ವಾಷಿಂಗ್ಟನ್: ‘ಅನಿವಾರ್ಯವಾದರೆ, ಇರಾನ್ ಜತೆಗೆ ಯುದ್ಧವನ್ನು ಪುನರಾರಂಭಿಸಲು ಅಮೆರಿಕವು ಸರ್ವ ಸನ್ನದ್ಧವಾಗಿದೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.

ಇರಾನ್–ಅಮೆರಿಕ ಒಪ್ಪಂದ ವಿಷಯದಲ್ಲಿ ಅನಿಶ್ಚಿತತೆ ಮುಂದುವರಿದಿರುವ ಕಾರಣ, ಅಸಮಾಧಾನ ವ್ಯಕ್ತಪಡಿಸಿರುವ ಟ್ರಂಪ್, ‘ಇರಾನ್ ಎಂದಿಗೂ ಅಣ್ವಸ್ತ್ರ ಅಭಿವೃದ್ಧಿಪಡಿಸಬಾರದು, ಶಾಂತಿ ಒಪ್ಪಂದವು ತಾನು ನಿಗದಿಪಡಿಸುವ ಕೆಂಪು ರೇಖೆಯೊಳಗೆ ಇರಬೇಕು’ ಎಂದು ಹೇಳಿದ್ದಾರೆ.

ಈ ನಡುವೆ, ಇರಾನ್ ಜತೆಗೆ ಅಂತಿಮ ಒಪ್ಪಂದ ಮಾಡಿಕೊಳ್ಳುವ ವಿಷಯವಾಗಿ ಅಮೆರಿಕವು ತೀರಾ ಹತ್ತಿರದಲ್ಲಿದೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ. ಇನ್ನೊಂದೆಡೆ ಅಮೆರಿಕದ ಜತೆಗೆ ಅಂತಿಮ ಒಪ್ಪಂದಕ್ಕೆ ನಾವು ಒಪ್ಪಿಕೊಂಡಿಲ್ಲ’ ಎಂದು ಇರಾನ್ ಹೇಳಿದೆ.

‘ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಶುಕ್ರವಾರ ಶ್ವೇತಭವನದಲ್ಲಿ ಎರಡು ಗಂಟೆ ಸಭೆ ನಡೆಸಿದರೂ, ಅಂತಿಮವಾಗಿ ಟ್ರಂಪ್ಗೆ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ’ ಎಂದು ಮೂಲಗಳು ಹೇಳಿವೆ.

ಸಿಂಗಪುರದಲ್ಲಿ ನಡೆದ ಏಷ್ಯಾ ರಕ್ಷಣಾ ಶೃಂಗಸಭೆಯಲ್ಲಿ ಮಾತನಾಡಿದ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, ‘ಅಮೆರಿಕಗೆ ಅಗತ್ಯವೆನಿಸಿದರೆ ಯುದ್ಧವನ್ನು ಪುನರಾಂಭಿಸುತ್ತದೆ’ ಎಂದು ಹೇಳಿದ್ದಾರೆ.

‘ಸದಾ ಜಾಗರೂಕ ಮತ್ತು ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ’ ಅಮೆರಿಕದ ಸೆಂಟ್ರಲ್ ಕಮಾಂಡ್, ಅಮೆರಿಕದ ಪಡೆಗಳಿಗೆ ಎಕ್ಸ್ನಲ್ಲಿ ಸಂದೇಶ ನೀಡಿದೆ.

ಲೆಬನಾನ್ ಮೇಲೆ ಇಸ್ರೇಲ್ ದಾಳಿ

ಇಸ್ರೇಲ್ ಪಡೆಗಳು ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿ ಲೆಬನಾನ್ ಮೇಲೆ ದಾಳಿ ನಡೆಸುವುದನ್ನು ಮುಂದುವರಿಸಿದೆ. ಇಸ್ರೇಲ್ – ಲೆಬನಾನ್ ನಡುವೆ ಏಪ್ರಿಲ್ 17ರಿಂದ ಕದನ ವಿರಾಮ ಜಾರಿಯಲ್ಲಿದೆ. ಆದರೆ ಕದನ ವಿರಾಮ ಉಲ್ಲಂಘಿಸಿ ಇಸ್ರೇಲ್ ಪಡೆ ದಾಳಿ ನಡೆಸುತ್ತಿದೆ ಎಂದು ಲೆಬನಾನ್ ಆರೋಪಿಸಿದೆ. ಉಭಯ ದೇಶಗಳ ನಡುವೆ ನಾಲ್ಕನೆಯ ಸುತ್ತಿನ ನೇರ ಮಾತುಕತೆಯು ಮುಂದಿನ ವಾರ ವಾಷಿಂಗ್ಟನ್ನಲ್ಲಿ ನಡೆಯಲಿದೆ.

ಅಮೆರಿಕ– ಇರಾನ್ ನಡುವೆ ಸಂದೇಶಗಳ ವಿನಿಮಯ ಮುಂದುವರಿದಿದೆ. ಆದರೆ ಇದುವರೆಗೆ ಯಾವುದೇ ಅಂತಿಮ ಒಪ್ಪಂದ ಏರ್ಪಟ್ಟಿಲ್ಲ
–ಇಸ್ಮಾಯಿಲ್ ಬಕೈ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.