ವಿಶ್ವದ ದೊಡ್ಡಣ್ಣ ಎಂದು ಕರೆಯಲಾಗುವ ಅಮೆರಿಕ, ಈಗ ಇಡೀ ವಿಶ್ವದ ಆರ್ಥಿಕತೆಗೆ ಸಂಕಷ್ಟ ತಂದಿಡುವ ಜೊತೆಗೆ ತಾನೂ ಸಂಕಷ್ಟಕ್ಕೆ ಸಿಲುಕಿದೆ. ಹೌದು ಇಸ್ರೇಲ್ ಜೊತೆ ಸೇರಿ ಇರಾನ್ ವಿರುದ್ಧ ಅಪ್ರಚೋದಿತ ಯುದ್ಧ ಆರಂಭಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕಕ್ಕೆ ಭಾರಿ ಆರ್ಥಿಕ ಸಂಕಷ್ಟ ತಂದಿಟ್ಟಿದ್ದಾರೆ. ಅರ್ಥಿಕ ಹಿಂಜರಿತದ ಆರಂಭಿಕ ಸೂಚನೆ ಸಿಕ್ಕಿದ್ದು, ಅಮೆರಿಕದ ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳು ಒತ್ತಡಕ್ಕೆ ಸಿಲುಕಿವೆ. ಬಡ್ಡಿ ದರ ಇಳಿಕೆಯ ಬದಲು ಏರುಗತಿಯಲ್ಲಿದೆ. ಜಾಗತಿಕ ಷೇರುಪೇಟೆಗಳು ಕುಸಿತದ ಹಾದಿ ಹಿಡಿದಿವೆ. ಕಾರ್ಪೊರೇಟ್ ಸಂಸ್ಥೆಗಳ ನಷ್ಟವೂ ಹೆಚ್ಚುತ್ತಿದೆ.

ಇರಾನ್ ಪರಮಾಣು ಕಾರ್ಯಕ್ರಮ ಸ್ಥಗಿತಗೊಳಿಸಿ, ಅಂತರರಾಷ್ಟ್ರೀಯ ಪರಮಾಣು ಸಂಸ್ಥೆಗೆ ತಮ್ಮ ಪರಮಾಣು ಸಂವರ್ಧನೆ ಬಗ್ಗೆ ಮೇಲ್ವಿಚಾರಣೆ ನಡೆಸಲು ಒಪ್ಪಿಕೊಂಡಿತ್ತು. ಆದರೂ ಅಮೆರಿಕ ಬಾಂಬ್ ದಾಳಿ ಆರಂಭಿಸಿತು ಎಂದು ಅಮೆರಿಕದ ಕೆಲ ಅಧಿಕಾರಿಗಳೇ ಹೇಳಿರುವ ಮಾತುಗಳು ಟ್ರಂಪ್ ಭಂಡತನಕ್ಕೆ ಸಾಕ್ಷಿಯಾಗಿವೆ ಎಂದು ವರದಿ ತಿಳಿಸಿವೆ. ಈ ನಡುವೆ, ಯುದ್ಧಕ್ಕೆ ಟ್ರಂಪ್ ಸಾವಿರಾರು ಬಿಲಿಯನ್ ಡಾಲರ್ನಷ್ಟು ಖರ್ಚು ಮಾಡುತ್ತಿದ್ದಾರೆ. ಅಮೆರಿಕಗೆ ಈಗ ಎಂತಹ ಪರಿಸ್ಥಿತಿ ಬಂದಿದೆ ಎಂದರೆ ಯುದ್ಧ ಗೆಲ್ಲುವುದಿರಲಿ, ಯುದ್ಧದಿಂದ ಹೊರಬಂದರೆ ಸಾಕು ಎನ್ನುವಂತಾಗಿದೆ.

ಯುದ್ಧಕ್ಕೆ ಅಮೆರಿಕ–ಇಸ್ರೇಲ್ ಖರ್ಚು ಮಾಡಿದ್ದೆಷ್ಟು?

