ವಾಷಿಂಗ್ಟನ್: ಪಾಕಿಸ್ತಾನ ಸೇನೆ ಮತ್ತು ಜಮಾತ್–ಇ–ಇಸ್ಲಾಮಿ ಸಂಘಟನೆಯು 1971ರಲ್ಲಿ ಬಂಗಾಳಿ ಹಿಂದೂಗಳ ಮೇಲೆ ನಡೆಸಿದ ದಾಳಿಯನ್ನು ‘ಯುದ್ಧಾಪರಾಧ ಮತ್ತು ನರಮೇಧ’ ಎಂದು ಘೋಷಿಸಬೇಕು ಎಂದು ಸಂಸದ ಗ್ರೆಗ್ ಲ್ಯಾಂಡ್ಸ್ಮನ್ ಅವರು ಅಮೆರಿಕ ಸಂಸತ್ತಿನಲ್ಲಿ ನಿರ್ಣಯ ಮಂಡಿಸಿದರು.

‘1971ರ ಮಾರ್ಚ್ 25ರಂದು ಪಾಕಿಸ್ತಾನ ಸರ್ಕಾರವು ‘ಆಪರೇಷನ್ ಸರ್ಚ್ಲೈಟ್’ ಹೆಸರಿನ ಕಾರ್ಯಾಚರಣೆಯ ಮೂಲಕ ಆಗಿನ ಪಶ್ಚಿಮ ಪಾಕಿಸ್ತಾನದ ನಾಯಕ ಶೇಖ್ ಮುಜಿಬುರ್ ರೆಹಮಾನ್ ಹಾಗೂ ಅವರ ಸೇನೆಯನ್ನು ಬಂಧಿಸಿತ್ತು. ಅದರ ನಂತರ ಬಂಗಾಳಿಗಳು ಮತ್ತು ಹಿಂದೂಗಳು ಸೇರಿದಂತೆ ಅಲ್ಲಿನ ಅಲ್ಪಸಂಖ್ಯಾತ ನಾಗರಿಕರ ಮೇಲೆ ಪಾಕಿಸ್ತಾನವು ನರಮೇಧ ನಡೆಸಿತ್ತು’ ಎಂದು ಎಂದು ನಿರ್ಣಯದಲ್ಲಿ ಗ್ರೆಗ್ ಲ್ಯಾಂಡ್ಸ್ಮನ್ ಹೇಳಿದ್ದಾರೆ.

ಪಾಕಿಸ್ತಾನವು 1971ರಲ್ಲಿ ನಡೆಸಿದ ದುಷ್ಕೃತ್ಯವು ಮಾನವೀಯತೆಯ ಮೇಲೆ ನಡೆದ ದಾಳಿ ಎಂದು ಪರಿಗಣಿಸಿ ಅದನ್ನು ನರಮೇಧ ಎಂದೇ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಘಟನೆಯ ಕುರಿತು ಢಾಕಾದಲ್ಲಿದ್ದ ಅಮೆರಿಕದ ಕಾನ್ಸುಲ್ ಜನರಲ್ ಆರ್ಚರ್ ಬ್ಲಡ್ ಅವರು ಟೆಲಿಗ್ರಾಮ್ ಕಳಿಸಿದ್ದರು. ಅದರಲ್ಲಿ ಪಾಕ್ ಕೃತ್ಯವನ್ನು ವಿರೋಧಿಸಿದ್ದ 20 ಜನ ಅಧಿಕಾರಿಗಳ ಸಹಿ ಇತ್ತು ಎಂದು ತಿಳಿಸಿದ್ದಾರೆ.

ಆರ್ಚರ್ ಬ್ಲಡ್ ಕಳಿಸಿದ್ದ ಟೆಲಿಗ್ರಾಮ್, ‘ಬ್ಲಡ್ ಟೆಲಿಗ್ರಾಮ್’ ಎಂದೇ ಇತಿಹಾಸದಲ್ಲಿ ದಾಖಲಾಗಿದೆ.

ಡೆಮಾಕ್ರಟಿಕ್ ಸಂಸದ ಲ್ಯಾಂಡ್ಸ್ಮನ್ ಅವರು ಶುಕ್ರವಾರ ಮಂಡಿಸಿದ ನಿರ್ಣಯವನ್ನು ವಿದೇಶಾಂಗ ವ್ಯವಹಾರಗಳ ಸಮಿತಿಗೆ ಸಲ್ಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.