ವಾಷಿಂಗ್ಟನ್: ಯುದ್ಧ ಗೆದ್ದಿದ್ದೇವೆ ಎಂದು ಘೋಷಿಸಿ, ಇರಾನ್ ವಿರುದ್ಧದ ಸಂಘರ್ಷದಿಂದ ಅಮೆರಿಕ ಹೊರಬರಬೇಕು ಎಂದು ಶ್ವೇತಭವನದ ಅಧಿಕಾರಿ ಡೇವಿಡ್ ಸ್ಯಾಕ್ಸ್ ಹೇಳಿದ್ದಾರೆ.

'ವಿಜಯ ಘೋಷಿಸಲು ಮತ್ತು ಹೊರಬರಲು ಇದು ಒಳ್ಳೆಯ ಸಮಯ' ಎಂದು ಆಲ್-ಇನ್ ಪಾಡ್ಕಾಸ್ಟ್ನಲ್ಲಿ ಅವರು ಹೇಳಿದ್ದಾರೆ.

'ಅಮೆರಿಕವು ಇರಾನ್ನ ಮಿಲಿಟರಿ ಸಾಮರ್ಥ್ಯಗಳನ್ನು ಕುಗ್ಗಿಸಿದೆ. ನನ್ನ ಪ್ರಕಾರ ಉದ್ವಿಗ್ನತೆಯನ್ನು ಶಮನಗೊಳಿಸುವುದು ಎಂದರೆ ಇರಾನ್ನೊಂದಿಗೆ ಕದನ ವಿರಾಮ ಒಪ್ಪಂದ ಅಥವಾ ಮಾತುಕತೆಯ ಮೂಲಕ ಇತ್ಯರ್ಥಪಡಿಸುವುದು' ಎಂದಿದ್ದಾರೆ.
.ಅನಾಥವಾಗಿದ್ದ 46 ಗಿಳಿಮರಿಗಳಿಗೆ ತಾಯಿಯಾದ 3ಡಿ ಪ್ರತಿಕೃತಿ!.Podcast | ತಪ್ಪುಗಳ ತಿದ್ದಿಕೊಳ್ಳದ ಕೆಪಿಎಸ್ಸಿ: ಅಭ್ಯರ್ಥಿಗಳ ಕನಸುಗಳೊಂದಿಗೆ ಆಟ.
ಇರಾನ್ ಹೊರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಿದ ನಂತರ ಜಾಗತಿಕ ತೈಲ ಮತ್ತು ಅನಿಲ ಸರಬರಾಜಿಗೆ ತೊಡಕಾಗಿದ್ದು, ಬೆಲೆ ಏರುಗತಿಯಲ್ಲಿದೆ. ಈ ಮಾರ್ಗದ ಮೂಲಕ ಶೇ 20ರಷ್ಟು ತೈಲ ಸರಬರಾಜಾಗುತ್ತದೆ.

ಇರಾನ್ ವಿರುದ್ಧ ಇಸ್ರೇಲ್ ಹಾಗೂ ಅಮೆರಿಕವು ಜಂಟಿ ದಾಳಿ ಆರಂಭಿಸಿ ಅಲ್ಲಿನ ಸರ್ವೋಚ್ಛ ನಾಯಕ ಅಲಿ ಖಮೇನಿ ಅವರನ್ನು ಹತ್ಯೆಗೈದಿದೆ. ಇದಕ್ಕೆ ಪ್ರತೀಕಾರವಾಗಿ ಇರಾನ್ ಸೇನಾ ದಾಳಿಯನ್ನು ಮುಂದುವರಿಸಿದೆ. ಇಸ್ರೇಲ್ ಮತ್ತು ಅಮೆರಿಕ ಸೇನಾ ನೆಲೆಗಳ ಮೇಲೆ ಡ್ರೋಣ್ ಮತ್ತು ಕ್ಷಿಪಣಿ ದಾಳಿಯನ್ನು ಇರಾನ್ ಮುಂದುವರಿಸಿದೆ. ಇದರಿಂದಾಗಿ ದುಬೈ ಮತ್ತು ದೋಹಾಗಳಿಗೆ ನಾಗರಿಕ ವಿಮಾನಯಾನ ನಿಂತಿದ್ದು ಜಾಗತಿಕ ವ್ಯವಹಾರ ಸ್ಥಗಿತಗೊಂಡಿದೆ.
.ಅಕ್ಷರ ದಾಮ್ಲೆ ಅವರ ಅಂತರಂಗ ಅಂಕಣ: ಪ್ಯಾನಿಕ್ ಅಟ್ಯಾಕ್ಗೆ ಪರಿಹಾರವೇನು?.Bollywood: ಬಹು ನಿರೀಕ್ಷಿತ ‘ರಾಮಾಯಣ–2’ ಚಿತ್ರೀಕರಣ ಪ್ರಾರಂಭ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.