ಶ್ರೀವ್ಪೋರ್ಟ್, ಅಮೆರಿಕ: ಕೌಟುಂಬಿಕ ಕಾರಣದಿಂದ ವ್ಯಕ್ತಿಯೊಬ್ಬ ತನ್ನ ಏಳು ಮಕ್ಕಳು ಸೇರಿದಂತೆ ಎಂಟು ಮಕ್ಕಳನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣ ಅಮೆರಿಕದ ದಕ್ಷಿಣ ಭಾಗದ ಲೂಸಿಯಾನದಲ್ಲಿ ನಡೆದಿದೆ.

ಶ್ರೀವ್ಪೋರ್ಟ್ ನಗರದಲ್ಲಿ ಈ ಘಟನೆ ನಡೆದಿದ್ದು, ಕಳೆದೆರಡು ವರ್ಷಗಳಲ್ಲಿ ಅಮೆರಿಕದಲ್ಲಿ ನಡೆದ ಅತ್ಯಂತ ದೊಡ್ಡ ಗುಂಡಿನ ದಾಳಿಯಾಗಿದೆ ಎಂದು ‘ಬಂದೂಕು ಹಿಂಸಾಚಾರ’ದ ಕುರಿತಾದ ಅಂಕಿಅಂಶಗಳಿಂದ ತಿಳಿದುಬಂದಿದೆ.

ದಾಳಿಯಲ್ಲಿ ಇಬ್ಬರು ಮಹಿಳೆಯರಿಗೂ ತೀವ್ರವಾದ ಗಾಯಗಳಾಗಿವೆ. ಇದರಲ್ಲಿ ಮೃತ ಮಕ್ಕಳ ತಾಯಿಯೂ ಸೇರಿದ್ದಾರೆ.

‘ಮೃತರಲ್ಲಿ ಮೂವರು ಗಂಡು, ಐದು ಹೆಣ್ಣುಮಕ್ಕಳಿದ್ದು, ಮೂರರಿಂದ 11 ವರ್ಷದವರಾಗಿದ್ದಾರೆ’ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಏಳು ಮಂದಿ ಮಕ್ಕಳು ಒಡಹುಟ್ಟಿದವರಾಗಿದ್ದು, ಮತ್ತೊಂದು ಮಗು ಸೋದರ ಸಂಬಂಧಿಯಾಗಿದೆ.

‘ದಾಳಿಯ ಬಳಿಕ ದಾಳಿಕೋರ ಸ್ಥಳದಿಂದ ಪರಾರಿಯಾಗಲು ಯತ್ನಿಸಿದನು. ತಕ್ಷಣವೇ ಬೆನ್ನತ್ತಿದ ಪೊಲೀಸರು ಆತನ ಬೆನ್ನುಹತ್ತಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ದಾಳಿಕೋರರನ್ನು ಶಮರ್ ಎಲ್ಕಿನ್ಸ್ (31) ಎಂದು ಗುರುತಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ದಾಳಿಗೆ ಕಾರಣ ಇನ್ನಷ್ಟೇ ತಿಳಿಯಬೇಕಿದ್ದು, ತನಿಖೆ ಮುಂದುವರಿದಿದೆ.

(ಎಎಫ್ಪಿ ವರದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.