ವಾಷಿಂಗ್ಟನ್: 2025ರ ಪಹಲ್ಗಾಮ್ ಉಗ್ರ ದಾಳಿಗೆ ಕಾರಣವಾಗಿರುವ ಲಷ್ಕರ್–ಎ–ತಯಬಾದಂತಹ ಭಯೋತ್ಪಾದಕ ಸಂಘಟನೆಗಳನ್ನು ಪಾಕಿಸ್ತಾನ ನಿಗ್ರಹಿಸಬೇಕು ಎಂದು ಅಮೆರಿಕ ಸಂಸದ ಬ್ರಾಡ್ ಶೆರ್ಮನ್ ಅವರು ಆಗ್ರಹಿಸಿದ್ದಾರೆ.

ಭಾರತೀಯ ರಾಯಭಾರ ಕಚೇರಿ ಆಯೋಜಿಸಿದ್ದ ‘ಭಯೋತ್ಪಾದನೆಯಿಂದ ಮನುಕುಲಕ್ಕೆ ಉಂಟಾಗಿರುವ ಹಾನಿ’ ಎಂಬ ವಿಷಯಾಧಾರಿತ ಪ್ರದರ್ಶನದಲ್ಲಿ ಮಾತನಾಡಿದ ಶೆರ್ಮನ್ ಅವರು, ಪಹಲ್ಗಾಮ್ ಉಗ್ರ ದಾಳಿಯಲ್ಲಿ ಮೃತಪಟ್ಟ 26 ಜನರನ್ನು ಸ್ಮರಿಸಿದರು.

ದಾಳಿಕೋರರನ್ನು ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿಆರ್ಎಫ್) ಎಂದು ಗುರುತಿಸಲಾಗಿದ್ದು, ಧರ್ಮದ ಆಧಾರದ ಮೇಲೆ ಮುಗ್ಧ ಜನರನ್ನು ಹತ್ಯೆ ಮಾಡಲಾಗಿದೆ. ಈ ಗುಂಪು ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ ಲಷ್ಕರ್–ಎ–ತಯಬಾ ಸಂಘಟನೆಯೊಂದಿಗೆ ಸಂಬಂಧ ಹೊಂದಿದೆ ಎಂದು ಕಂಡುಬರುತ್ತದೆ ಎಂದು ಹೇಳಿದರು.

‘ಲಷ್ಕರ್–ಎ– ತಯಬಾ, ಜೈಶ್–ಎ–ಮೊಹಮ್ಮದ್ ಮತ್ತು ಇತರ ಭಯೋತ್ಪಾದಕ ಗುಂಪುಗಳನ್ನು ನಿಗ್ರಹಿಸುವಂತೆ ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸಲು ಈ ಸಂದರ್ಭವನ್ನು ಬಳಸಿಕೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.