ವಾಷಿಂಗ್ಟನ್: ಸಂಧಾನ ಮಾತುಕತೆಯ ನಡುವೆಯೇ, ಇರಾನ್ ಕ್ಷಿಪಣಿ ಉಡಾವಣಾ ತಾಣಗಳು ಮತ್ತು ಬೋಟ್ಗಳನ್ನು ಗುರಿಯಾಗಿಸಿ ಅಮೆರಿಕ ಮಂಗಳವಾರ ವೈಮಾನಿಕ ದಾಳಿ ನಡೆಸಿದೆ.

ಕದನ ವಿರಾಮ ಒಪ್ಪಂದ ಮಾತುಕತೆಗಾಗಿ ಇರಾನ್ ಪ್ರತಿನಿಧಿಗಳು ಕತಾರ್ ರಾಜಧಾನಿ ದೋಹಾಕ್ಕೆ ಬಂದಿಳಿದ ಬೆನ್ನಲ್ಲೇ, ಅಮೆರಿಕ ಹೊಸ ದಾಳಿ ನಡೆಸಿರುವುದರಿಂದ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಹೆಚ್ಚಿದೆ. ಇನ್ನೊಂದೆಡೆ, ದಕ್ಷಿಣ ಲೆಬನಾನ್ನಲ್ಲಿ ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸಿದೆ.

ಅಮೆರಿಕ ಮತ್ತು ಇಸ್ರೇಲ್, ಇರಾನ್ ಮೇಲೆ ಹೊಸದಾಗಿ ದಾಳಿ ಆರಂಭಿಸಿರುವುದು, ಹೊರ್ಮುಜ್ ಜಲಸಂಧಿ ತೆರೆಯುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಗಳಿಗೆ ಹಿನ್ನಡೆ ಆಗಿದೆ. ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳ್ಳುವ ವಿಷಯದಲ್ಲಿ ಅನಿಶ್ಚಿತತೆ ಮುಂದುವರಿದಿದೆ.

‘ಇರಾನ್ ಪಡೆಗಳು ಒಡ್ಡಿರುವ ಬೆದರಿಕೆಯಿಂದ ನಮ್ಮ ಪಡೆಗಳನ್ನು ರಕ್ಷಿಸಲು ‘ಸ್ವ–ರಕ್ಷಣೆ’ ದಾಳಿ ನಡೆಸಬೇಕಾಯಿತು’ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಹೇಳಿದೆ.

ಅಬ್ಬಾಸ್ ಬಂದರು ಸಮೀಪ ಮಂಗಳವಾರ ನಸುಕಿನಲ್ಲಿ ಭಾರಿ ಸ್ಫೋಟಗಳು ನಡೆದಿರುವುದಾಗಿ ಇರಾನ್ನ ಸರ್ಕಾರಿ ಸ್ವಾಮ್ಯದ ಐಆರ್ಐಬಿ ವಾಹಿನಿ ವರದಿ ಮಾಡಿದೆ.

‘ಅಮೆರಿಕದ ಡ್ರೋನ್ಗಳನ್ನು ಹೊಡೆದುರುಳಿಸಿದ್ದೇವೆ, ಇರಾನ್ ವಾಯುಪ್ರದೇಶ ಪ್ರವೇಶಿಸಿದ ಅಮೆರಿಕದ ಯುದ್ಧ ವಿಮಾನಗಳ ಮೇಲೆ ಗುಂಡಿನ ದಾಳಿ ನಡೆಸಿದ್ದೇವೆ’ ಎಂದು ಇರಾನ್ ರೆವಲ್ಯೂಷನರಿ ಗಾರ್ಡ್ಸ್ ಕೋರ್ (ಐಆರ್ಜಿಸಿ) ಹೇಳಿದೆ.

ಯುದ್ಧ ಕೊನೆಗೊಳಿಸಲು ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲೇ ಅಮೆರಿಕ ದಾಳಿ ನಡೆಸಿರುವುದನ್ನು ಇರಾನ್ ಕಟುವಾಗಿ ಖಂಡಿಸಿದೆ. ಕದನ ವಿರಾಮ ಉಲ್ಲಂಘಿಸಿರುವುದು ಅಮೆರಿಕದ ಅಪನಂಬಿಕೆ ಮತ್ತು ವಿಶ್ವಾಸಾರ್ಹತೆಯ ಕೊರತೆಯನ್ನು ಸೂಚಿಸುತ್ತದೆ. ಇದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ’ ಎಂದು ಇರಾನ್ ಎಚ್ಚರಿಕೆ ನೀಡಿದೆ.

‘ಹೊರ್ಮುಜ್ ತೆರೆಯುತ್ತೇವೆ’

‘ಹೊರ್ಮುಜ್ ಜಲಸಂಧಿಯನ್ನು ಒಂದಲ್ಲ ಮತ್ತೊಂದು ರೀತಿಯಲ್ಲಿ ತೆರೆಯುತ್ತೇವೆ. ಸದ್ಯ ಅಲ್ಲಿ ನಡೆಯುತ್ತಿರುವುದು ಕಾನೂನುಬಾಹಿರ ಇಡೀ ಜಗತ್ತಿಗೆ ಸ್ವೀಕಾರಾರ್ಹವಲ್ಲ’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ.

