ಬೀಜಿಂಗ್: ಅಧ್ಯಕ್ಷ ಷಿ ಜಿನ್ಪಿಂಗ್ ಅವರ ಆಹ್ವಾನದ ಮೇರೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೇ 13ರಿಂದ ಮೂರು ದಿನಗಳವರೆಗೆ ಚೀನಾಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಸೋಮವಾರ ಹೇಳಿದ್ದಾರೆ.

ಕಳೆದ ಒಂಬತ್ತು ವರ್ಷಗಳಲ್ಲಿ ಅಮೆರಿಕ ಅಧ್ಯಕ್ಷರ ಮೊದಲ ಚೀನಾ ಭೇಟಿ ಇದಾಗಿದೆ.

ಅಮೆರಿಕ–ಇರಾನ್ ಯುದ್ಧ, ಹೊರ್ಮುಜ್ ಜಲಸಂಧಿ ದಿಗ್ಭಂಧನಿಂದಾಗಿ ಉಂಟಾಗಿರುವ ಜಾಗತಿಕ ತೈಲ ಬಿಕ್ಕಟ್ಟು, ತೈವಾನ್ ಯುದ್ಧ ಸೇರಿದಂತೆ ಹಲವು ವಿಷಯಗಳ ಕುರಿತು ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಭೇಟಿ ನಡೆಯುತ್ತಿದೆ.

‘ಅಧ್ಯಕ್ಷ ಟ್ರಂಪ್ ಅವರು ಬುಧವಾರ ಸಂಜೆ ಬೀಜಿಂಗ್ ತಲುಪಲಿದ್ದು, ಈ ಭೇಟಿಯು ಅತ್ಯಂತ ಸಾಂಕೇತಿಕ ಮಹತ್ವವನ್ನು ಹೊಂದಿದೆ’ ಎಂದು ಅಮೆರಿಕದ ಪ್ರಧಾನ ಉಪ ಪತ್ರಿಕಾ ಕಾರ್ಯದರ್ಶಿ ಅನ್ನಾ ಕೆಲ್ಲಿ ಹೇಳಿದ್ದಾರೆ.

‘ಗುರುವಾರ ಟ್ರಂಪ್ ಮತ್ತು ಜಿನ್ಪಿಂಗ್ ಅವರ ನಡುವೆ ದ್ವಿಪಕ್ಷೀಯ ಸಭೆ ನಡೆಯಲಿದೆ. ನಂತರ 'ಟೆಂಪಲ್ ಆಫ್ ಹೆವನ್'ಗೆ ಭೇಟಿ ನೀಡಲಿದ್ದು, ಅಂದು ಅಧಿಕೃತ ಔತಣಕೂಟ ನಡೆಯಲಿದೆ’ ಎಂದು ಕೆಲ್ಲಿ ಮಾಹಿತಿ ನೀಡಿದ್ದಾರೆ.

‘ಶುಕ್ರವಾರವೂ ದ್ವಿಪಕ್ಷೀಯ ಮಾತುಕತೆಗಳು ಮುಂದುವರಿಯಲಿದೆ. ಇದೇ ವರ್ಷದ ಅಂತ್ಯದ ವೇಳೆಗೆ ಚೀನಾ ಅಧ್ಯಕ್ಷರು ಅಮೆರಿಕಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ’ ಎಂದು ಹೇಳಿದ್ದಾರೆ.

ಟ್ರಂಪ್ ಭೇಟಿ ವೇಳೆ ಉಭಯ ದೇಶಗಳ ನಡುವೆ ವ್ಯಾಪಾರ ಒಪ್ಪಂದ ಏರ್ಪಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಟ್ರಂಪ್ ಅವರ ಭೇಟಿಗೂ ಮುನ್ನ ಚೀನಾದ ಉಪ ಪ್ರಧಾನಿ ಹೆ ಲಿಫೆಂಗ್ ಅವರು ಮೇ 12 ಮತ್ತು 13 ರಂದು ದಕ್ಷಿಣ ಕೊರಿಯಾಕ್ಕೆ ತೆರಳಿ ಅಲ್ಲಿ ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರೊಂದಿಗೆ ವ್ಯಾಪಾರ ಮಾತುಕತೆ ನಡೆಸಲಿದ್ದಾರೆ ಎಂದು ಉಭಯ ದೇಶಗಳು ಭಾನುವಾರ ಪ್ರಕಟಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.