ಟೆಹರಾನ್: F-18 ಯುದ್ಧ ವಿಮಾನವನ್ನು ಹೊಡೆದುರುಳಿಸಿರುವುದಾಗಿ ಇರಾನ್ ಸೇನೆ ಹೇಳಿಕೊಂಡಿರುವುದು ಸುಳ್ಳು ಎಂದು ಅಮೆರಿಕ ಹೇಳಿದೆ.

ಇರಾನ್ ಹೇಳಿಕೆ ಕುರಿತು ಫ್ಯಾಕ್ಟ್ ಚೆಕ್ ಮಾಡಿರುವ ಯುಎಸ್ ಮಿಲಿಟರಿಯ ಸೆಂಟ್ರಲ್ ಕಮಾಂಡ್ (ಸಿಇಎನ್ಟಿಸಿಒಎಂ), ಮಂಗಳವಾರ ರಾತ್ರಿ ಪ್ರಕಟಣೆ ಹೊರಡಿಸಿದೆ.

F-18 ಅನ್ನು ನಾಶಪಡಿಸಿದ್ದೇವೆ ಎಂದು ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (ಐಆರ್ಜಿಸಿ) ಹೇಳಿಕೊಂಡಿತ್ತು. ಅದಕ್ಕೆ ಸಂಬಂಧಿಸಿದಂತೆ ವಿಡಿಯೊವೊಂದನ್ನು ಹಂಚಿಕೊಂಡು, ದಾಳಿ ಯಶಸ್ವಿಯಾಗಿದೆ ಎಂದೂ ತಿಳಿಸಿತ್ತು.

ಇದರ ಬೆನ್ನಲ್ಲೇ, ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಿಇಎನ್ಟಿಸಿಒಎಂ, 'ಅಮೆರಿಕದ ಯಾವುದೇ ಯುದ್ಧ ವಿಮಾನವನ್ನು ಇರಾನ್ ಹೊಡೆದುರುಳಿಸಿಲ್ಲ' ಎಂದು ಸ್ಪಷ್ಟಪಡಿಸಿದೆ.

ಒಪ್ಪಂದದ ಪ್ರಸ್ತಾಪ ತಿರಸ್ಕರಿಸಿದ ಇರಾನ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಯುದ್ಧ ಅಂತ್ಯಗೊಳಿಸುವ ನಿಟ್ಟಿನಲ್ಲಿ ಬುಧವಾರವಷ್ಟೇ 15 ಅಂಶಗಳ ಪ್ರಸ್ತಾಪವನ್ನು ಮುಂದಿರಿಸಿದ್ದರು. ಅದನ್ನು ತಿರಸ್ಕರಿಸಿರುವ ಇರಾನ್, ಅಮೆರಿಕದೊಂದಿಗೆ ಮಾತುಕತೆ ನಡೆಸುವ ಯಾವುದೇ ಆಲೋಚನೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
.ಸೋಲೊಪ್ಪಿಕೊಳ್ಳದಿದ್ದರೆ ಇರಾನ್ಗೆ ನರಕ ತೋರಿಸಲಿದ್ದಾರೆ ಟ್ರಂಪ್: ಶ್ವೇತಭವನ.ಅಮೆರಿಕ ಜೊತೆ ಮಾತುಕತೆ ನಡೆಸುವ ಯಾವುದೇ ಉದ್ದೇಶ ಇರಾನ್ಗೆ ಇಲ್ಲ: ವಿದೇಶಾಂಗ ಸಚಿವ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.