‘ಇರಾನ್ ಜತೆಗಿನ ಮಾತುಕತೆ ಅಂತಿಮ ಹಂತದಲ್ಲಿತ್ತು ಆದರೆ ಹೊರ್ಮುಜ್ ಜಲಸಂಧಿ ವಿಚಾರವಾಗಿ ಇರಾನ್ ಬಿಗಿ ಪಟ್ಟು ಮುಂದುವರಿಸಿದೆ. ಅಮೆರಿಕ ದಾಳಿ ನಡೆಸಿದ್ದರೂ ಇರಾನ್ ಜತೆಗೆ ಒಪ್ಪಂದ ಮಾಡಿಕೊಳ್ಳುವ ಪ್ರಕ್ರಿಯೆ ಮುಕ್ತವಾಗಿದೆ. ಕತಾರ್ನಲ್ಲಿ ನಡೆಯುತ್ತಿರುವ ಮಾತುಕತೆಯಲ್ಲಿ ಈ ವಿಷಯವಾಗಿ ಮಹತ್ವದ ಪ್ರಗತಿ ನಿರೀಕ್ಷಿಸುತ್ತಿದ್ದೇವೆ. ಆದರೆ ಅಂತಿಮ ಒಪ್ಪಂದಕ್ಕೆ ಇನ್ನೂ ಕೆಲವು ದಿನಗಳು ಬೇಕಾಗಬಹುದು’ ಎಂದು ಅವರು ಹೇಳಿದ್ದಾರೆ.

‘ಅಮೆರಿಕದ ಗುರಾಣಿಯಲ್ಲ’

‘ಇನ್ನು ಮುಂದೆ ಪಶ್ಚಿಮ ಏಷ್ಯಾ ದೇಶಗಳು ಅಮೆರಿಕದ ಗುರಾಣಿಯಾಗಿ ಕಾರ್ಯನಿರ್ವಹಿಸುವುದಿಲ್ಲ’ ಎಂದು ಇರಾನ್ನ ಪರಮೋಚ್ಚ ನಾಯಕ ಮೊಜ್ತಾಬಾ ಖಮೇನಿ ಹೇಳಿದ್ದಾರೆ.

ಬಕ್ರೀದ್ ಹಬ್ಬದ ಪ್ರಯುಕ್ತ ನೀಡಿರುವ ಸಂದೇಶದಲ್ಲಿ ‘ತಪ್ಪುಗಳಿಂದ ಪಾಠ ಕಲಿತುಕೊಳ್ಳಿ ಕಳೆದ ಸಮಯ ಮತ್ತೆ ಮರಳಿ ಬರುವುದಿಲ್ಲ ಎಂದಿರುವ ಅವರು ಅಮೆರಿಕ ಈಗಾಗಲೇ ಪಶ್ಚಿಮ ಏಷ್ಯಾ ವಲಯದಲ್ಲಿ ಪ್ರಭಾವ ಕಳೆದುಕೊಳ್ಳುತ್ತಿದೆ. ದಿನಕಳೆದಂತೆ ಅದರ ಸ್ಥಾನಮಾನ ಕುಸಿಯುತ್ತಿದೆ. ಇನ್ನು ಮುಂದೆ ಪಶ್ಚಿಮ ಏಷ್ಯಾ ದೇಶಗಳು ಮತ್ತು ಇಲ್ಲಿನ ನೆಲವು ಅಮೆರಿಕದ ಪಡೆಗಳಿಗೆ ಗುರಾಣಿಯಾಗಿ ಕಾರ್ಯನಿರ್ವಹಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಹತರಾದ ಇರಾನ್ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಸ್ಥಾನಕ್ಕೆ ಅವರ ಪುತ್ರ ಮೊಜ್ತಾಬಾ ಖಮೇನಿ ಮಾರ್ಚ್ನಲ್ಲಿ ಆಯ್ಕೆಯಾಗಿದ್ದರು. ಆದರೆ ಅವರು ಆಯ್ಕೆಯಾದ ನಂತರ ಇದುವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

ಇರಾನ್ ಸಮೃದ್ಧೀಕರಿಸಿದ ಯುರೇನಿಯಂ ಅನ್ನು ಅಮೆರಿಕಕ್ಕೆ ಹಸ್ತಾಂತರಿಸಬೇಕು ಅಥವಾ ಇರಾನ್ನಲ್ಲೇ ಅದನ್ನು ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ ಸಮ್ಮುಖದಲ್ಲಿ ನಾಶಪಡಿಸಬೇಕು.
-ಡೊನಾಲ್ಡ್ ಟ್ರಂಪ್, ಅಮೆರಿಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.