ವಾಷಿಂಗ್ಟನ್: ಶ್ವೇತಭವನದ ಸಮೀಪ ಗುಂಡು ಹಾರಿಸಿದ ಬಂದೂಕುಧಾರಿಯನ್ನು ಅಮೆರಿಕದ ಸೀಕ್ರೆಟ್ ಏಜೆಂಟ್ಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ.

ಈ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿದ್ದರು. ಆದರೆ ಈ ಘಟನೆಯಿಂದ ಅವರ ದೈನಂದಿನ ಕೆಲಸಗಳಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ಸೀಕ್ರೆಟ್ ಸರ್ವೀಸ್ ಸಂವಹನ ಮುಖ್ಯಸ್ಥ ಅಂಥೋನಿ ಗುಗ್ಲಿಯೆಲ್ಮಿ ತಿಳಿಸಿದ್ದಾರೆ.

ಶನಿವಾರ ಸಂಜೆ ಘಟನೆ ನಡೆದಿದೆ.

ಈ ಕುರಿತು ಮಾಹಿತಿ ನೀಡಿರುವ ಅಮೆರಿಕದ ಸೀಕ್ರೆಟ್ ಸರ್ವೀಸ್, ‘ಪೆನ್ಸಿಲ್ವೇನಿಯಾ ಅವೆನ್ಯೂ ಪ್ರದೇಶದಲ್ಲಿ ಶನಿವಾರ ಸಂಜೆ 6ಗಂಟೆಗೆ ಒಬ್ಬ ವ್ಯಕ್ತಿ ಬ್ಯಾಗ್ನಿಂದ ಬಂದೂಕು ತೆಗೆದು ಗುಂಡು ಹಾರಿಯಲು ಪ್ರಾರಂಭಿಸಿದನು’.

‘ತಕ್ಷಣವೇ ಸೀಕ್ರೆಟ್ ಸರ್ವಿಸ್ ಪೊಲೀಸರು ಪ್ರತಿ ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಗುಂಡಿನ ಚಕಮಕಿ ನಡೆಯಿತು. ಶಂಕಿತ ಬಂದೂಕುಧಾರಿಯನ್ನು ಆಸ್ಪತ್ರೆ ಸಾಗಿಸಿದರೂ ಅಲ್ಲಿ ಮೃತಪಟ್ಟಿರುವುದಾಗಿ ದೃಢೀಕರಿಸಲಾಯಿತು. ಓರ್ವ ವ್ಯಕ್ತಿಗೆ ಗುಂಡು ತಗುಲಿದೆ’ ಎಂದು ತಿಳಿಸಿದೆ.

‘ಭದ್ರತಾ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ. ಈ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷರು ಶ್ವೇತಭವನದಲ್ಲಿದ್ದರು. ಆದರೆ ಅವರ ಕಾರ್ಯ ನಿರ್ವಹಣೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ’ ಎಂದು ತಿಳಿಸಿದೆ.

‘ಈ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಲಾಗುತ್ತದೆ. ಹೆಚ್ಚಿನ ಮಾಹಿತಿ ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದೆ.

‘ಪ್ರತ್ಯಕ್ಷದರ್ಶಿ, ಕೆನಡಾ ಮೂಲದ ಪ್ರವಾಸಿಯ ಪ್ರಕಾರ, ಪಟಾಕಿಯ ಸದ್ದಿನ ರೀತಿಯಲ್ಲಿ ಸುಮಾರು 20ರಿಂದ 25 ಬಾರಿ ಶಬ್ದ ಕೇಳಿಸಿತು. ಬಳಿಕ ಭಯಚಕಿತರಾಗಿ ಎಲ್ಲರೂ ಓಡಲು ಆರಂಭಿಸಿದರು’ ಎಂದು ತಿಳಿಸಿದ್ದಾರೆ.
.ಟ್ರಂಪ್ ಪರವಾಗಿ ಪ್ರಧಾನಿ ಮೋದಿಗೆ ಶ್ವೇತಭವನಕ್ಕೆ ಆಹ್ವಾನ ನೀಡಿದ ರೂಬಿಯೋ.ಇರಾನ್ ವಿರುದ್ಧ ಹೊಸದಾಗಿ ದಾಳಿ ನಡೆಸಲು ಡೊನಾಲ್ಡ್ ಟ್ರಂಪ್ ಗಂಭೀರ ಚಿಂತನೆ: ವರದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.