ಇಸ್ಲಾಮಾಬಾದ್‌ನಲ್ಲಿ ಇರಾನ್ ನಿಯೋಗದ ಜೊತೆ ಮಾತುಕತೆ ನಡೆಸಿದ ಬಳಿಕ ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು –ಎಎಫ್‌ಪಿ ಚಿತ್ರ
ಮೊಹಮ್ಮದ್ ಬಾಖಿರ್ ಖಾಲೀಬಾಫ್ (ಎಡಗಡೆಯವರು)
ಇರಾನ್ ಅಣ್ವಸ್ತ್ರಗಳನ್ನು ಹೊಂದಬಾರದು ಎಂಬುದೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಖ್ಯ ಗುರಿ. ನಾವು ಅಣ್ವಸ್ತ್ರ ತಯಾರಿಸುವುದಿಲ್ಲಹಾಗೂ ಅಣ್ವಸ್ತ್ರ ತಯಾರಿಕೆಗೆ ಅಗತ್ಯವಿರುವ ಸಾಧನಗಳನ್ನು ಹೊಂದುವುದಿಲ್ಲ ಎಂಬ ಬಗ್ಗೆ ಇರಾನ್ ಬದ್ಧತೆ ಪ್ರದರ್ಶಿಸಬೇಕು. ಇದು ಇರಾನ್‌ಗೆ ನಾವು ನೀಡುವ ಕೊನೆಯ ಮತ್ತು ಅತ್ಯುತ್ತಮ ಅವಕಾಶ.ಈ ಪ್ರಸ್ತಾವದೊಂದಿಗೆ ನಾವು ನಿರ್ಗಮಿಸುತ್ತೇವೆ
ಜೆ.ಡಿ.ವ್ಯಾನ್ಸ್, ಅಮೆರಿಕ ಉಪಾಧ್ಯಕ್ಷ
ಇರಾನ್ ನಿಯೋಗ ಪ್ರಗತಿಪರ ವಿಚಾರಗಳನ್ನೇ ಪ್ರಸ್ತಾಪಿಸಿತ್ತು.ಎದುರು ಪಕ್ಷದವರು ನಮ್ಮ ವಿಶ್ವಾಸ ಗಳಿಸುವಲ್ಲಿ ವಿಫಲರಾದರು. ದೇಶದ ರಕ್ಷಣೆಗಾಗಿ 40 ದಿನ ನಡೆಸಿದ ಹೋರಾಟವನ್ನು ವ್ಯರ್ಥ ಮಾಡಲು ನಾವು ಸಿದ್ಧರಿರಲಿಲ್ಲ. ಅಂತಿಮವಾಗಿ ಇರಾನ್‌ನ ವಿಶ್ವಾಸ ಗಳಿಸಬೇಕೇ ಅಥವಾ ಬೇಡವೇ ಎಂದು ನಿರ್ಧರಿಸುವುದು ಅಮೆರಿಕಕ್ಕೆ ಬಿಟ್ಟದ್ದು