ಬೆಂಗಳೂರು: ಇರಾನ್- ಇಸ್ರೇಲ್ ಯುದ್ಧದ ತಲೆಬಿಸಿಯಲ್ಲಿ ಜಗತ್ತು ಇದ್ದರೆ, ಅತ್ತ ಫ್ರಾನ್ಸ್ ಅಧ್ಯಕ್ಷ ಹಾಗೂ ಇಟಲಿ ಪ್ರಧಾನಿ ಇನ್ನೇನೋ ಬಿಸಿ ಏರಿಸುವ ರೀತಿ ನಡೆದುಕೊಂಡಿರುವುದು ಭಾರೀ ಚರ್ಚೆಯಾಗುತ್ತಿದೆ.

ಇಂದು ಪ್ಯಾರಿಸ್ನಲ್ಲಿ, ಉಕ್ರೇನ್- ರಷ್ಯಾ, ಇಸ್ರೇಲ್-ಇರಾನ್ ಯುದ್ಧ ನಿಲ್ಲಿಸುವ ಉನ್ನತ ಮಟ್ಟದ ಮಾತುಕತೆ ನಡೆಯುತ್ತಿದೆ. ಈ ವೇಳೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮತ್ತು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ, ಇಬ್ಬರು ಪರಸ್ಪರ ಅಪ್ಪಿಕೊಂಡ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

'ಅರೆ ಇವರಿಬ್ಬರ ಮಧ್ಯೆ ಏನ್ ನಡಿತಿದೆ ಗುರು?' ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಇದಕ್ಕೆ ಕಾರಣ ಈ ಅಪ್ಪುಗೆ ಇಬ್ಬರು ರಾಷ್ಟ್ರ ನಾಯಕರ ಔಪಚಾರಿಕ ಅಪ್ಪುಗೆ ರೀತಿ ಇರಲಿಲ್ಲ. ಮ್ಯಾಕ್ರನ್ ಅವರು, ಮೆಲೋನಿ ಅವರನ್ನು ಬರಸೆಳೆದು ಅಪ್ಪಿಕೊಂಡಿದ್ದಲ್ಲದೇ ದೀರ್ಘವಾಗಿ ಚುಂಬಿಸಿದರು. ಒಂದು ಕ್ಷಣ ಮೆಲೋನಿ ತಬ್ಬಿಬ್ಬಾಗಿ ಸಾವರಿಸಿಕೊಂಡು ನಗುತ್ತಾ ಅಲ್ಲಿಂದ ಹೊರಟುಹೋದರು. ಕ್ಯಾಮೆರಾಗಳ ಎದುರೇ ಇಷ್ಟೆಲ್ಲಾ ನಡಿದಿದೆ.

ಅನೇಕರು ಇದನ್ನು ಅವಮಾನಕರ, ಮುಜುಗರದ ಕ್ಷಣ ಎಂದು ಟೀಕಿಸಿದ್ದಾರೆ. ಇನ್ನೂ ಕೆಲವರು ಜಗತ್ತಿಗೆ ಯುದ್ಧದ ಚಿಂತೆಯಾದರೆ ಇವರಿಗೆ ಇನ್ನೇನೋ ಚಿಂತೆ ಎಂದು ಕುಹಕವಾಡಿದ್ದಾರೆ. ಇನ್ನು ಮೆಲೋನಿ ಅವರ ಈ ಘಟನೆ ಬಗ್ಗೆ ಭಾರತದಲ್ಲಿ ಮೋದಿ ಅಭಿಮಾನಿಗಳು ಏನು ಹೇಳುತ್ತಾರೆ ಎಂಬುದನ್ನು ನೋಡಬೇಕಿದೆ.

ಯುರೋಪಿಯನ್ ಯೂನಿಯನ್ನ ಪ್ರಮುಖ ನಿರ್ಧಾರಗಳು ಮತ್ತು ವಲಸೆ ನೀತಿಗಳ ವಿಷಯದಲ್ಲಿ ಮ್ಯಾಕ್ರನ್ ಮತ್ತು ಮೆಲೋನಿ ನಡುವೆ ಆಗಾಗ ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳುತ್ತವೆ. ಆದರೂ ಇವರಿಬ್ಬರ ದೇಹಭಾಷೆಯನ್ನು ರಾಜಕೀಯ ವಿಶ್ಲೇಷಕರು ಸೂಕ್ಷ್ಮವಾಗಿ ನೋಡುತ್ತಿದ್ದಾರೆ.

ಈ ಮಾತುಕತೆಯಲ್ಲಿ ಪ್ರಮುಖವಾಗಿ ಇರಾನ್- ಇಸ್ರೇಲ್, ಉಕ್ರೇನ್ ಯುದ್ಧ, ಯುರೋಪಿನ ಭದ್ರತೆ ಮತ್ತು ಆರ್ಥಿಕ ಸಹಕಾರದ ಬಗ್ಗೆ ಚರ್ಚಿಸಲಾಗಿದೆ ಎಂದು ವರದಿಯಾಗಿದೆ. ಒಟ್ಟಾರೆಯಾಗಿ, ಗಂಭೀರ ರಾಜಕೀಯ ಚರ್ಚೆಗಳಿಗಿಂತಲೂ ಈ ಇಬ್ಬರು ನಾಯಕರ ನಡುವಿನ ಅಸಹಜವೆನಿಸುವ ಸಂವಹನದ ವಿಡಿಯೋ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಗಮನ ಸೆಳೆಯುತ್ತಿದೆ. ಈ ಕುರಿತು ಹಲವು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.