ಕಿನ್ಶಾಸಾ: ಕಾಂಗೋದಲ್ಲಿ ಎಬೋಲಾ ವೈರಸ್ಗೆ 88 ಮಂದಿ ಸಾವಿಗೀಡಾದ ಬೆನ್ನಲ್ಲೇ, ವಿಶ್ವ ಆರೋಗ್ಯ ಸಂಸ್ಥೆ ಅಂತರರಾಷ್ಟ್ರೀಯ ಆರೋಗ್ಯ ತುರ್ತುಸ್ಥಿತಿ ಘೋಷಿಸಿದೆ.

ರವಾಂಡ ಬೆಂಬಲಿತ ಎಂ23 ಬಂಡುಕೋರ ಸಂಘನೆಯ ನಿಯಂತ್ರಣದಲ್ಲಿರುವ ಗೋಮಾದ ಡಿಆರ್ಸಿ ನಗರದಲ್ಲಿಯೂ ಪ್ರಕರಣಗಳು ಪತ್ತೆಯಾಗಿದ್ದು, ಇನ್ನಷ್ಟು ಹರಡುವ ಭೀತಿ ಹೆಚ್ಚಿದೆ.
.ಎಬೋಲಾ ವೈರಾಣು ಸೋಂಕು ಪತ್ತೆ: ಕಾಂಗೊದಲ್ಲಿ 65 ಜನ ಸಾವು.
ಈವರೆಗೆ 88 ಮಂದಿ ಮೃತಪಟ್ಟಿದ್ದು, 336ಕ್ಕೂ ಹೆಚ್ಚು ಸಾಂಕ್ರಾಮಿಕ ರಕ್ತಸ್ರಾವ ಜ್ವರದ ಶಂಕಿತ ಪ್ರಕರಣಗಳು ವರದಿಯಾಗಿವೆ ಎಂದು ಆಫ್ರಿಕಾದ ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರ ಹೇಳಿದೆ.

ಗೋಮಾದಲ್ಲಿ ವ್ಯಕ್ತಿಯೊಬ್ಬರಿಗೆ ಎಬೋಲಾ ಇರುವುದನ್ನು ಪ್ರಯೋಗಾಲಯ ಖಚಿತಪಡಿಸಿದೆ. ಅವರ ಪತಿ ಬುನಿಯಾದಲ್ಲಿ ಎಬೋಲಾದಿಂದಾಗಿ ಸಾವಿಗೀಡಾಗಿದ್ದರು.

ವರದಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸಸ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

‘ಈ ಸಾಂಕ್ರಾಮಿಕ ರೋಗವು ಅಂತರರಾಷ್ಟ್ರೀಯ ಮಟ್ಟದಲ್ಲಿ ಆತಂಕ ಉಂಟುಮಾಡುವ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯಾಗಿದೆ ಎಂದು ನಾನು ನಿರ್ಧರಿಸಿದ್ದೇನೆ’ ಎಂದು ಗೆಬ್ರೆಯೆಸಸ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ
.ಎಬೊಲಾ ಮಾದರಿಯ ಹೊಸ ‘ಮರ್ಬರ್ಗ್' ವೈರಾಣು ಪತ್ತೆ: ಇಬ್ಬರು ರೋಗಿಗಳು ಮೃತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.