ವಾಷಿಂಗ್ಟನ್: ಇರಾನ್ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಕ್ಕೆ ಅಮೆರಿಕ ಸೆನೆಟ್ (ಸಂಸತ್ತಿನ ಮೇಲ್ಮನೆ) ಬುಧವಾರ ಬೆಂಬಲಿಸಿದೆ.
.ಇರಾನ್ ನಿಯಂತ್ರಣದಲ್ಲಿ ಹೊರ್ಮುಜ್ ಜಲಸಂಧಿ; ರಕ್ಷಣೆ ನೀಡುತ್ತೇವೆ ಎಂದ ಟ್ರಂಪ್.
ವೈಮಾನಿಕ ಯುದ್ಧವನ್ನು ತಡೆಯಬೇಕು, ಇರಾನ್ ವಿರುದ್ಧದ ಯಾವುದೇ ಕ್ರಮಗಳಿಗೆ ಸಂಸತ್ತಿನ ಅನುಮೋದನೆಯನ್ನು ಕಡ್ಡಾಯಗೊಳಿಸಬೇಕು ಎಂದು ಮಂಡಿಸಲಾಗಿದ್ದ ದ್ವಿಪಕ್ಷೀಯ ನಿರ್ಣಯಕ್ಕೆ ಸೆನೆಟ್ನಲ್ಲಿ ಸೋಲಾಗಿದೆ,

100 ಮಂದಿ ಸದಸ್ಯರ ಸೆನೆಟ್ನಲ್ಲಿ ನಿರ್ಣಯಕ್ಕೆ 52–47 ಮತಗಳ ಅಂತರಿಂದ ಸೋಲಾಯಿತು. ಬಹುತೇಕ ಎಲ್ಲಾ ರಿಪಬ್ಲಿಕನ್ನರು ನಿರ್ಣಯದ ವಿರುದ್ಧ ಹಾಗೂ ಡೆಮಾಕ್ರಟ್ ಸಂಸದರು ಪರವಾಗಿ ಮತದಾನ ಮಾಡಿದರು.
.ನಾವು ಮಾಡದಿದ್ದರೆ ಮೊದಲು ಇರಾನ್ ದಾಳಿ ನಡೆಸುವ ಸಾಧ್ಯತೆ ಇತ್ತು: ಟ್ರಂಪ್.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿದೇಶಕ್ಕೆ ಪದೇ ಪದೇ ಸೈನ್ಯ ನಿಯೋಜನೆಯನ್ನು ನಿಯಂತ್ರಿಸಲು ಡೆಮಾಕ್ರಟ್ಗಳು ಮತ್ತು ಕೆಲವು ರಿಪಬ್ಲಿಕನ್ನರು ಈ ನಿರ್ಣಯ ಮಂಡಿಸಿದ್ದರು.

ಟ್ರಂಪ್ ಅವರ ನಿರ್ಧಾರ ಕಾನೂನು ಬದ್ಧವಾಗಿದ್ದು, ಅಮೆರಿಕದ ರಕ್ಷಣೆಗಾಗಿ ಸೀಮಿತ ದಾಳಿಗಳಿಗೆ ಆದೇಶಿಸುವುದು ಸೈನ್ಯದ ಸರ್ವೋಚ್ಚ ಕಮಾಂಡರ್ ಆಗಿ ಟ್ರಂಪ್ ಅವರ ಹಕ್ಕು ಎಂದು ಹೇಳಿ ನಿರ್ಣಯವನ್ನು ತಿರಸ್ಕರಿಸಿದ್ದಾರೆ.

(ವಿವಿಧ ಸುದ್ದಿ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)
.ಪ್ರತಿಸುಂಕ ಮರುಪಾವತಿ: ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಹಿನ್ನಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.