ವಾಷಿಂಗ್ಟನ್: ಇರಾನ್ ಸೇನಾ ಕಮಾಂಡರ್ ಆಗಿದ್ದ ಖಾಸಿಂ ಸುಲೇಮಾನಿ ಅವರ ಸೊಸೆ ಹಾಗೂ ಮೊಮ್ಮಗಳನ್ನು ಯುಎಸ್ ಫೆಡರಲ್ ಅಧಿಕಾರಿಗಳು ಬಂಧಿಸಿದ್ದಾರೆ.

ಖಾಸಿಂ ಸುಲೇಮಾನಿ ಸೊಸೆ ಹಮೀದೆ ಸುಲೇಮಾನಿ ಅಫ್ಶರ್ ಮತ್ತು ಅವರ ಮಗಳು ಕಾನೂನಾತ್ಮಕವಾಗಿ ಹೊಂದಿದ್ದ ಶಾಶ್ವತ ನಿವಾಸಿಗಳ ಸ್ಥಾನಮಾನವನ್ನು ರಕ್ಷಣಾ ಕಾರ್ಯದರ್ಶಿ ಮಾರ್ಕೊ ರುಬಿಯೊ ರದ್ದುಗೊಳಿಸಿದ ಬೆನ್ನಲ್ಲೇ, ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಚಿವಾಲಯ, ಹಮೀದೆ ಹಾಗೂ ಅವರ ಮಗಳು ಈಗ ಅಮೆರಿಕದ ವಲಸೆ ಹಾಗೂ ಕಸ್ಟಮ್ಸ್ ಜಾರಿ ಇಲಾಖೆಯ ವಶದಲ್ಲಿದ್ದಾರೆ ಎಂದು ಮಾಹಿತಿ ನೀಡಿದೆ.

ಡೊನಾಲ್ಡ್ ಟ್ರಂಪ್ ಅವರು ಮೊದಲ ಅವಧಿಗೆ ಅಧ್ಯಕ್ಷರಾಗಿದ್ದಾಗ (2020ರಲ್ಲಿ) ಅಮೆರಿಕ ಸೇನೆ ಬಾಗ್ದಾದ್ ಮೇಲೆ ನಡೆಸಿದ್ದ ವಾಯು ದಾಳಿ ವೇಳೆ ಸೊಲೈಮಾನಿ ಹತ್ಯೆಯಾಗಿದ್ದರು.

ಇರಾನ್ಗೆ ಬೆಂಬಲ
ಅಮೆರಿಕ ಹಾಗೂ ಇಸ್ರೇಲ್ ಪಡೆಗಳು ಇರಾನ್ ಮೇಲೆ ಫೆಬ್ರುವರಿ 28ರಂದು ಜಂಟಿ ದಾಳಿ ನಡೆಸಿದ್ದವು. ದಾಳಿ ವೇಳೆ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಹಲವು ನಾಯಕರು ಹತ್ಯೆಯಾಗಿದ್ದರು. ಇದರಿಂದ ಕೆರಳಿದ ಇರಾನ್ ಪತ್ರಿದಾಳಿಗೆ ಇಳಿದಿದೆ. ಅಮೆರಿಕ, ಇಸ್ರೇಲ್ ವಿರುದ್ಧವಷ್ಟೇ ಅಲ್ಲದೆ, ಅವುಗಳ ಮಿತ್ರ ರಾಷ್ಟ್ರಗಳ ಮೇಲೂ ಕ್ಷಿಪಣಿ, ಡ್ರೋನ್ ದಾಳಿ ನಡೆಯುತ್ತಿದೆ. ಇದರಿಂದಾಗಿ ಪಶ್ಚಿಮ ಏಷ್ಯಾದಾದ್ಯಂತ ಉದ್ವಿಗ್ನತೆ ಸೃಷ್ಟಿಯಾಗಿದೆ.

ಈ ವೇಳೆ ಹಮೀದೆ ಅವರು ಇರಾನ್ ಸರ್ಕಾರದ ನಡೆ ಹಾಗೂ ಅದರ ಕಾರ್ಯಸೂಚಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಮೀದೆ ಅವರ ಪತಿಗೆ ಅಮೆರಿಕ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಅಲಿ ಲಾರಿಜಾನಿ ಪುತ್ರಿಗೂ ನಿಷೇಧ
ಇರಾನ್ ನಾಯಕ ಅಲಿ ಲಾರಿಜಾನಿ ಅವರ ಪುತ್ರಿ ಫಾತಿಮೆಹ್ ಅರ್ದೇಶಿರ್ ಲಾರಿಜಾನಿ, ಅವರ ಪತಿ ಸಯ್ಯರ್ ಕಲಾಂತರ್ ಮೋಟಮೆಡಿ ಅವರ ಗ್ರೀನ್ ಕಾರ್ಡ್ ಅನ್ನೂ ರದ್ದುಪಡಿಸಲಾಗಿದೆ. ಸದ್ಯ ಅವರು ಅಮೆರಿಕದಲ್ಲಿ ಇಲ್ಲ. ಮುಂದೆಯೂ ದೇಶಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ ಎಂದು ಸಚಿವಾಲಯ ಪ್ರಕಟಿಸಿದೆ.

ಇರಾನ್ನಲ್ಲಿ ಭದ್ರತಾ ನೀತಿ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಲಾರಿಜಾನಿ, ಮಾರ್ಚ್ 17 ಮತ್ತು 18ರಂದು ನಡೆದ ದಾಳಿ ವೇಳೆ ಹತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.