ವಾಷಿಂಗ್ಟನ್: ಅಮೆರಿಕದಲ್ಲಿ ಭಾನುವಾರ ನಡೆದ ಏರ್ ಶೋ ಪ್ರದರ್ಶನದ ವೇಳೆ ಎರಡು ಫೈಟರ್ ಜೆಟ್ಗಳ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. ಅದೃಷ್ಟವಶಾತ್ ನಾಲ್ವರು ಪೈಲಟ್ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಾಲ್ವರು ಸಿಬ್ಬಂದಿ ಐಡಾಹೊದ ಮೌಂಟೇನ್ ಹೋಮ್ ವಾಯುನೆಲೆಯ ಹೊರಗೆ ಸುರಕ್ಷಿತವಾಗಿ ಜಿಗಿದಿದ್ದಾರೆ ಎಂದು ಅಮೆರಿಕ ನೌಕಾಪಡೆ ಮಾಹಿತಿ ನೀಡಿದೆ.

ಎರಡು ಜೆಟ್ಗಳು ಪರಸ್ಪರ ಡಿಕ್ಕಿ ಹೊಡೆದಿದ್ದು, ಅಕಾಶದಿಂದ ನೆಲಕ್ಕೆ ಅಪ್ಪಳಿಸಿವೆ. ಇದರಿಂದಾಗಿ ಭಾರಿ ಸ್ಫೋಟ ಸಂಭವಿಸಿದೆ. ಆದರೆ, ಜೆಟ್ಗಳಲ್ಲಿ ಇದ್ದ ಸಿಬ್ಬಂದಿ ಪ್ಯಾರಾಚೂಟ್ಗಳನ್ನು ಬಳಸಿ ನಿಧಾನವಾಗಿ ಕೆಳಗೆ ತೇಲಿ ಬರುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

‘ವೈಮಾನಿಕ ಪ್ರದರ್ಶನ ನೀಡುತ್ತಿದ್ದ ವೇಳೆ ನಾಲ್ವರು ಸಿಬ್ಬಂದಿಗಳಿದ್ದ ಎರಡು ಜೆಟ್ಗಳು ಪರಸ್ಪರ ಡಿಕ್ಕಿ ಹೊಡೆದಿವೆ’ ಎಂದು ಯುಎಸ್ ಪೆಸಿಫಿಕ್ ಫ್ಲೀಟ್ನ ನೇವಲ್ ಏರ್ ಫೋರ್ಸಸ್ ವಕ್ತಾರ ಕಮಾಂಡರ್ ಅಮೆಲಿಯಾ ಉಮಾಯಮ್ ತಿಳಿಸಿದ್ದಾರೆ.

‘E/A-18G ಗ್ರೌಲರ್’ ಜೆಟ್ಗಳು ಅಪಘಾತಕ್ಕೀಡಾಗಿವೆ. ವಾಯುನೆಲೆಯಿಂದ 2 ಮೈಲಿ ದೂರದಲ್ಲಿ ಅವಘಡ ಸಂಭವಿಸಿದೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತದೆ ಎಂದು ಉಮಾಯಮ್ ಹೇಳಿದ್ದಾರೆ.

ಕಳೆದ ಎಂಟು ವರ್ಷಗಳ ನಂತರ ನಡೆದ ಮೊದಲ ಗನ್ಫೈಟರ್ ಸ್ಕೈಸ್ ಏರ್ ಶೋ ಇದಾಗಿತ್ತು. 2018ರಲ್ಲಿ ನಡೆದ ಕೊನೆಯ ಪ್ರದರ್ಶನದ ವೇಳೆ ನಡೆದ ಅಪಘಾತದಲ್ಲಿ ಹ್ಯಾಂಗ್ ಗ್ಲೈಡರ್ ಪೈಲಟ್ ಒಬ್ಬರು ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.