ಟೆಹರಾನ್: ಪಶ್ಚಿಮ ಏಷ್ಯಾದಲ್ಲಿ ಹರಡಿರುವ ಮತ್ತು ಜಾಗತಿಕ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿರುವ ಯುದ್ಧದಲ್ಲಿ ಸಹಾಯ ಮಾಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಿತ್ರರಾಷ್ಟ್ರಗಳ ಮೇಲೆ ಒತ್ತಡ ಹೇರುತ್ತಿರುವ ಬೆನ್ನಲ್ಲೇ, ಸೋಮವಾರ ರಾತ್ರಿಯಿಡೀ ನಡೆದ ಬಾಂಬ್ ದಾಳಿಯ ನಂತರ ಟೆಹರಾನ್ನಲ್ಲಿ ಭೀಕರ ಸ್ಫೋಟಗಳು ಸಂಭವಿಸಿವೆ.

ಕಚ್ಚಾ ಮತ್ತು ದ್ರವೀಕೃತ ನೈಸರ್ಗಿಕ ಅನಿಲ ಸಾಗಣೆಗೆ ಪ್ರಮುಖ ಜಲಮಾರ್ಗವಾದ ಹೊರ್ಮುಜ್ ಜಲಸಂಧಿಯಲ್ಲಿ ಸಾಗುವ ಹಡಗುಗಳಿಗೆ ರಕ್ಷಣೆ ಒದಗಿಸಲು ಸಹಾಯ ಮಾಡಬೇಕು ಎಂಬ ಟ್ರಂಪ್ ಅವರ ಬೇಡಿಕೆಯನ್ನು ವಿವಿಧ ದೇಶಗಳು ತಿರಸ್ಕರಿಸಿದ ನಂತರ ಮಂಗಳವಾರ ತೈಲ ಬೆಲೆಗಳು ಶೇ 5ರಷ್ಟು ಏರಿಕೆಯಾಗಿವೆ.

ಮೂರನೇ ವಾರಕ್ಕೆ ಕಾಲಿಟ್ಟಿರುವ ಈ ಯುದ್ಧವು ನೂರಾರು ಜನರನ್ನು ಬಲಿ ಪಡೆದಿದೆ. ಇಸ್ರೇಲ್ ಮತ್ತು ಕೊಲ್ಲಿ ರಾಷ್ಟ್ರಗಳ ಮೇಲೆ ಇರಾನ್ ಪ್ರತೀಕಾರದ ದಾಳಿಗಳನ್ನು ನಡೆಸುತ್ತಿದೆ. ಇನ್ನೊಂದೆಡೆ, ಲೆಬನಾನ್ನಲ್ಲಿನ ಹಿಜ್ಬುಲ್ಲಾ ನೆಲೆಗಳನ್ನು ಗುರಿಯಾಗಿಸಿ ಇಸ್ರೇಲ್ ದಾಳಿಯನ್ನು ತೀವ್ರಗೊಳಿಸಿದೆ.

ಈ ಯುದ್ಧದ ಕಾರಣದಿಂದಾಗಿ ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದಾರೆ. ವಿಶೇಷವಾಗಿ ಲೆಬನಾನ್ ಮತ್ತು ಇರಾನ್ನಲ್ಲಿ ಇದು ಹೆಚ್ಚು ಕಂಡುಬಂದಿದೆ.

ಇರಾನ್ ತನ್ನ ನೆರೆಯ ಕಚ್ಚಾ ತೈಲ ಉತ್ಪಾದನಾ ರಾಷ್ಟ್ರಗಳಲ್ಲಿನ ಇಂಧನ ಘಟಕಗಳನ್ನು ಗುರಿಯಾಗಿಸಿಕೊಂಡಿದೆ.

‘ಕೃತಘ್ನ ರಾಷ್ಟ್ರಗಳು’

ಹೊರ್ಮುಜ್ ಜಲಸಂಧಿಯಲ್ಲಿ ತೈಲ ಟ್ಯಾಂಕರ್ಗಳಿಗೆ ಬೆಂಗಾವಲಾಗಿ ಯುದ್ಧನೌಕೆಗಳನ್ನು ಕಳುಹಿಸಬೇಕೆಂಬ ತಮ್ಮ ಬೇಡಿಕೆಯನ್ನು ಹಲವು ದೇಶಗಳು ತಿರಸ್ಕರಿಸಿದ ನಂತರ ಟ್ರಂಪ್ ಅವರು ಮಿತ್ರರಾಷ್ಟ್ರಗಳ ವಿರುದ್ಧ ಹರಿಹಾಯ್ದಿದ್ದಾರೆ.

‘ಇವು ಕೃತಘ್ನ ರಾಷ್ಟ್ರಗಳು’ ಎಂದು ಆರೋಪಿಸಿದ್ದಾರೆ. ವಾಷಿಂಗ್ಟನ್ನಲ್ಲಿ ನಡೆದ ಶ್ವೇತಭವನದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್ ‘ಕೆಲ ರಾಷ್ಟ್ರಗಳು ತುಂಬಾ ಉತ್ಸಾಹ ತೋರಿವೆ. ಕೆಲವು ತೋರಿಸಿಲ್ಲ. ನಾವು ಹಲವು ವರ್ಷಗಳಿಂದ ಸಹಾಯ ಮಾಡುತ್ತಿರುವ ಹಾಗೂ ಹೊರಗಿನ ದಾಳಿಗಳಿಂದ ರಕ್ಷಿಸಿರುವ ರಾಷ್ಟ್ರಗಳು ಅಷ್ಟೊಂದು ಉತ್ಸಾಹ ತೋರಿಸಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ಸಹಾಯ ಮಾಡಲು ಯುದ್ಧನೌಕೆಗಳನ್ನು ಕಳುಹಿಸಲು ಸಾಧ್ಯವಿಲ್ಲ’ ಎಂದು ಜರ್ಮನಿ ಸ್ಪೇನ್ ಇಟಲಿ ಜಪಾನ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಅಮೆರಿಕದ ಪಾಲುದಾರ ರಾಷ್ಟ್ರಗಳು ಹೇಳಿವೆ.

ದಿನದ ಬೆಳವಣಿಗೆಗಳು

* ಬಾಗ್ದಾದ್ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯನ್ನು ಗುರಿಯಾಗಿಸಿ ಮೂರು ಡ್ರೋನ್ ಮತ್ತು 4 ರಾಕೆಟ್ಗಳಿಂದ ದಾಳಿ

* ಇರಾನ್ ಸೇನೆಯಿಂದ 10 ಮಂದಿ ‘ವಿದೇಶಿ ಬೇಹುಗಾರರ’ ಬಂಧನ

* ಕ್ಷಿಪಣಿ ಅವಶೇಷಗಳು ಬಿದ್ದ ಪರಿಣಾಮ ಅಬುದಾಭಿಯಲ್ಲಿ ಒಬ್ಬರ ಸಾವು. ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟಿನಿಂದಾಗಿ ಯುಎಇಯಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆ

* ಯುಎಇಯ ಫುಜೈರಾದ ತೈಲ ಕೈಗಾರಿಕಾ ಪ್ರದೇಶದ ಮೇಲೆ ದಾಳಿ. ಬೆಂಕಿ ಹೊತ್ತಿಕೊಂಡಿದ್ದು, ಪ್ರಾಣ ಹಾನಿ ಸಂಭವಿಸಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.