ಬೀಜಿಂಗ್ (ಎಎಫ್ಪಿ): ಚೀನಾದ ಅಧ್ಯಕ್ಷ ಷಿ–ಜಿನ್ಪಿಂಗ್ ಅವರೊಂದಿಗೆ ‘ಅತ್ಯದ್ಭುತ ವ್ಯಾಪಾರ ಒಪ್ಪಂದ’ ಮಾಡಿಕೊಳ್ಳಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ತಿಳಿಸಿದರು.

ಉಭಯ ದೇಶಗಳ ನಾಯಕರು ಸೂಪರ್ಪವರ್ ಸಮಾವೇಶದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ಸಹಾಯ ಮಾಡುವುದಾಗಿ ತಿಳಿಸಿದ ಚೀನಾದ ಪ್ರಸ್ತಾವವನ್ನು ಅಮೆರಿಕ ತಳ್ಳಿಹಾಕಿತು.

ಕೃಷಿ, ವಿಮಾನಯಾನ, ಕೃತಕ ಬುದ್ಧಿಮತ್ತೆ ಸೇರಿದಂತೆ ವಿವಿಧ ವಲಯಗಳಿಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲು ಮತ್ತು ಉಭಯ ದೇಶಗಳ ನಡುವಣ ಭಿನ್ನಾಭಿಪ್ರಾಯ ಗಳನ್ನು ಬಗೆಹರಿಸಿಕೊಳ್ಳಲು ಟ್ರಂಪ್ ಚೀನಾಗೆ ಭೇಟಿ ನೀಡಿದ್ದರು.

ಸಮಾವೇಶದ ಬಳಿಕ ಮಾತನಾಡಿದ ಟ್ರಂಪ್, ‘ಇರಾನ್ಗೆ ಸೇನಾ ಸಲಕರಣೆ ಗಳನ್ನು ರವಾನಿಸಿಲ್ಲ ಎಂದು ಷಿ–ಜಿನ್ಪಿಂಗ್ ಬಲವಾಗಿ ಹೇಳಿದ್ದಾರೆ’ ಎಂದು ತಿಳಿಸಿದರು.

‘ಇರಾನ್ ಬಗೆಗಿನ ನನ್ನ ತಾಳ್ಮೆಯು ಮಿತಿ ಮೀರಿದೆ. ಹೊರ್ಮುಜ್ ಜಲಸಂಧಿ ಯನ್ನು ಇರಾನ್ ಮುಕ್ತಗೊಳಿಸಬೇಕು ಎಂದು ಷಿ–ಜಿನ್ಪಿಂಗ್ ಒಪ್ಪಿಕೊಂಡಿ ದ್ದಾರೆ’ ಎಂದು ಟ್ರಂಪ್ ಹೇಳಿದರು.

ಇರಾನ್ನ ತೈಲ ಕಂಪನಿಗಳಿಂದ ಕಚ್ಚಾತೈಲ ಖರೀದಿಸುವ ಚೀನಾದ ಕಂಪನಿಗಳ ಮೇಲೆ ಹೇರಿರುವ ನಿರ್ಬಂಧ ವನ್ನು ತೆಗೆದುಹಾಕುವ ವಿಚಾರವಾಗಿ ಪರಿಶೀಲನೆ ನಡೆಸುವುದಾಗಿಯೂ ಅವರು ತಿಳಿಸಿದರು.

‘ಜಿನ್ಪಿಂಗ್ ಅವರು 200 ಬೋಯಿಂಗ್ ಜೆಟ್ಗಳನ್ನು ಖರೀದಿಸಲು ಒಪ್ಪಿಗೆ ನೀಡಿದ್ದಾರೆ. 750 ಜೆಟ್ಗಳ ಖರೀದಿವರೆಗೂ ಅದು ವಿಸ್ತರಣೆಯಾಗುವ ಸಾಧ್ಯತೆ ಇದೆ’ ಎಂದೂ ಹೇಳಿದರು.

ಟ್ರಂಪ್ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಷಿ ಜಿನ್ ಪಿಂಗ್, ‘ಇದೊಂದು ಮಹತ್ವದ ಭೇಟಿ. ಉಭಯ ದೇಶಗಳ ಮಧ್ಯೆ ನೂತನ ದ್ವಿಪಕ್ಷೀಯ ಸಂಬಂಧ ಬೆಸೆದಿದೆ’ ಎಂದು ಹೇಳಿದರು.

ಟ್ರಂಪ್ ಚೀನಾ ಭೇಟಿ ಸಮಾಪ್ತಿ: ಟ್ರಂಪ್ ಅವರು ತಮ್ಮ ಮೂರು ದಿನಗಳ ಚೀನಾ ಭೇಟಿ ಬಳಿಕ ಶುಕ್ರವಾರ ಅಮೆರಿಕಕ್ಕೆ ಮರಳಿದರು. ಟ್ರಂಪ್ ಅವರ ನಿರ್ಗಮನಕ್ಕೂ ಮುನ್ನ ಚೀನಾ ಅಧ್ಯಕ್ಷ ಮತ್ತು ಟ್ರಂಪ್ ಅವರು ಖಾಸಗಿ ಸಭೆ ನಡೆಸಿದರು. ತೈವಾನ್ ವಿಚಾರವಾಗಿ ಉಭಯ ನಾಯಕರ ನಡುವೆ ಭಿನ್ನಾಭಿಪ್ರಾಯ ಇರುವುದು ಮೇಲ್ನೋಟಕ್ಕೆ ಗೋಚರವಾಗುತ್ತಿತ್ತು.

ಷಿ–ಜಿನ್ಪಿಂಗ್ ಮತ್ತು ಅವರ ಪತ್ನಿಯನ್ನು ಟ್ರಂಪ್ ಸೆಫ್ಟೆಂಬರ್ 24ರಂದು ಶ್ವೇತಭವನಕ್ಕೆ ಆಹ್ವಾನಿ ಸಿದ್ದಾರೆ ಎಂದೂ ಅದು ವರದಿ ಮಾಡಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-51-1604887469

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.