ಟೆಹರಾನ್: ಇರಾನ್ನಲ್ಲಿ ನೆಲೆಸಿರುವ ಭಾರತೀಯರು ತನ್ನೊಂದಿಗೆ ಸಂವಹನ ಸಾಧಿಸದೆ ದೇಶದ ಗಡಿ ದಾಟಬಾರದು ಎಂದು ಟೆಹರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸೋಮವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಸರಿಯಾದ ಮಾಹಿತಿ ಅಥವಾ ಮಾರ್ಗದರ್ಶನವಿಲ್ಲದೆ ಭೂ ಮಾರ್ಗವಾಗಿ ಇರಾನ್ ಗಡಿ ದಾಟಲು ಪ್ರಯತ್ನಿಸುವ ಭಾರತೀಯರು ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾದೀತು ಎಂದು ಎಚ್ಚರಿಸಿದೆ.

'ಸದ್ಯ ಇರಾನ್ನಲ್ಲಿ ನೆಲೆಸಿರುವ ಭಾರತೀಯರು, ರಾಯಭಾರ ಕಚೇರಿಯೊಂದಿಗೆ ಮುಂಚಿತವಾಗಿ ಮತ್ತು ಸ್ಪಷ್ಟವಾಗಿ ಸಮನ್ವಯ ಸಾಧಿಸದೆ ಆ ದೇಶದ ಯಾವುದೇ ಭೂ ಗಡಿಗೆ ತಲುಪುವ ಅಥವಾ ಅದನ್ನು ದಾಟುವ ಪ್ರಯತ್ನ ಮಾಡಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ' ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

'ಯಾವುದೇ ನಾಗರಿಕರು ಸಂವಹನ ಸಾಧಿಸದೆ ಒಂದು ಬಾರಿ ಇರಾನ್ ಗಡಿ ದಾಟಿದರೆ, ಅವರಿಗೆ ನೆರವು ನೀಡಲು ರಾಯಭಾರ ಕಚೇರಿಗೆ ಸಾಧ್ಯವಾಗುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ' ಎಂದು ಹೇಳಿದೆ.

'ಭಾರತೀಯ ಮೂಲದವರೊಂದಿಗೆ ರಾಯಭಾರ ಕಚೇರಿಯು ನಿರಂತರವಾಗಿ ಸಂಪರ್ಕದಲ್ಲಿದೆ. ಅಗತ್ಯವಿರುವ ಎಲ್ಲ ನೆರವು ನೀಡಲು ಕ್ರಮ ಕೈಗೊಳ್ಳುತ್ತಿದೆ' ಎಂದು ಮಾಹಿತಿ ನೀಡಿದೆ.

ಸಹಾಯವಾಣಿ ಸಂಖ್ಯೆಯನ್ನೂ ಹಂಚಿಕೊಂಡಿದ್ದು, ಪ್ರಯಾಣ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತು ತುರ್ತು ಸಂದರ್ಭದಲ್ಲಿ ಸಂಪರ್ಕಿಸಲು ತಿಳಿಸಿದೆ.

ದೂರವಾಣಿ ಸಂಖ್ಯೆ: +98 912 810 9115, +98 912 810 9102, +98 9128109109, +98 993 217 9359

ಇ–ಮೇಲ್ ಸಂಖ್ಯೆ: cons.tehrant@mea.gov.in.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.