹಾರ: ಭಾರತೀಯರಿಗೂ ಆಘಾತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.