ವಾಷಿಂಗ್ಟನ್: ಹೊರ್ಮುಜ್ ಜಲಸಂಧಿಯಲ್ಲಿ ನೆಲಬಾಂಬ್ ಹುದುಗಿಸಲು ಬಳಸುತ್ತಿದ್ದ 16 ಹಡಗುಗಳು ಸೇರಿದಂತೆ ಇರಾನಿನ ಹಲವು ಹಡಗುಗಳನ್ನು ನಾಶಪಡಿಸಲಾಗಿದೆ ಎಂದು ಮಂಗಳವಾರ ಅಮೆರಿಕ ಸೇನೆ ಹೇಳಿದೆ.

ಪಶ್ಚಿಮ ಏಷ್ಯಾದಿಂದ ತೈಲ ರಫ್ತುಗಳನ್ನು ನಿರ್ಬಂಧಿಸಲು ಇರಾನ್ ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಅಮೆರಿಕ ದಾಳಿ ನಡೆಸಿದೆ. ಜಾಗತಿಕ ತೈಲ ಪ್ರಮಾಣದಲ್ಲಿ ಶೇ 20ರಷ್ಟು ಸರಬರಾಜಾಗುವ ಹೊರ್ಮುಜ್ ಜಲಸಂಧಿಯಿಂದ ಜಾಗತಿಕ ರಫ್ತುಗಳ ಬಗ್ಗೆ ಕಳವಳ ಹೆಚ್ಚುತ್ತಿದೆ.

ಹೊರ್ಮುಜ್ ಜಲಸಂಧಿಯಲ್ಲಿ ನೆಲಬಾಂಬ್ ಇಡದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಎಚ್ಚರಿಕೆ ನೀಡಿದ್ದರು. ಕೆಲವು ಹಡಗುಗಳನ್ನು ನಾಶ ಮಾಡುತ್ತಿರುವ ವಿಡಿಯೊ ತುಣುಕನ್ನು ಅಮೆರಿಕ ಸೇನೆ ಬಿಡುಗಡೆ ಮಾಡಿದೆ.

11ನೇ ದಿನ ಪಶ್ಚಿಮ ಏಷ್ಯಾದಲ್ಲಿ ಯುದ್ಧವು ಮತ್ತಷ್ಟು ಉಲ್ಬಣಗೊಂಡಿದ್ದು, ಜಲಸಂಧಿಯಲ್ಲಿ ಇಡಲಾಗಿರುವ ನೆಲಬಾಂಬ್ಗಳನ್ನು ತೆಗೆಯದೇ ಇದ್ದರೆ ಇರಾನ್ ಮೇಲೆ ದೊಡ್ಡ ದಾಳಿ ನಡೆಸುವುದಾಗಿ ಅಮೆರಿಕ ಎಚ್ಚರಿಸಿತ್ತು.

ಇದುವರೆಗಿನ ನಡೆದಿರುವುದಕ್ಕಿಂತ ಅತ್ಯಂತ ತೀವ್ರವಾದ ದಾಳಿಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಎಚ್ಚರಿಕೆ ನೀಡಿದ್ದರು.

ಅಮೆರಿಕ ಜೊತೆಗೆ ಇರಾನ್ ನಾಯಕರು ಮಾತುಕತೆಗೆ ನಿರಾಕರಿಸಿದ ಹಿನ್ನೆಲೆ ಪಶ್ಚಿಮ ಏಷ್ಯಾದಲ್ಲಿ ಯುದ್ಧವು ಮುಂದುವರಿದಿದೆ. ಇರಾನ್ನ ಐಆರ್ಜಿಸಿ ಇಸ್ರೇಲ್ ಮೇಲೆ ಮತ್ತಷ್ಟು ದಾಳಿ ನಡೆಸಿದೆ.

ಈ ಯುದ್ಧದಲ್ಲಿ ಅಮೆರಿಕದ 140 ಸೇನಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಪೆಂಟಗನ್ ಮಂಗಳವಾರ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.