ಇರಾನ್ ಮುಂದಿಟ್ಟಿರುವ ಪ್ರಸ್ತಾವದಂತೆ ಹೊರ್ಮುಜ್ ಜಲಸಂಧಿಯನ್ನು ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸುವ ಬಗ್ಗೆ ಕತಾರ್ ಎಚ್ಚರಿಕೆ ನೀಡಿದೆ. ‘ಈ ಜಲಮಾರ್ಗದ ಬಿಕ್ಕಟ್ಟಿಗೆ ನಿರ್ಣಾಯಕ ಪರಿಹಾರ ಕಂಡುಹಿಡಿಯುವುದು ಅಗತ್ಯ. ಇಲ್ಲದೇ ಹೋದಲ್ಲಿ ಸಂಘರ್ಷ ಮುಂದುವರಿಯಲಿದೆ. ಯಾವುದೇ ಕ್ಷಣದಲ್ಲಿ ಆಕ್ರಮಣಗಳು ಮತ್ತೆ ಆರಂಭವಾಗಬಹುದು’ ಎಂದು ಕತಾರ್‌ನ ವಿದೇಶಾಂಗ ಸಚಿವಾಲಯ ವಕ್ತಾರ ಮಜೀದ್ ಅಲ್ ಅನ್ಸಾರಿ ಹೇಳಿದ್ದಾರೆ. ಟ್ರಂಪ್ ಅವರು ಇರಾನ್ ಪ್ರಸ್ತಾವಗಳನ್ನು ಒಪ್ಪದೇ ಇರುವುದಕ್ಕೆ ಕತಾರ್‌ನ ಈ ಎಚ್ಚರಿಕೆಯೂ ಒಂದು ಕಾರಣ ಎನ್ನಲಾಗುತ್ತಿದೆ.
ಇನ್ನು ಮುಂದೆ ಇತರ ದೇಶಗಳ ಮೇಲೆ ತನ್ನ ನೀತಿಗಳನ್ನು ಹೇರುವ ಸ್ಥಿತಿಯಲ್ಲಿ ಅಮೆರಿಕ ಇಲ್ಲ. ಅಂತಿಮವಾಗಿ ತನ್ನ ಕಾನೂನುಬಾಹಿರ ಮತ್ತು ಅಸಂಬದ್ಧ ಬೇಡಿಕೆಗಳನ್ನು ಕೈಬಿಡಬೇಕು ಎಂಬುದನ್ನು ಅದು ಒಪ್ಪಿಕೊಳ್ಳಬೇಕು.
-ರೆಜಾ ತಲೈ–ನಿಕ್, ಇರಾನ್ ರಕ್ಷಣಾ ಸಚಿವಾಲಯದ ವಕ್ತಾರ
ನಿರ್ಣಾಯಕ ಪರಿಹಾರ ಅಗತ್ಯ
ಇರಾನ್ ಮುಂದಿಟ್ಟಿರುವ ಪ್ರಸ್ತಾವದಂತೆ ಹೊರ್ಮುಜ್ ಜಲಸಂಧಿಯನ್ನು ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸುವ ಬಗ್ಗೆ ಕತಾರ್ ಎಚ್ಚರಿಕೆ ನೀಡಿದೆ.
‘ಈ ಜಲಮಾರ್ಗದ ಬಿಕ್ಕಟ್ಟಿಗೆ ನಿರ್ಣಾಯಕ ಪರಿಹಾರ ಕಂಡುಹಿಡಿಯುವುದು ಅಗತ್ಯ. ಇಲ್ಲದೇ ಹೋದಲ್ಲಿ ಸಂಘರ್ಷ ಮುಂದುವರಿಯಲಿದೆ. ಯಾವುದೇ ಕ್ಷಣದಲ್ಲಿ ಆಕ್ರಮಣಗಳು ಮತ್ತೆ ಆರಂಭ
ವಾಗಬಹುದು’ ಎಂದು ಕತಾರ್‌ನ ವಿದೇಶಾಂಗ ಸಚಿವಾಲಯ ವಕ್ತಾರ ಮಜೀದ್ ಅಲ್ ಅನ್ಸಾರಿ ಹೇಳಿದ್ದಾರೆ. ಟ್ರಂಪ್ ಅವರು ಇರಾನ್ ಪ್ರಸ್ತಾವಗಳನ್ನು ಒಪ್ಪದೇ ಇರುವುದಕ್ಕೆ ಕತಾರ್‌ನ ಈ ಎಚ್ಚರಿಕೆಯೂ ಒಂದು ಕಾರಣ ಎನ್ನಲಾಗುತ್ತಿದೆ.