ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು ಒಂದೆಡೆ ಮನುಷ್ಯರ ಜೀವನವನ್ನು ನಾಶ ಮಾಡುತ್ತಿದ್ದರೆ ಮತ್ತೊಂದೆಡೆ ಪ್ರಾಣಿ–ಪಕ್ಷಿಗಳಿಂದ ಹಿಡಿದು ವನ್ಯಜೀವಿ ಸಂಕುಲಕ್ಕೆ ಮಾರಕವಾಗಿ ಪರಿಣಮಿಸಿದೆ. ಅದರಲ್ಲೂ ಪ್ರಸ್ತುತ ಇರಾನ್ ಮೇಲೆ ನಡೆಯುತ್ತಿರುವ ಸತತ ದಾಳಿಯು ವಲಸೆ ಹಕ್ಕಿಗಳ ಮೇಲೆ ಅಗಾಧ ಪರಿಣಾಮ ಬೀರುತ್ತಿದೆ ಎಂದು ವನ್ಯಜೀವಿ ತಜ್ಞರು ಆತಂಕ ಹೊರಹಾಕಿದ್ದಾರೆ.

ಇರಾನ್ ದೇಶವು ಯುರೋಪ್, ಏಷ್ಯಾ ಮತ್ತು ಆಫ್ರಿಕಾದ ನಡುವೆ ಸಂಚರಿಸಲು ಹಕ್ಕಿಗಳು ಬಳಸುವ ಪ್ರಮುಖ 'ಆಫ್ರೋ-ಯುರೇಷಿಯನ್' ವಲಸೆ ಮಾರ್ಗಗಳ ಮಧ್ಯದಲ್ಲಿದೆ. ಈ ಮಾರ್ಗವು ಪ್ರತಿ ವರ್ಷ ನೂರಾರು ಜಾತಿಯ ವಲಸೆ ಹಕ್ಕಿಗಳಿಗೆ ಅತ್ಯಗತ್ಯವಾಗಿವೆ. ಇರಾನ್ನ ಜೌಗು ಪ್ರದೇಶಗಳು ಮತ್ತು ಕರಾವಳಿ ವಿವಿಧ ಖಂಡಗಳ ನಡುವೆ ಪ್ರಯಾಣಿಸುವ ಹಕ್ಕಿಗಳಿಗೆ ಪ್ರಮುಖ ವಿಶ್ರಾಂತಿ ತಾಣಗಳಾಗಿವೆ. ಇಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯಿಂದ ವಲಸೆ ಹಕ್ಕಿಗಳು ತಮ್ಮ ಸಾಂಪ್ರದಾಯಿಕ ಮಾರ್ಗದಿಂದ ವಿಮುಖವಾಗುವ ಸಾಧ್ಯತೆಯಿದೆ ಎಂದು ರಷ್ಯಾದ ವಿಜ್ಞಾನಿಗಳು ಎಚ್ಚರಿಸಿದ್ದಾರೆ.

‘ಸೇನಾ ಸಂಘರ್ಷಗಳು ಕೇವಲ ಮನುಷ್ಯರ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ಸ್ಫೋಟಗಳು, ತೈಲ ಮತ್ತು ಅನಿಲ ಘಟಕಗಳ ಮೇಲಿನ ದಾಳಿಯಿಂದ ಹರಡುವ ಹೊಗೆಯಿಂದಾಗಿ ವನ್ಯಜೀವಿಗಳು ಮತ್ತು ಪರಿಸರ ವ್ಯವಸ್ಥೆಯ ಮೇಲೆ ತೀವ್ರ ಒತ್ತಡ ಉಂಟಾಗುತ್ತದೆ’ ಎಂದು ವನ್ಯಜೀವಿ ತಜ್ಞ,ಲೇಖಕ ಡಾ. ರೆಜಾ ಖಾನ್ ಅವರು ‘ಖಲೀಜ್ ಟೈಮ್ಸ್’ ಸಂದರ್ಶನದಲ್ಲಿ ಹೇಳಿದ್ದಾರೆ.

‘ಈ ಹೊಗೆಯಲ್ಲಿ ಸಲ್ಫರ್ ಸೇರಿದಂತೆ ವಿಷಕಾರಿ ಅನಿಲಗಳಿದ್ದು, ಅವು ಪಕ್ಷಿಗಳಲ್ಲಿ ಉಸಿರಾಟದ ತೊಂದರೆಗೆ ಕಾರಣವಾಗಬಹುದು. ಅಲ್ಲದೇ ಈ ಹೊಗೆಯು ಕೀಟಗಳ ಚಟುವಟಿಕೆಗೆ ಅಡ್ಡಿಪಡಿಸುವುದರಿಂದ ಹಕ್ಕಿಗಳಿಗೆ ಆಹಾರದ ಕೊರತೆಯೂ ಉಂಟಾಗಲಿದೆ’ ಎಂದು ಅವರು ವಿವರಿಸಿದ್ದಾರೆ.

‘ಕೊಲ್ಲಿ ತೀರದಲ್ಲಿರುವ ಜೌಗು ಪ್ರದೇಶಗಳು ಮತ್ತು ಮ್ಯಾಂಗ್ರೋವ್ ಕಾಡುಗಳು ಫ್ಲೆಮಿಂಗೊಗಳು, ಬಕಗಳು ಮತ್ತು ಕಡಲ ಹಕ್ಕಿಗಳಿಗೆ ಅತ್ಯಗತ್ಯ ತಂಗುದಾಣಗಳಾಗಿವೆ. ಇಲ್ಲಿ ಉಂಟಾಗುವ ಯಾವುದೇ ಪರಿಸರ ವ್ಯತ್ಯಯವು ಪಕ್ಷಿ ಸಂಕುಲದ ಮೇಲೆ ಪರಿಣಾಮ ಬೀರುತ್ತದೆ’ ಎಂದಿದ್ದಾರೆ.