ಫೆಬ್ರುವರಿ 28ರಂದು ಅಮೆರಿಕ ಮತ್ತು ಇಸ್ರೇಲ್, ಇರಾನ್ ಮೇಲೆ ಜಂಟಿ ದಾಳಿ ನಡೆಸಿ ಸರ್ವೋಚ್ಛ ನಾಯ ಅಯಾತೊಲ್ಲಾ ಖಮೇನಿಯನ್ನು ಕೊಲ್ಲುವ ಮೂಲಕ ಯುದ್ಧ ಆರಂಭವಾಗಿತ್ತು. ಜೊತೆಗೆ, ಶಾಲೆಯೊಂದರ ಮೇಲೆ ದಾಳಿ ಮಾಡಿ ನೂರಾರು ಮಕ್ಕಳನ್ನು ಕೊಲ್ಲಲಾಗಿತ್ತು. ಅಲ್ಲದೆ, ಇರಾನ್ನ ಹಲವು ನಾಯಕರನ್ನು ಕೊಲ್ಲಲಾಗಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕ ಗಲ್ಫ್ ನೆಲೆಗಳು ಮತ್ತು ಇಸ್ರೇಲ್ ಮೇಲೆ ಇರಾನ್ ಬಾಂಬ್ ದಾಳಿ ಮಾಡಿ ಹಾನಿಗೊಳಿಸಿತ್ತು. ಅಲ್ಲದೇ, ಹೊರ್ಮುಜ್ ಜಲಸಂಧಿಯನ್ನು ಬಂದ್ ಮಾಡಿ ಜಾಗತಿಕ ತೈಲ ಬಿಕ್ಕಟ್ಟನ್ನು ಸೃಷ್ಟಿಸಿತ್ತು.

ಮೂರನೇ ಮಹಾಯುದ್ಧದ ರೀತಿ ನಡೆಯುತ್ತಿರುವ ಈ ಯುದ್ಧಕ್ಕೆ ಎಷ್ಟು ಹಣ ಖರ್ಚಾಗಿದೆ ಎಂಬುವುದರ ಬಗ್ಗೆ ಖಚಿತ ಲೆಕ್ಕಾಚಾರವಿಲ್ಲ. ಟ್ರಂಪ್ ಆಡಳಿತವು ಎಷ್ಟು ಸಂಪನ್ಮೂಲವನ್ನು ಬಳಸಿದೆ ಎಂಬುವುದರ ಬಗ್ಗೆ ಸ್ಪಷ್ಟ ಅಂಕಿ ಅಂಶ ಇಲ್ಲ. ತಪ್ಪಿಸಬಹುದಾಗಿದ್ದ ಯುದ್ಧಕ್ಕೆ ಅಮೆರಿಕವು ಶಸ್ತ್ರಾಸ್ತ್ರ ಮತ್ತು ಮಿಲಿಟರಿ ಸಾಮಗ್ರಿಗಳಿಗೆ ಹಲವು ಬಿಲಿಯನ್ ಡಾಲರ್ ಹಣ ವ್ಯಯಿಸಿದೆ ಎನ್ನುತ್ತವೆ ನಂಬಲರ್ಹ ಮೂಲಗಳು. ಅವುಗಳ ಪ್ರಕಾರ ಏಪ್ರಿಲ್ 22ರವರೆಗೆ 70 ಬಿಲಿಯನ್ ಡಾಲರ್(₹65.99 ಲಕ್ಷ ಕೋಟಿ) ಖರ್ಚಾಗಿದೆ.

ಮಿಲಿಟರಿ ಕಾರ್ಯಾಚರಣೆಯ ವೆಚ್ಚ, ಕ್ಷಿಪಣಿಗಳು, ಡ್ರೋನ್, ಬಾಂಬ್, ಫೈಟರ್ ಜೆಟ್, ಸರಬರಾಜು ವಿಮಾನಗಳು, ಹಡಗುಗಳು, ವಿಮಾನಗಳು, ಸೇನಾಪಡೆಗಳ ನಿಯೋಜನೆ ವೆಚ್ಚ, ಪರಿಕರಗಳ ನಷ್ಟ ಮತ್ತು ಪೂರೈಕೆ ಸರಪಳಿಯ ಅಡಚಣೆ ಸೇರಿದಂತೆ ಇಷ್ಟು ವೆಚ್ಚವಾಗಿದೆ ಎಂದು ವರದಿ ತಿಳಿಸಿದೆ.

