ಇಸ್ಲಾಮಾಬಾದ್: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಅಂತ್ಯಗೊಳಿಸುವ ನಿಟ್ಟಿನಲ್ಲಿ ಇರಾನ್ ಜೊತೆ ಶಾಂತಿ ಮಾತುಕತೆ ನಡೆಸಲು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನೇತೃತ್ವದ ನಿಯೋಗ ಪಾಕಿಸ್ತಾನಕ್ಕೆ ಆಗಮಿಸಿದೆ.

ನೂರ್ ಖಾನ್ ವಾಯುನೆಲೆಯಲ್ಲಿ ಬಂದಿಳಿದ ವ್ಯಾನ್ಸ್ ನಿಯೋಗವನ್ನು ಪಾಕಿಸ್ತಾನದ ಉಪ ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ಸಚಿವ ಇಶಾಕ್ ದರ್ ಹಾಗೂ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಬರಮಾಡಿಕೊಂಡರು.

ವ್ಯಾನ್ಸ್ ಅವರ ಜೊತೆಗೆ ಅಮೆರಿಕ ಅಧ್ಯಕ್ಷರ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ ಸಹ ಇದ್ದರು.

ಪಾಕಿಸ್ತಾನಕ್ಕೆ ತೆರಳುವ ಮೊದಲು, ಮಾತುಕತೆಗಾಗಿ ಎದುರು ನೋಡುತ್ತಿದ್ದು, ಅದು ಸಕಾರಾತ್ಮಕವಾಗಿರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು.

'ಇರಾನಿಯನ್ನರು ಉತ್ತಮ ಉದ್ದೇಶದಿಂದ ಮಾತುಕತೆ ನಡೆಸಲು ಸಿದ್ಧರಿದ್ದರೆ, ನಾವು ಖಂಡಿತವಾಗಿಯೂ ಮುಕ್ತವಾಗಿ ಕೈ ಚಾಚಲು ಸಿದ್ಧರಿದ್ದೇವೆ. ಅವರು ನಮ್ಮೊಂದಿಗೆ ಆಟವಾಡಲು ಪ್ರಯತ್ನಿಸಿದರೆ, ಅಮೆರಿಕದ ಬಳಿ ಅದು ನಡೆಯಲ್ಲ’ ಎಂದು ವ್ಯಾನ್ಸ್ ಪ್ಯಾರಿಸ್ನಲ್ಲಿ ವಿಮಾನ ಹತ್ತುವ ಮೊದಲು ಹೇಳಿದ್ದರು.

ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಖಿರ್ ಖಾಲೀಬಾಫ್, ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ನೇತೃತ್ವದ ಇರಾನ್ ನಿಯೋಗ ಬೆಳಗಿನ ಜಾವ ಇಸ್ಲಾಮಾಬಾದ್ಗೆಆಗಮಿಸಿದ್ದು, ಉಪಾಧ್ಯಕ್ಷ ಜೆ.ಡಿ, ವ್ಯಾನ್ಸ್ ನೇತೃತ್ವದ ಅಮೆರಿಕ ನಿಯೋಗದೊಂದಿಗೆ ಶೀಘ್ರ ಮಾತುಕತೆ ಆರಂಭವಾಗುವ ನಿರೀಕ್ಷೆ ಇದೆ.

ಲೆಬನಾನ್ನಲ್ಲಿ ಇಸ್ರೇಲ್ ನಡೆಸಿದ ದಾಳಿಯಿಂದಾಗಿ ಇರಾನ್ ನಿಯೋಗ ಭೇಟಿ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೋಹಗಳು ಹರಡಿದಾಡುತ್ತಿರುವ ನಡುವೆಯೇ ನಿಯೋಗವು ಇಸ್ಲಾಮಾಬಾದ್ಗೆ ತೆರಳಿದೆ. ಕದನ ವಿರಾಮ ಒಪ್ಪಂದದಲ್ಲಿ ಒಪ್ಪಿಕೊಂಡ ಷರತ್ತುಗಳನ್ನು ಪೂರೈಸಿದರೆ ನಿಯೋಗ ಮಾತುಕತೆಗಳಲ್ಲಿ ಭಾಗವಹಿಸುತ್ತದೆ ಎಂದು ಇರಾನಿನ ಮಾಧ್ಯಮಗಳನ್ನು ಉಲ್ಲೇಖಿಸಿ ಕೆಲವು ವರದಿಗಳು ಬಂದಿದ್ದವು.

ಫೆಬ್ರುವರಿ 28ರಂದು ಅಮೆರಿಕ ಮತ್ತು ಇಸ್ರೇಲ್, ಇರಾನ್ ಜಂಟಿ ದಾಳಿ ಸರ್ವೋಚ್ಚ ನಾಯಕ ಅಯಾತೊಲ್ಲಾ ಖಮೇನಿಯನ್ನು ಕೊಲ್ಲುವ ಮೂಲಕ ಸಂಘರ್ಷ ತೀವ್ರತೆ ಪಡೆದಿತ್ತು. ನಾಯಕನ ಸಾವಿನ ಬಳಿಕ ತಿರುಗಿಬಿದ್ದಿದ್ದ ಇರಾನ್, ಗಲ್ಫ್ ದೇಶಗಳಲ್ಲಿನ ಅಮೆರಿಕ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಅಲ್ಲದೇ, ಹೊರ್ಮುಜ್ ಜಲಸಂಧಿ ಬಂದ್ ಮಾಡುವ ಮೂಲಕ ಜಾಗತಿಕ ತೈಲ ಬಿಕ್ಕಟ್ಟನ್ನು ಸೃಷ್ಟಿಸಿತ್ತು.

ಈ ನಡುವೆ ಏಪ್ರಿಲ್ 7ರಂದು ಎರಡು ವಾರಗಳ ಕದನ ವಿರಾಮಕ್ಕೆ ಎರಡೂ ದೇಶಗಳು ಒಪ್ಪಿಕೊಂಡಿದ್ದವು. ಈ ಮೂಲಕ ಮಾತುಕತೆಗೆ ಮುಂದಾಗಿದ್ದವು.
.ಅಮೆರಿಕ ಜೊತೆ ಮಾತುಕತೆಗೆ ಇಸ್ಲಾಮಾಬಾದ್ಗೆ ಆಗಮಿಸಿದ ಇರಾನ್ ನಿಯೋಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.