ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಸಂಘರ್ಷದಿಂದ ನಿರ್ಮಾಣವಾಗಿರುವ ತೈಲ ಕೊರತೆಯನ್ನು ಸರಿದೂಗಿಸುವ ಉದ್ದೇಶದಿಂದ ರಷ್ಯಾದ ತೈಲ ಖರೀದಿಯ ಮೇಲಿನ ನಿರ್ಬಂಧಗಳ ವಿನಾಯಿತಿಯನ್ನು ಅಮೆರಿಕವು ಶುಕ್ರವಾರ(ಏ.17) ವಿಸ್ತರಿಸಿದೆ.

ಜಾಗತಿಕ ತೈಲ ಕೊರತೆ ಮತ್ತು ತೈಲ ಬೆಲೆ ಏರಿಕೆಯನ್ನು ತಡೆಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟ್ರಂಪ್ ಆಡಳಿತವು ತಿಳಿಸಿದೆ.

ರಷ್ಯಾದ ತೈಲ ಖರೀದಿಯ ಮೇಲಿನ ಈ ಹಿಂದಿನ ನಿರ್ಬಂಧಗಳ ಸಡಿಲಿಕೆಯು ಏ.11ಕ್ಕೆ ಕೊನೆಗೊಂಡಿತ್ತು. ಈಗ ಈ ವಿನಾಯಿತಿಯನ್ನು ಮೇ 16ರವರೆಗೆ ಮುಂದುವರಿಸಲು ಅಮೆರಿಕದ ಹಣಕಾಸು ಇಲಾಖೆಯು ಒಪ್ಪಿಗೆ ಸೂಚಿಸಿದೆ.

ಇದರಿಂದಾಗಿ ರಷ್ಯಾದಿಂದ ತೈಲ ಖರೀದಿ ಮಾಡುತ್ತಿದ್ದ ಭಾರತ ಸೇರಿದಂತೆ ಹಲವು ದೇಶಗಳಿಗೆ ನಿರಾಳವಾಗಿದೆ.

ಎರಡು ದಿನಗಳ ಹಿಂದೆಯಷ್ಟೇ(ಏ.15) ಹಣಕಾಸು ಇಲಾಖೆಯ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು ರಷ್ಯಾ ತೈಲ ಖರೀದಿಯ ಮೇಲಿನ ನಿರ್ಬಂಧಗಳ ವಿನಾಯಿತಿಯನ್ನು ಮತ್ತೆ ನವೀಕರಿಸುವುದಿಲ್ಲ ಎಂದು ಹೇಳಿದ್ದರು. ಆದರೆ, ಅದರ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ.

ತೈಲ ಖರೀದಿಯ ಮೇಲಿನ ನಿರ್ಬಂಧಗಳನ್ನು ಸಡಿಲಿಸುವುದು ರಷ್ಯಾಗೆ ಲಾಭವಾಗಲಿದೆ. ಇದರಿಂದ ಉಕ್ರೇನ್ ಮೇಲಿನ ಯುದ್ಧಕ್ಕೆ ಅವರಿಗೆ ಆರ್ಥಿಕ ಬಲ ಸಿಗುತ್ತದೆ ಎಂದು ಅಮೆರಿಕದ ಮಿತ್ರರಾಷ್ಟ್ರಗಳು ಕಳವಳ ವ್ಯಕ್ತಪಡಿಸುತ್ತಿವೆ.

ಇತ್ತೀಚೆಗೆ ವಾಷಿಂಗ್ಟನ್ನಲ್ಲಿ ನಡೆದಿದ್ದ ಏಳು ಹಣಕಾಸು ಸಚಿವರ ಸಭೆಯಲ್ಲಿ, ಫ್ರೆಂಚ್ ಹಣಕಾಸು ಸಚಿವ ರೋಲ್ಯಾಂಡ್ ಲೆಸ್ಕ್ಯೂರ್ ಅವರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ‘ಇರಾನ್ ಪರಿಸ್ಥಿತಿಯ ಲಾಭವನ್ನು ರಷ್ಯಾ ಪಡೆದುಕೊಳ್ಳದಂತೆ ತಡೆಯಬೇಕು. ಇಲ್ಲದಿದ್ದರೆ ಉಕ್ರೇನ್, ಸಂಪೂರ್ಣ ಹಾನಿಗೊಳಗಾಗಲಿದೆ’ ಎಂದಿದ್ದರು.

ಇರಾನ್ ಮೇಲಿನ ಅಮೆರಿಕ–ಇಸ್ರೇಲ್ ದಾಳಿಯಿಂದಾಗಿ, ಹೊರ್ಮುಜ್ ಜಲಸಂಧಿಯ ಮೇಲೆ ಟೆಹರಾನ್ ಹಿಡಿತ ಸಾಧಿಸಿದ್ದರಿಂದ ಜಾಗತಿಕ ತೈಲ ಕೊರತೆ ಉಂಟಾಗಿತ್ತು ಹಾಗೂ ತೈಲ ಬೆಲೆ ಏರಿಕೆಯಾಗಿತ್ತು. ಅದರಲ್ಲೂ ಕೊಲ್ಲಿ ದೇಶಗಳಿಂದ ತೈಲ ಆಮದು ಮಾಡಿಕೊಳ್ಳುವ ದೇಶಗಳಿಗೆ ಬಾರಿ ಹೊಡೆತ ಬಿದ್ದಿತ್ತು.

ಕದನ ವಿರಾಮದ ಉಳಿದ ಅವಧಿವರೆಗೆ(ಏ.27) ಹೊರ್ಮುಜ್ ಜಲಸಂಧಿಯನ್ನು ಎಲ್ಲಾ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಸಂಪೂರ್ಣ ಮುಕ್ತಗೊಳಿಸುವುದಾಗಿ ಇತ್ತೀಚೆಗೆ ಇರಾನ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.