ದುಬೈ/ವಾಷಿಂಗ್ಟನ್: ಅಮೆರಿಕ ಇರಾನ್‌ನ ಬಂದರುಗಳ ಮೇಲೆ ನೌಕಾ ದಿಗ್ಬಂಧನ ಹೇರಿದ್ದು, ನಿಯಮ ಉಲ್ಲಂಘಿಸಿ ಇರಾನ್ ಪ್ರವೇಶಿಸಲು ಯತ್ನಿಸುತ್ತಿದ್ದ ವಾಣಿಜ್ಯ ತೈಲ ಟ್ಯಾಂಕರ್ ಮೇಲೆ ಅಮೆರಿಕ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದೆ.

‘ಬೋಟ್ಸ್ವಾನಾ ಧ್ವಜ ಹೊಂದಿರುವ ‘M/T ಲೆಕ್ಸಿ’ ಎಂದು ಗುರುತಿಸಲಾದ ತೈಲ ಟ್ಯಾಂಕರ್ ಇರಾನ್‌ನ ಖಾರ್ಗ್ ದ್ವೀಪದತ್ತ ಸಾಗಲು ಯತ್ನಿಸುತ್ತಿದ್ದ ವೇಳೆ ತಡೆಯೊಡ್ಡಲಾಗಿದೆ. ಮಾರ್ಗ ಬದಲಾಯಿಸುವಂತೆ ಹಲವು ಬಾರಿ ಎಚ್ಚರಿಕೆ ನೀಡಿದ ಹೊರತಾಗಿಯೂ ಟ್ಯಾಂಕರ್ ಇರಾನ್ನತ್ತ ಹೊರಟಿತ್ತು’ ಎಂದು ಅಮೆರಿಕ ಸೇನೆಯ ಸೆಂಟ್ರಲ್ ಕಮಾಂಡ್ ತಿಳಿಸಿದೆ.

‘ತೈಲ ಟ್ಯಾಂಕರ್ ಮೇಲೆ ಹೆಲ್‌ಫೈರ್ ಕ್ಷಿಪಣಿ ದಾಳಿ ನಡೆಸಿದ್ದೇವೆ. ಈ ಕ್ರಮವು ಏಪ್ರಿಲ್ 13ರಂದು ಆರಂಭವಾದ ದಿಗ್ಬಂಧನದ ಕಾರ್ಯಾಚರಣೆಯ ಭಾಗವಾಗಿದೆ’ ಎಂದು ಅಮೆರಿಕ ಹೇಳಿದೆ.

ಇರಾನ್ನೊಂದಿಗಿನ ಮಾತುಕತೆಯು ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ, ಯುದ್ಧ ಅಂತ್ಯಗೊಳಿಸಲು ಉಭಯ ದೇಶಗಳ ಅಧಿಕಾರಿಗಳು ಮಾತುಕತೆ ನಡೆಸುತ್ತಿರುವ ನಡುವೆಯೂ, ಎರಡೂ ದೇಶಗಳು ಪರಸ್ಪರ ದಾಳಿ ನಡೆಸುತ್ತಿರುವುದರಿಂದ ಕದನ ವಿರಾಮ ಒಪ್ಪಂದ ಕುರಿತು ಅನುಮಾನ ಮೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.