ಪಕ್ಷಿ ವೀಕ್ಷಕ ಖಲೀಫಾ ಅಲ್ ಧಾಹೇರಿ ಮಾತನಾಡಿ, ‘ಪ್ರಸ್ತುತ ಪರಿಸ್ಥಿತಿಯು 1991ರ ಕೊಲ್ಲಿ ಯುದ್ಧದ್ದಷ್ಟು ಭೀಕರವಾಗಿಲ್ಲ. ಪ್ರಾದೇಶಿಕವಾಗಿ ಪರಿಸ್ಥಿತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ನಿಭಾಯಿಸಲಾಗುತ್ತಿದೆ. ವಲಸೆ ಹಕ್ಕಿಗಳ ಸಂಚಾರಕ್ಕೆ ದೊಡ್ಡ ಮಟ್ಟದ ಅಡ್ಡಿಯಾಗಿರುವ ಬಗ್ಗೆ ಇದುವರೆಗೆ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ’ ಎಂದು ಹೇಳಿದ್ದಾರೆ.

ರಾತ್ರಿ ದಾಳಿ ಅಪಾಯ:

ರಾತ್ರಿ ಹೊತ್ತು ನಡೆಸುವ ದಾಳಿಗಳು ವಲಸೆ ಹಕ್ಕಿಗಳ ಸಂಚಾರಕ್ಕೆ ದೊಡ್ಡ ತೊಡಕುಂಟು ಮಾಡುತ್ತಿವೆ. ರಾತ್ರಿ ಹೊತ್ತು ನೈಸರ್ಗಿಕ ಬೆಳಕನ್ನು ಅವಲಂಬಿಸಿ ಸಂಚಲನ ನಡೆಸುವ ಹಕ್ಕಿಗಳಿಗೆ ಬಾಂಬ್, ಕ್ಷಿಪಣಿ ಸ್ಪೋಟದಿಂದ ಹೊರಹೊಮ್ಮುವ ಕೃತಕ ಬೆಳಕಿನಿಂದ ಗೊಂದಲಕ್ಕೊಳಗಾಗುತ್ತವೆ. ಇದರಿಂದ ಹಕ್ಕಿಗಳಿಗೆ ದಿಕ್ಕು ತಪ್ಪಿದಂತಾಗುವ ಸಾಧ್ಯತೆಯಿದೆ. ಇದು ವಲಸೆ ಮತ್ತು ಸಂತಾನೋತ್ಪತ್ತಿ ಎರಡಕ್ಕೂ ಅಡ್ಡಿಪಡಿಸುತ್ತದೆ ಎನ್ನುತ್ತಾರೆ ತಜ್ಞರು.

ಯುದ್ಧಭೂಮಿಯನ್ನೂ ಮೀರಿದ ಜಾಗತಿಕ ಪರಿಣಾಮ

ಯುದ್ಧವು ಭೌಗೋಳಿಕವಾಗಿ ಒಂದು ಪ್ರದೇಶಕ್ಕೆ ಸೀಮಿತವಾಗಿದ್ದರೂ, ಅದರ ಪರಿಣಾಮಗಳು ಜಾಗತಿಕವಾಗಿವೆ. ವಲಸೆ ಹಕ್ಕಿಗಳು ಒಂದು ಖಂಡದಿಂದ ಮತ್ತೊಂದು ಖಂಡಕ್ಕೆ ಸಂಚರಿಸುತ್ತವೆ. ಒಂದು ಪ್ರದೇಶದಲ್ಲಿನ ಅಡಚಣೆಗಳು ಇಡೀ ಪರಿಸರ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು.

ಇರಾನ್ನಲ್ಲಿ ನಡೆಯುವ ಯುದ್ಧದಿಂದ ಹಕ್ಕಿಗಳ ವಲಸೆ ಮಾರ್ಗಕ್ಕೆ ಧಕ್ಕೆ ಬರುತ್ತಿದ್ದು, ಇದು ಯುರೋಪ್, ರಷ್ಯಾ ಮತ್ತು ಆಫ್ರಿಕಾದ ಪಕ್ಷಿ ಸಂಕುಲದ ಮೇಲೆ ಪ್ರಭಾವ ಬೀರಬಹುದು.

1991ರ ಕೊಲ್ಲಿ ಯುದ್ಧದ ಸಂದರ್ಭದಲ್ಲಿ ಬೃಹತ್ ತೈಲ ಸೋರಿಕೆಯಿಂದ ಕರಾವಳಿ ಪ್ರದೇಶಗಳು ಕಲುಷಿತಗೊಂಡು ಅರೇಬಿಯನ್ ಕೊಲ್ಲಿಯಲ್ಲಿ ಸುಮಾರು 20 ಸಾವಿರದಿಂದ 30 ಸಾವಿರ ಕಡಲ ಹಕ್ಕಿಗಳು ಸಾವಿಗೀಡಾಗಿರುವುದು ಇದಕ್ಕೊಂದು ನಿದರ್ಶನವಾಗಿದೆ.

ಈಗಾಗಲೇ ಹವಾಮಾನ ಬದಲಾವಣೆ ಮತ್ತು ಆವಾಸಸ್ಥಾನದ ನಾಶದಿಂದ ಒತ್ತಡದಲ್ಲಿರುವ ವಲಸೆ ಹಕ್ಕಿಗಳು ಯುದ್ಧದಿಂದ ಈಗ ಮತ್ತೊಂದು ಅಸ್ತಿತ್ವದ ಭೀತಿಯನ್ನು ಎದುರಿಸುತ್ತಿವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.