ವಾಷಿಂಗ್ಟನ್ (ಪಿಟಿಐ): ವೀಸಾ ನಿಯಮಗಳನ್ನು ದುರುಪ ಯೋಗ ಮಾಡಿಕೊಂಡ 10,000 ವಿದೇಶಿ ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ ಎಂದು ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ ಸಂಸ್ಥೆಯು (ಐಸಿಇ) ತಿಳಿಸಿದೆ. ಇವರಲ್ಲಿ ಭಾರತದ ಹಲವು ವಿದ್ಯಾರ್ಥಿಗಳೂ ಇದ್ದಾರೆ ಎಂದು ಅದು ಹೇಳಿದೆ. ಈ ವಿದ್ಯಾರ್ಥಿಗಳು ತಮ್ಮ ವೀಸಾದಲ್ಲಿರುವ ‘ಐಚ್ಛಿಕ ಪ್ರಾಯೋ ಗಿಕ ತರಬೇತಿ’ (ಒಪಿಟಿ) ನಿಯಮಗಳನ್ನು ದುರುಪಯೋಗ ಮಾಡಿಕೊಂಡು ನಕಲಿ ಅಥವಾ ಸಂಶಯಾಸ್ಪದ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವುದಾಗಿ ಸುಳ್ಳು ದಾಖಲೆಗಳನ್ನು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿ ವೀಸಾದ ಮೇಲೆ ಅಮೆರಿಕಕ್ಕೆ ಪ್ರವೇಶಿಸುವ ವಿದೇಶಿ ಪ್ರಜೆಗಳಿಗೆ ಒಪಿಟಿ ನಿಯಮವು 12 ತಿಂಗಳು ಅಥವಾ ಕೆಲವು ಸಂದರ್ಭಗಳಲ್ಲಿ 24 ತಿಂಗಳುಗಳ ಕಾಲ ಅಮೆರಿಕದಲ್ಲಿ ಕೆಲಸ ಮಾಡುವ ಅವಕಾಶ ನೀಡುತ್ತದೆ. ಜೊತೆಗೆ, ವಿದ್ಯಾರ್ಥಿಗಳು ಕಂಪನಿಗಳ ಪ್ರಾಯೋಜಕತ್ವದ ಮೂಲಕ ಎಚ್–1ಬಿ ಉದ್ಯೋಗ ವೀಸಾಗೆ ಬದಲಾಗಲು ಕೂಡಾ ಇದು ನೆರವಾಗುತ್ತದೆ.

‘ವಿದ್ಯಾರ್ಥಿ ವೀಸಾದ ಒಪಿಟಿ ಅಂಶವು ವಂಚನೆಯ ಕೇಂದ್ರ ಬಿಂದುವಾಗಿದೆ. ಇದರ ಮೂಲಕ ಉಂಟಾಗುವ ಭದ್ರತಾ ಬೆದರಿಕೆಗಳನ್ನು ಸಹಿಸುವುದಿಲ್ಲ’ ಎಂದು ಐಸಿಇಯ ಹಂಗಾಮಿ ನಿರ್ದೇಶಕ ಟಾಡ್ ಲಿಯಾನ್ಸ್ ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-51-297758984

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.