ವಾಷಿಂಗ್ಟನ್: ಶ್ವೇತಭವನದಲ್ಲಿ ನಿರ್ಮಾಣ ಮಾಡಲಾಗುವ ಬಾಲ್ರೂಮ್ ಕೆಳಗೆ ಅಮೆರಿಕ ಸೇನೆಯು ಬೃಹತ್ ಸಂಕೀರ್ಣ ನಿರ್ಮಾಣ ಮಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
.ಇರಾನ್ನಲ್ಲಿ ಆಡಳಿತ ಬದಲಾವಣೆ ಗುರಿ ಈಡೇರಿದೆ, ಶೀಘ್ರ ಕದನ ವಿರಾಮ: ಟ್ರಂಪ್.
‘ಬಾಲ್ರೂಮ್ನ ಕೆಳಗೆ ಸೇನೆಯಿಂದ ಬೃಹತ್ ಸಂಕೀರ್ಣ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ, ಅದು ನಿಗದಿತ ಅವಧಿಗಿಂತ ಮುನ್ನವೇ ಪೂರ್ಣಗೊಳ್ಳಲಿದೆ’ ಎಂದು ಏರ್ಫೋರ್ಸ್ ಒನ್ ವಿಮಾನದಲ್ಲಿ ಪತ್ರಕರ್ತರೊಂದಿಗೆ ಹೇಳಿದ್ದಾರೆ.

ಕಳೆದ ಅಕ್ಟೋಬರ್ನಲ್ಲಿ, ಔತಣಕೂಟ ಮತ್ತು ಸರ್ಕಾರಿ ಭೋಜನಕೂಟಗಳನ್ನು ಆಯೋಜಿಸಲು ವಿಶಾಲವಾದ ಬಾಲ್ರೂಮ್ ನಿರ್ಮಿಸುವ ಉದ್ದೇಶದಿಂದ ವೈಟ್ ಹೌಸ್ನ ಒಂದು ಪಾರ್ಶ್ಚವನ್ನೇ ಧ್ವಂಸಗೊಳಿಸಲಾಗಿತ್ತು.

ಈ ಬಾಲ್ರೂಮ್ ನಿರ್ಮಾಣದ ಬಗ್ಗೆ ಆಗಾಗ್ಗೆ ಟ್ರಂಪ್ ಮಾಹಿತಿ ನೀಡುತ್ತಿದ್ದಾರೆ.
.ಇರಾನ್ ಜೊತೆ ಮಾತುಕತೆ ಉತ್ತಮ ರೀತಿಯಲ್ಲಿ ಸಾಗುತ್ತಿದೆ: ಡೊನಾಲ್ಡ್ ಟ್ರಂಪ್.
ಮಧ್ಯಪ್ರಾಚ್ಯದ ಯುದ್ಧದ ಬಗ್ಗೆ ಮಾಹಿತಿ ನೀಡಲು ಕರೆಯುತ್ತಿದ್ದ ಪತ್ರಿಕಾಗೋಷ್ಠಿಯಲ್ಲಿ ಕೂಡ ಈ ಬಾಲ್ರೂಮ್ ಬಗ್ಗೆ ಪ್ರಸ್ತಾಪಿಸಿದ್ದರು. ನಾವು ಅದ್ಭುತವಾದ ಶಿಲೆಗಳನ್ನು ಬಳಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಕಳೆದ ಒಂದು ಶತಮಾನದಲ್ಲಿ ಶ್ವೇತಭವನದಲ್ಲಿ ಕೈಗೊಂಡ ಅತ್ಯಂತ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಬಾಲ್ರೂಮ್ ಒಂದಾಗಿದ್ದು, ಇದರ ಖಾಸಗಿ ಅನುದಾನಿತ ಬಜೆಟ್ 200 ಮಿಲಿಯನ್ ಡಾಲರ್ನಿಂದ 400 ಮಿಲಿಯನ್ ಡಾಲರ್ಗೆ ದ್ವಿಗುಣಗೊಂಡಿದೆ.

(ಆಧಾರ: ರಾಯಿಟರ್ಸ್, ಎಪಿ)
.No Kings Day: ಟ್ರಂಪ್ ವಿರುದ್ಧ ಯುರೋಪ್, ಅಮೆರಿಕದಾದ್ಯಂತ ಪ್ರತಿಭಟನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.