ಪೆಂಟಗನ್ ಅಂದಾಜಿನ ಪ್ರಕಾರ ಇರಾನ್ ಯುದ್ಧದ ವೆಚ್ಚ

ಅಮೆರಿಕ ರಕ್ಷಣಾ ಕಾರ್ಯಾಚರಣೆಗಳನ್ನು ನೋಡಿಕೊಳ್ಳುವ ಪೆಂಟಗನ್ ಪ್ರಕಾರ, ಇರಾನ್ ವಿರುದ್ಧ ಯುದ್ಧ ಆರಂಭವಾದ ಮೊದಲ 6 ದಿನಗಳಲ್ಲೇ 11.3 ಬಿಲಿಯನ್ ಡಾಲರ್ ಖರ್ಚಾಗಿದೆ. ಕಾರ್ಯತಂತ್ರ ಮತ್ತು ಅಂತರರಾಷ್ಟ್ರೀಯ ಅಧ್ಯಯನ ಕೇಂದ್ರದ (ಸಿಎಸ್ಐಎಸ್) ಅಧ್ಯಯನದ ಆಧಾರದ ಮೇಲೆ ಮಾಧ್ಯಮ ವರದಿಗಳ ಪ್ರಕಾರ, ಕಾರ್ಯಾಚರಣೆಯ ವೆಚ್ಚದಲ್ಲಿ ಮಾತ್ರ 25 ಶತಕೋಟಿ ಡಾಲರ್ನಿಂದ 45 ಶತಕೋಟಿ ಡಾಲರ್ವರೆಗೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ದಾಳಿ ಗುಂಪುಗಳು, ಯುದ್ಧ ವಿಮಾನಗಳ ಸಂಚಾರ, ಟ್ಯಾಂಕರ್ಗಳ ಚಲನೆ, ಲಾಜಿಸ್ಟಿಕ್ಸ್ ವೆಚ್ಚಗಳು, ನೆಲೆಗಳ ನಿರ್ವಹಣೆಗೆ ತಗಲುವ ವೆಚ್ಚಗಳು ಮತ್ತು ಗುಪ್ತಚರ ಕಾರ್ಯಾಚರಣೆಗಳು ಹಾಗೂ ಸೈಬರ್ ಯುದ್ಧ ವೆಚ್ಚಗಳು ಸೇರಿವೆ.

ಶಸ್ತ್ರಾಸ್ತ್ರ, ಮದ್ದುಗುಂಡುಗಳಿಗೆ 20 ರಿಂದ 30 ಬಿಲಿಯನ್ ಡಾಲರ್

ಟೊಮಾಹಕ್ ಕ್ಷಿಪಣಿಗಳು, ಜೆಎಎಸ್ಎಸ್ಎಂ, ಪೇಟ್ರಿಯಾಟ್ ಕ್ಷಿಪಣಿಗಳು, ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ ವ್ಯವಸ್ಥೆಗಳು ಮತ್ತು ಎಸ್ಎಂ-3, ಎಸ್ಎಂ-6, ಮತ್ತು ಪಿಇಆರ್ಎಸ್ಎಮ್ನಂತಹ ಅಲ್ಪ ಶ್ರೇಣಿಯ ಕ್ಷಿಪಣಿಗಳು ಸೇರಿ ಒಟ್ಟು 20 ರಿಂದ 30 ಬಿಲಿಯನ್ ಡಾಲರ್ ಖರ್ಚಾಗಿದೆ. ಪ್ರಾದೇಶಿಕ ಬೇಸ್ ಸ್ಟ್ರೈಕ್ಗಳು, ವಿಮಾನ ನಷ್ಟಗಳು, ಹಾನಿಗೊಳಗಾದ ವ್ಯವಸ್ಥೆಗಳು, ಡ್ರೋನ್ಗಳು ಮತ್ತು ರಿಪೇರಿಗಳ ರೂಪದಲ್ಲಿ 3 ಬಿಲಿಯನ್ನಿಂದ 10 ಬಿಲಿಯನ್ ಡಾಲರ್ನಷ್ಟು ನಷ್ಟ ಸಂಭವಿಸಿದೆ.

ಹೊರ್ಮುಜ್ ಜಲಸಂಧಿಯ ದಿಗ್ಬಂಧನ ಮತ್ತು ಅಮೆರಿಕದ ಆರ್ಥಿಕತೆಯು ಇಂಧನ ಬೆಲೆಗಳ ಏರಿಕೆಯಿಂದಾಗಿ 5 ಬಿಲಿಯನ್ ಡಾಲರ್ನಿಂದ 20 ಬಿಲಿಯನ್ ಡಾಲರ್ವರೆಗೆ ಅಂದಾಜು ನಷ್ಟವನ್ನು ಅನುಭವಿಸಿದೆ.

ವರದಿಗಳ ಪ್ರಕಾರ, ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕಕ್ಕೆ ದಿನಕ್ಕೆ ಸುಮಾರು 1.2 ಬಿಲಿಯನ್ ನಷ್ಟ ಸಂಭವಿಸುತ್ತದೆ ಎಂದು ಅಂದಾಜಿಸಲಾಗಿದೆ. ಒಂದು ತಿಂಗಳ ಯುದ್ಧಕ್ಕೆ ಅದು 36 ಬಿಲಿಯನ್ ಡಾಲರ್ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.