ಕೊಲ್ಲಿ ದೇಶಗಳ ವಿರುದ್ಧ ಇರಾನ್ ನಡೆಸುತ್ತಿರುವ ತೀವ್ರ ದಾಳಿಗಳನ್ನು ಕೂಡಲೇ ನಿಲ್ಲಿಸುವಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಒತ್ತಾಯಿಸಿದೆ. ಈ ಸಂಬಂಧ ಭದ್ರತಾ ಮಂಡಳಿಯು ಇರಾನ್ ವರ್ತನೆಯನ್ನು 13–0 ಮತಗಳಿಂದ ತೀವ್ರವಾಗಿ ಖಂಡಿಸಿದೆ. ಇರಾನ್ನ ಮಿತ್ರ ದೇಶಗಳಾದ ಚೀನಾ ಮತ್ತು ರಷ್ಯಾ ದೇಶಗಳು ಮತದಾನದಿಂದ ದೂರ ಉಳಿದವು

ಯುದ್ಧದ ಮೊದಲ ವಾರದಲ್ಲಿ ಅಮೆರಿಕಕ್ಕೆ ₹1.04 ಲಕ್ಷ ಕೋಟಿ (11.3 ಬಿಲಿಯನ್ ಡಾಲರ್) ವೆಚ್ಚವಾಗಿದೆ. ಯುದ್ಧ ಸಾಮಗ್ರಿಗಳಿಗೇ ₹46 ಸಾವಿರ ಕೋಟಿ (5 ಬಿಲಿಯನ್ ಡಾಲರ್) ಖರ್ಚಾಗಿದೆ ಎಂದು ಪೆಂಟಗನ್ ಅಮೆರಿಕದ ಸಂಸತ್ತಿಗೆ ವರದಿ ಮಾಡಿದೆ ಎಂದು ಮೂಲಗಳು ತಿಳಿಸಿವೆ

ಇಂಧನ ಭದ್ರತೆ ಕಳವಳ ಹೆಚ್ಚಾದ ಬೆನ್ನಲ್ಲೇ ಅಂತರರಾಷ್ಟ್ರೀಯ ಇಂಧನ ಸಂಸ್ಥೆಯು ತನ್ನ ಇತಿಹಾಸದಲ್ಲಿಯೇ ಅತಿದೊಡ್ಡ ಪ್ರಮಾಣದಷ್ಟು ಅಂದರೆ 400 ಮಿಲಿಯನ್ ಬ್ಯಾರೆಲ್ ತೈಲವನ್ನು ಬಿಡುಗಡೆ ಮಾಡಲು ಒಪ್ಪಿದೆ. ಅಮೆರಿಕ ಸಹ ಮುಂದಿನ ವಾರದಲ್ಲಿ 172 ಮಿಲಿಯನ್ ಬ್ಯಾರೆಲ್ ತೈಲ ಬಿಡುಗಡೆಗೆ ಯೋಜಿಸಿದೆ

ಇರಾಕ್ನ ಖೋರ್ ಅಲ್ ಜುಬೈರ್ ಬಂದರಿನ ಬಳಿ ಆಸ್ಟ್ರೇಲಿಯಾದ ತೈಲ ಹಡಗಿನ ಮೇಲೆ ಡ್ರೋನ್ ದಾಳಿ ನಡೆದಿದೆ. ನೌಕೆಯ 25 ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ಇರಾಕ್ನ ಅಧಿಕಾರಿಗಳು ತಿಳಿಸಿದ್ದಾರೆ

ಲೆಬನಾನ್ನ ಬೈರೂತ್ನ ಕಡಲತೀರದಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಏಳು ಜನರು ಮೃತಪಟ್ಟಿದ್ದು 21 ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಸಂಘರ್ಷ ಆರಂಭವಾದಾಗಿನಿಂದ ಲೆಬನಾನ್ನಲ್ಲಿ 634 ಜನರು ಮೃತಪಟ್ಟಿದ್ದು 7.59 ಲಕ್ಷ ಜನರನ್ನು ವಿವಿಧೆಡೆ ಸ್ಥಳಾಂತರಗೊಂಡಿದ್ದಾರೆ

ಹೊರ್ಮುಜ್ ಜಲಸಂಧಿಯಲ್ಲಿ ಸಾಗುವ ತೈಲ ಟ್ಯಾಂಕರ್ಗಳಿಗೆ ಅಮೆರಿಕ ನೌಕಾಪಡೆಯು ಸದ್ಯಕ್ಕೆ ಎಸ್ಕಾರ್ಟ್ ಕೊಡಲು ಸಾಧ್ಯವಿಲ್ಲ. ಪ್ರಸ್ತುತ ನಮ್ಮ ಎಲ್ಲ ಪಡೆಗಳು ಇರಾನ್ ಮೇಲಿನ ದಾಳಿಯಲ್ಲಿ ನಿರತವಾಗಿವೆ. ಈ ತಿಂಗಳ ಅಂತ್ಯದೊಳಗೆ ನಮ್ಮ ನೌಕಾಪಡೆ ಎಸ್ಕಾರ್ಟ್ ಕೊಡಲು ಸಾಧ್ಯವಾಗಬಹುದು ಎಂದು ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ತಿಳಿಸಿದ್ದಾರೆ

ಕತಾರ್ನಲ್ಲಿ ಸಿಲುಕಿದ್ದ 500ಕ್ಕೂ ಹೆಚ್ಚು ಭಾರತೀಯರನ್ನು ನವದೆಹಲಿ ಮತ್ತು ಇತರ ಸ್ಥಳಗಳಿಗೆ ಸುರಕ್ಷಿತವಾಗಿ ಕಳುಹಿಸಲಾಗಿದೆ ಎಂದು ಕತಾರ್ನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.